ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೆಪಿಎಸ್‌ಎಸ್ ಪದಾಧಿಕಾರಿಗಳ ಆಯ್ಕೆ

Srinivasa Murthy VN
Updated On : 18 Mar 2013, 10:23 am

ಅರಸೀಕೆರೆ: ಕರ್ನಾಟಕ ಪರಿಶಿಷ್ಟ ಜಾತಿ, ವರ್ಗಗಳ ಸಂಘಟನಾ ಸಮಿತಿ (ಕೆಪಿಎಸ್‌ಎಸ್) ತಾಲೂಕು ಘಟಕದ ಪುನರ್ ರಚನೆ ಕಾರ್ಯಕ್ರಮವನ್ನು  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.
50 ರಿಂದ 60 ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷರಾಗಿ  ಮಲದೇವಿಹಳ್ಳಿ ಟಿ.ಆರ್. ದೇವರಾಜ್, ಉಪಾಧ್ಯಕ್ಷರಾಗಿ ಕೆಲ್ಲಂಗೆರೆ ಮಲ್ಲೇಶ ಅವರನ್ನು ನೇಮಕ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಅರಸೀಕೆರೆ ತಾಲೂಕು ಸಂತೋಷ, ಸಂಘಟನೆ ಕಾರ್ಯದರ್ಶಿಯಾಗಿ ಕೆಲ್ಲಂಗೆರೆ ಸುರೇಶ್, ಖಜಾಂಚಿಯಾಗಿ ಕೆಲ್ಲಂಗೆರೆ ಲೋಕೇಶ್ ಅವರನ್ನು ಆಯ್ಕೆ ಮಾಡಲಾಯಿತು.
ಹೋಬಳಿ ಮಟ್ಟದ ಅಧ್ಯಕ್ಷರಾಗಿ ಪಾಪಣ್ಣ, ಉಪಾಧ್ಯಕ್ಷರಾಗಿ ತಿರುಪತಿಹಳ್ಳಿ ಮಂಜು, ಪ್ರಧಾನ ಕಾರ್ಯದರ್ಶಿಯಾಗಿ ತಿಮ್ಮಯ್ಯ, ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜು, ಸಹ ಕಾರ್ಯದರ್ಶಿಯಾಗಿ ಮಡಿವಾಳ ದಾಸಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಮೈಸೂರು ವಿಭಾಗೀಯ ಅಧ್ಯಕ್ಷ ಕೆ.ವೈ.ಜಗದೀಶ್ ಅರಸೀಕೆರೆ ತಾಲೂಕು ಅಧ್ಯಕ್ಷರಿಗೆ ಮಾಲಾರ್ಪಣೆ ಮಾಡಿದರು. ಹೋಬಳಿ ಅಧ್ಯಕ್ಷ ಪಾಪಣ್ಣ ಅವರನ್ನು ಹಾಸನ ತಾಲೂಕು ಅಧ್ಯಕ್ಷ ಎಚ್.ಆರ್. ಮಧುಸೂದನ್ ಮಾಲಾರ್ಪಣೆ ಮಾಡಿದರು. ನಂತರ ಅಂಬೇಡ್ಕರ್ ಅವರ ವಿಚಾರವನ್ನು ಹಾಗೂ ಸಂಘಟನೆ ವಿಚಾರವನ್ನು ಕೆಪಿಎಸ್‌ಎಸ್ ಮುಖಂಡ ಇರಕರವಳ್ಳಿ ರಾಜು ಮಾತನಾಡಿದರು.  

ಇಂದು ಎವಿಕೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ
ಹಾಸನ: ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಮಾ. 19 ರಂದು  ಮಧ್ಯಾಹ್ನ 12.30ಕ್ಕೆ  ಕಾನೂನು ಅರಿವು ಸಂಘ, ಕಲಾ ಸಂಘ ಮತ್ತು ಎ.ವಿ.ಕಾಂತಮ್ಮ ಮಹಿಳಾ ಕಾಲೇಜು ವಿದ್ಯಾರ್ಥಿ  ಸಂಘದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಏರ್ಪಡಿಸಲಾಗಿದೆ.  ವಕೀಲ  ನಟರಾಜ್, ಹರೀಶ್‌ಬಾಬು  ಹೆಣ್ಣುಮಕ್ಕಳ ಆಸ್ತಿಯ ಹಕ್ಕು ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಲಿದ್ದಾರೆ. ಡೈರಿ ಉದ್ಯಮಿ ಪ್ರತಿಭಾ ಅವರನ್ನು ಸನ್ಮಾನಿಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement