ಬಹುಪಾಲು ಆಹಾರ ಕಸದ ಪಾಲು: ವಿಷಾದ
ಹಾಸನ: ಬೆಂಗಳೂರು ನಗರವೊಂದರಲ್ಲೇ ಪ್ರತಿ ವರ್ಷ 850 ಕೋಟಿ ರು. ಮೌಲ್ಯದ ಆಹಾರ ಕಸದ ಪಾಲಾಗುತ್ತದೆ ಎಂದು ಶಂಭುಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಪುಷ್ಪಾರವಿ ನ್ಯಾಷನಲ್ ಐಟಿಐ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ತಾಲೂಕಿನ ದುದ್ದ ಹೋಬಳಿಯ ಅರಸೀಹಳ್ಳಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.
ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಆಹಾರಕ್ಕೆ ಹಾಹಾಕಾರ ಉಂಟಾಗುತ್ತದೆ. ಬೆಳೆ ಬೆಳೆಯುವ ಭೂಮಿ ಕಡಿಮೆಯಾಗುತ್ತಿದೆ, ಜತೆಗೆ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಅವರು ತೀವ್ರ ಆತಂಕ ವ್ಯಕ್ತಪಡಿಸಿದರು. ಜನಸಂಖ್ಯೆ ನಿಯಂತ್ರಿಸಬೇಕು: ಭಾರತದಲ್ಲಿ ವಿದ್ಯುತ್ ಬೇಡಿಕೆ ಎಷ್ಟಿದೆ, ಉತ್ಪಾದನೆ ಎಷ್ಟಾಗುತ್ತಿದೆ, ಕೊರತೆ ಎಷ್ಟಿದೆ ಹಾಗೂ ಇದಕ್ಕೆಲ್ಲ ಮೂಲ ಕಾರಣ ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಇದಕ್ಕೆ ಪರಿಹಾರ ಎಂದರೆ ಒಂದು ಕುಟುಂಬಕ್ಕೆ ಒಂದೇ ಮಗು ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಜನಸಂಖ್ಯೆ ಹೆಚ್ಚಳದಿಂದ ವಿದ್ಯುತ್ ಬೇಡಿಕೆ ಜಾಸ್ತಿಯಾಗುತ್ತಿದೆ. ಬೇಡಿಕೆ ತಕ್ಕ ಹಾಗೆ ವಿದ್ಯುತ್ ಉತ್ಪಾದನೆಗೆ ನೀರು ಬೇಕು. ಆದರೆ, ಇಂದಿನ ದಿನಗಳಲ್ಲಿ ಮಳೆ ಕಡಿಮೆ ಬೀಳುತ್ತಿದೆ ಹಿಂದೆ ವರ್ಷಕ್ಕೆ 125 ಸೆಂ.ಮೀ. ಮಳೆ ಬೀಳುವ ಜಾಗದಲ್ಲಿ ಈಗ ಕೇವಲ 12 ಸೆಂ.ಮೀ ಮಳೆ ಬೀಳುತ್ತಿದೆ. ನೆಲದಲ್ಲಿ ಅಂತರ್ಜಲ ಬತ್ತಿ ಹೋಗುತ್ತಿದೆ. 800 ರಿಂದ 1000 ಅಡಿ ಕೊರೆದರು ನೀರು ಬರುತ್ತಿಲ್ಲ. ಕಾರಣ ಹಿಂದೆ ಬಿದ್ದ ಮಳೆ ನೀರನ್ನು ನಾವು ವೈಜ್ಞಾನಿಕವಾಗಿ ನೀರನ್ನು ಭೂಮಿಯಲ್ಲಿ ಇಂಗಿಸುವ ಕೆಲಸ ಮಾಡಿಲ್ಲ ಎಂದು ಹೇಳಿದರು. ಮನುಷ್ಯನ ದುರಾಸೆ ನಗರೀಕರಣ, ಆಧುನಿಕರಣ, ವಿದ್ಯುತ್ ಸೇರಿದಂತೆ ಇನ್ನು ಅನೇಕ ರೀತಿಯಲ್ಲಿ ಉತ್ಪಾದನೆ ಮಾಡಬಹುದು ಎಂದು ಕಿವಿಮಾತು ಹೇಳಿದರು.
ಕಿರಿಯ ತರಬೇತಿ ಅಧಿಕಾರಿ ಶಂಕರ್ ಮಾತನಾಡಿದದರು. ಪ್ರಾಶುಪಾಲ ಬಿ.ಎನ್. ರೇವಣ್ಣಗೌಡ, ಸತೀಶ್ ಶಿಬಿರಾಧಿಕಾರಿ ಸಿ.ವಿ.ಚಂದ್ರೇಗೌಡ, ನಟರಾಜ್ ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಮೌಲ್ಯಯುತ ಶಿಕ್ಷಣ ಅಗತ್ಯ: ಡಾ.ನಲ್ಲೂರು ಪ್ರಸಾದ್
ಹೆತ್ತೂರು (ಸಕಲೇಶಪುರ ತಾ.): ಕೇವಲ ಪುಸ್ತಕದಲ್ಲಿನ ವಿಚಾರಗಳನ್ನು ಕಲಿಯುವ ಶಿಕ್ಷಣಕ್ಕಿಂತ ಮೌಲ್ಯಯುತ ಶಿಕ್ಷಣ ಕೊಡುವ ಅಗತ್ಯ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಹೇಳಿದ್ದಾರೆ.
ಹೆತ್ತೂರಿನಲ್ಲಿ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಅವರು ರಾಷ್ಟ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದವರು ಖಾಸಗಿ ಶಾಲೆಗಳಲ್ಲಿ ಕಲಿತವರಲ್ಲ. ಸರ್ಕಾರಿ ಶಾಲೆಗಳಲ್ಲಿ ಓದಿದವರೆ, ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಹೆತ್ತೂರಿನ ಈ ಶಾಲೆಯಲ್ಲಿ ಓದಿದವರು ದೇಶ ವಿದೇಶಗಳಲ್ಲಿಯೂ ತಮ್ಮ ಪ್ರಭುತ್ವ್ನ ಮೆರೆದಿದ್ದಾರೆ. ಇದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಕೇವಲ ಪಠ್ಯ ಪುಸ್ತಕಗಳನ್ನು ಓದುವುದರಿಂದ ಎಂಜಿನಿಯರ್, ವೈದ್ಯರು ಹಾಗೂ ಇತರೆ ಹುದ್ದೆಗಳನ್ನು ಪಡೆಯ ಬಹುದು. ಒಬ್ಬ ಕಲಾವಿದ, ಸಾಹಿತಿ ಹೀಗೆ ಸಮಾಜದ ವಿವಿಧ ವರ್ಗಗಳಲ್ಲಿ ಗುರುತಿಕೊಳ್ಳುವಂತಹ ಶಿಕ್ಷಣವು ದೊರೆಯುವಂತಾಗಬೇಕೆಂದು ಆಶಿಸಿ, ಇಂಗ್ಲಿಷ್ ಕಲಿಯಬಾರದೆಂಬುದು ತಮ್ಮ ವಾದ ಅಲ್ಲ. ಕನ್ನಡದೊಂದಿಗೆ ಇಂಗ್ಲಿಷ್ನ್ನು ವ್ಯವಹಾರಿಕ ಭಾಷೆಯಾಗಿ ಕಲಿಯ ಬೇಕೆಂದು ನುಡಿದರು. ಸುವರ್ಣ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಎಚ್.ಎಂ. ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹೆತ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸೋಮ ಶೇಖರ್, ಪ್ರೌಢ ಶಾಲಾ ವಿಭಾಗ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಹರ್ಷ, ಶಿಕ್ಷಕ ರಾಮಚಂದ್ರ ಮೊದಲಾದವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ಕ್ದರು.