ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಥಾಕೀರ್ತನ ಕಲಾವಿದೆ ಕಾವ್ಯಶ್ರೀಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ

Srinivasa Murthy VN
Updated On : 20 Mar 2013, 11:46 am

ಕ.ಪ್ರ.ವಾರ್ತೆ ಹೊಳೆನರಸೀಪುರ ಮಾ. 20
ಇಲ್ಲಿನ ಖಾಸಗಿ ಕಾಲೇಜಿನ ಉಪನ್ಯಾಸಕಿ ಹಾಗೂ ಕಥಾಕೀರ್ತನ ಕಲಾವಿದೆ ಕೆ.ಕಾವ್ಯಶ್ರೀಕೃಷ್ಣ ಅವರ ಕಲಾ ಕ್ಷೇತ್ರದ ಅನುಪಮ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ 2011-12ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದೆ.
ಈಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಶೆಟ್ಟರ್ ಅವರು ಕಾವ್ಯಶ್ರೀಕೃಷ್ಣ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕನ್ನಡದಲ್ಲಿ ಎಂ.ಎ ಮತ್ತು ಎಂ.ಇಡಿ,  ಸ್ನಾತಕೋತ್ತರ ಪದವಿ ಪಡೆದಿರುವ ಕಾವ್ಯಶ್ರೀಕೃಷ್ಣ ಅವರು ಸಂಸ್ಕೃತದಲ್ಲೂ ಪ್ರಥಮ ಮತ್ತು ಕಾವ್ಯ ಪದವಿ ಪಡೆದಿದ್ದಾರೆ.
ರಾಘವ ವಿಠಲ ಎಂಬ ಕಾವ್ಯನಾಮದೊಂದಿಗೆ ಕಥಾಕೀರ್ತನ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಇವರು ಕಥಾಕೀರ್ತನಕ್ಕೆ ಸಂಬಂಧಿಸಿದಂತೆ ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ 1999ರಲ್ಲಿ ಸೀನಿಯರ್ ವಿಭಾಗದಲ್ಲಿ ಶಿಷ್ಯವೇತನ ಪಡೆದಿದ್ದಾರೆ. ಇದುವರೆವಿಗೂ ಹಲವಾರು ಪ್ರಶಸ್ತಿ, ಶಿಷ್ಯವೇತನ, ಬಿರುದು ಹಾಗೂ ಫೆಲೋಷಿಪ್ ಪಡೆದಿರುವ ಕಾವ್ಯಶ್ರೀಕೃಷ್ಣ ಅವರು ರಾಜ್ಯದ ನಾನಾ ಭಾಗಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.
ತಮ್ಮ ಪತಿ ಇಲ್ಲಿನ ಸಹ್ಯಾದ್ರಿ ಕಲಾ ಬಳಗದ ಪ್ರತಿಭಾವಂತ ಕಲಾವಿದ ಎಚ್.ಎನ್.ಕೃಷ್ಣ ಅವರ ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ಹೆಚ್ಚಿನ ಸಾಧನೆ ಕೈಗೊಳ್ಳಲು ಉತ್ಸುಕರಾಗಿರುವ ಕೆ.ಕಾವ್ಯಶ್ರೀಕೃಷ್ಣ ಅವರಿಗೆ 2011-12ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಲಭಿಸಿರುವ ಕಾರಣಕ್ಕೆ ಇಲ್ಲಿನ ವಚನ ಸಾಹಿತ್ಯ ಅಕಾಡೆಮಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ರಂಗ ಭೂಮಿ ಕಲಾವಿದರ ಸಂಘ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement