ವಂಚನೆ ಆರೋಪ: ಮೈಕ್ರೋ ಇನ್ಸೂರೆನ್ಸ್ ಕಚೇರಿಗೆ ಬೀಗ ಹಾಕಿ ಸೇನೆ ಪ್ರತಿಭಟನೆ
ಕ.ಪ್ರ.ವಾರ್ತೆಚನ್ನರಾಯಪಟ್ಟಣ ಮಾ.18
ಜೀವವಿಮಾ ನಿಗಮದ ಮೈಕ್ರೋ ಇನ್ಸೂರೆನ್ಸ್ ಕಂಪನಿಗೆ ಕಟ್ಟಿದ ಹಣವನ್ನು ಕಂಪನಿ ನೌಕರರು ವಂಚಿಸಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು. ಜಿಲ್ಲಾ ಅಧ್ಯಕ್ಷ ಹೇಮಂತ್ಕುಮಾರ್ ನೇತೃತ್ವದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ಪಾಲಿಸಿ ಹೊಂದಿದ್ದ ಗ್ರಾಹಕರು ಹಾಗೂ ಏಜಂಟರು ಕಚೇರಿಯಲ್ಲಿ ತಾವು ಕಟ್ಟಿದ್ದ ಹಣ ವಾಪಸ್ ನೀಡುವಂತೆ ಒತ್ತಾಯಿಸಿದಾಗ ಸಮರ್ಪಕ ಉತ್ತರ ಸಿಗದಿದ್ದಾಗ ಬೀಗ ಹಾಕಿ ಪ್ರತಿಭಟಿಸಿದರು.
ಮೈಕ್ರೋ ಇನ್ಸೂರೆನ್ಸ್ ಕಚೇರಿಯಲ್ಲಿ ಉಳಿತಾಯ ಮಾಡಿದರೆ ಪಾಲಿಸಿದಾರರಿಗೆ ವಿಮಾ ಸೌಲಭ್ಯ ಸಿಗುವ ಜತೆಗೆ 5 ವರ್ಷದಲ್ಲಿ ಕಟ್ಟಿದ ಹಣ ದ್ವಿಗುಣವಾಗುತ್ತದೆಯಲ್ಲದೆ
ಇದೊಂದು ಸರ್ಕಾರದ ಮಾನ್ಯತೆ ಪಡೆದ ಕಂಪನಿಯಾಗಿದೆಯೆಂದು ನಂಬಿಸಿದ ಕಂಪನಿಯವರ ಒತ್ತಾಯಕ್ಕೆ ಮಣಿದು ಸಾವಿರಾರು ಮಂದಿ ಹಣ ಕಟ್ಟಿದ್ದು ಅದನ್ನು ನೌಕರರು ಗುಳುಂ ಮಾಡಿದ್ದಾರೆ. ಈ ಬಗ್ಗೆ ನೂರಾರು ಮಂದಿ ತಮ್ಮ ಹಣ ವಾಪಸ್ ನೀಡುವಂತೆ ಒತ್ತಾಯಿಸಿದಾಗ ಅದಕ್ಕೆ ಉತ್ತರ ನೀಡಲಾಗದೆ ಅಲ್ಲಿಂದ ಪರಾರಿಯಾದ ಅಧಿಕಾರಿಗಳನ್ನು ಬಂಧಿಸುವಂತೆ ಪೋಲಿಸರಿಗೆ ದೂರು ನೀಡಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ರೇವಣ್ಣ ಭೇಟಿ
ಕನ್ನಡಪ್ರಭವಾರ್ತೆ ಹಾಸನ ಮಾ. 18
ಫೆಬ್ರವರಿ ವೇತನ ನೀಡುವಂತೆ ಆಗ್ರಹಿಸಿ ಸೋಮವಾರದಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಾರಂಭಿಸಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸೋಮವಾರ ಸಂಜೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಿದರು. ಪ್ರತಿಭಟನಾನಿರತರೊಂದಿಗೆ ಮಾತನಾಡಿದ ರೇವಣ್ಣ, ಈ ಕೂಡಲೆ ಶಿಕ್ಷಕರ ಸಂಬಳ ನೀಡಬೇಕು. ಎರಡು ದಿವಸದಲ್ಲಿ ಬೇಡಿಕೆ ಈಡೇರಿಸದಿದ್ದರೇ ಗುರುವಾರ ಸಿಎಂ ಮನೆ ಮುಂದೆ ಧರಣಿ ಮಾಡುವುದಾಗಿ ಎಚ್ಚರಿಸಿದರು. ಈ ವೇಳೆ ಆಗಮಿಸಿದ ಡಿಡಿಪಿಐ ಬಸವರಾಜು ಅವರನ್ನು ರೇವಣ್ಣ ಪ್ರಶ್ನಿಸಿ, ಕೆಲ ದಾಖಲೆಯನ್ನು ಪರಿಶೀಲಿಸಿ, ತಕ್ಷಣ ಸಂಬಳ ನೀಡಲು ಒತ್ತಾಯಿಸಿದದರು. ಆಗ ಡಿಡಿಪಿಐ ಮಾತನಾಡಿ ಈ ಹಿಂದೆ ಬಜೆಟ್ನಲ್ಲಿ ತಪ್ಪು ಮಾಡಲಾದ್ದರಿಂದ ಇಂತಹ ಸಮಸ್ಯೆ ಎದುರಾಗಿದೆ. ಹಣ ನೀಡಲು ನಮಗೆ ಅಧಿಕಾರವಿಲ್ಲ ಎಂದು ಹೇಳಿದರು.ಶಾಸಕ ಎಚ್.ಎಸ್. ಪ್ರಕಾಶ್, ಜಿಪಂ ಅಧ್ಯಕ್ಷ ಅಂಬಿಕಾ ರಾಮಣ್ಣ ಇದ್ದರು.