ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಒಂದೇ ಭವನಕ್ಕೆ 2 ಬಾರಿ ಉದ್ಘಾಟನೆ: ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ

Srinivasa Murthy VN
Updated On : 20 Mar 2013, 11:45 am

ಕ.ಪ್ರ.ವಾರ್ತೆ ರಾಮನಾಥಪುರ ಮಾ. 20
ಸಮೀಪದ ಕಾಳೇನಹಳ್ಳಿಯ ನೂತನ ಪಂಚಾಯ್ತಿ ಭವನವನ್ನು ಮಂಗಳವಾರ ಶಾಸಕ ಮಂಜು ಉದ್ಘಾಟಿಸಿದರು. ಆದರೆ ಈ ಭವನವನ್ನು ಎರಡನೇ ಬಾರಿ ಉದ್ಘಾಟಿಸಲಾಗುತ್ತಿದೆ ಎಂದು ಜೆಡಿಎಸ್ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು.
ಜೆಡಿಎಸ್ ಮುಖಂಡ ಸಂತೋಷಗೌಡ, ಎಚ್.ಎಸ್.ಶಂಕರ್, ಕೆ.ಪಿ. ಯೋಗಣ್ಣ ಅವರನ್ನು ಒಳಗೊಂಡ  ಕಾರ್ಯಕರ್ತರು ಧಿಕ್ಕಾರ ಕೂಗಿದರು.
ಹಿನ್ನೆಲೆ: ಮಂಗಳವಾರ ಉದ್ಘಾಟನೆಯಾದ ಕಾಳೇನಹಳ್ಳಿ ಪಂಚಾಯಿತಿ ನೂತನ ಭವನ ಸಾಕಷ್ಟು ವಿವಾದಕ್ಕೆ ಈಡಾಗಿತ್ತು. ಕಾಳೇನಹಳ್ಳಿ ಪಂಚಾಯಿತಿ 11 ಜೆಡಿಎಸ್ ಹಾಗೂ 7 ಕಾಂಗ್ರೆಸ್ ಸದಸ್ಯರನ್ನು ಒಳಗೊಂಡಿದ್ದು ಹಿಂದೆ ಇದ್ದ ಪಂಚಾಯ್ತಿ ಅಧ್ಯಕ್ಷ ಕೆ.ಪಿ.ಯೋಗಣ್ಣ ಕಳೆದ ಡಿಸೆಂಬರ್ 20 ರಂದು ಪಂಚಾಯ್ತಿ ನೂತನ ಭವನವನ್ನು ಉದ್ಘಾಟಿಸಿದ್ದು ಈ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು.
ಈ ವಿಚಾರವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿ ಕೊನೆಗೆ ಉದ್ಘಾಟನೆಯಾದ ನೂತನ ಪಂಚಾಯ್ತಿ ಭವನಕ್ಕೆ ಬೀಗ ಜಡಿದು ಪೊಲೀಸ್ ಪಹರೆ ಹಾಕಲಾಗಿತ್ತು. ಮರು ಮದುವೆಗೆ ಸಿದ್ದಗೊಂಡ ವಧುವಿನಂತೆ ಶಾಸಕರಿಂದ ಎರಡನೆ ಬಾರಿ ಉದ್ಘಾಟನೆಯಾಗುತ್ತಿರುವ ನೂತನ ಪಂಚಾಯಿತಿ ಭವನದ ಬಗ್ಗೆ  ಜೆಡಿಎಸ್ ಕಾರ್ಯಕರ್ತರು ಅಸಮಧಾನ ವ್ಯಕ್ತಪಡಿಸಿದರು. ಕೊನೆಗೆ ಬಾರಿ ಪೊಲೀಸ್ ಬಂದೋಬಸ್ತ್ ನಡುವೆ ಅಂತೂ ಎರಡನೇ ಬಾರಿಗೆ ಉದ್ಘಾಟನಾ ಕಾರ್ಯಕ್ರಮವೂ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement