ಸ್ವ ಸಹಾಯ ಸಂಘದಿಂದ ಸಮುದಾಯದ ಅಭಿವೃದ್ಧಿ
ಕ.ಪ್ರ ವಾರ್ತೆ ಹಾಸನ ಮಾ.22
ಕೃಷಿ ಇಲಾಖೆ, ಹಾಸನ ಹಾಗೂ ಕಂದಲಿ ಕೃಷಿ ವಿಜ್ಞಾನ ಕೇಂದ್ರ ಆಶ್ರಯದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರೈತ ಶಕ್ತಿ ಗುಂಪು ರಚನೆ ಹಾಗೂ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಕಂದಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.
ಹಾಸನ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಲ್. ಮಂಜುನಾಥ್ ಉದ್ಘಾಟನೆನ ನೆರವೇರಿಸಿ, ಕೃಷಿಯಲ್ಲಿ ಮಹಿಳೆಯರ ಪಾತ್ರ ಹಾಗೂ ಸ್ವ ಸಹಾಯ ಸಂಘಗಳ ಮೂಲಕ ಸಮುದಾಯದ ಅಭಿವೃದ್ಧಿ ಬಗ್ಗೆ ತಿಳಿಸಿದರು. ಹಾಸನ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಬಿ. ಶಿವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಸ್ವಹಾಯ ಸಂಘಗಳು ಆರ್ಥಿಕ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ತಿಳಿಸಿದರು.
ಹಾಸನದ ವಿಜ್ಞಾನ ಕೇಂದ್ರ ಕಂದಲಿಯ ಕಾರ್ಯಕ್ರಮ ಸಂಯೋಜಕ ಡಾ.ಬಿ.ಎಸ್ ಬಸವರಾಜು ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರ, ಕಂದಲಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿದ್ದು ರೈತರು ಸಮಗ್ರ ಕೃಷಿ ಪದ್ಧತಿ ಅನುಸರಿಸಲು ಹಾಗೂ ಕೇಂದ್ರದಿಂದ ತಾಂತ್ರಿಕ ಮಾಹಿತಿ ಪಡೆಯಲು ತಿಳಿಸಿದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಹೆಚ್.ಕೆಂಪೇಗೌಡರವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ರೈತ ಶಕ್ತಿ ಗುಂಪುಗಳ ರಚನೆ ಹಾಗೂ ಅವುಗಳ ಕಾರ್ಯವೈಖರಿ, ಮಾರ್ಗಸೂಚಿ ಬಗ್ಗೆ ತಿಳಿಸಿದರು. ಮಂಡ್ಯದ ವಿಕಸನ ಸರ್ಕಾರೇತರ ಸಂಸ್ಥೆಯ ಮಹೇಶ್ಚಂದ್ರಗುರು ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ವಿಕಸನ ಸರ್ಕಾರೇತರ ಸಂಸ್ಥಯಡಿ ರಚನೆಯಾಗಿರುವ ಸ ಸ್ವಹಾಯ ಸಂಘಗಳ ಯಶೋಗಾಥೆಯ ಬಗ್ಗೆ ತಿಳಿಸುತ್ತಾ ಹಾಸನ ಜಿಲ್ಲೆಯಲ್ಲಿಯೂ ಸಹ ರೈತ ಶಕ್ತಿ ಗುಂಪುಗಳು ಯಶ್ವಸಿಯಾಗಿ ಮುನ್ನಡೆಯಲು ತಿಳಿಸಿದರು.
ಮಂಡ್ಯದ ಎಪಿಎಂಸಿಯ ಕಾರ್ಯದರ್ಶಿ ಮಹೇಶ್ ಅವರು ಕೃಷಿ ಹಾಗೂ ಸ್ವಸಹಾಯ ಸಂಘಗಳ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ರೈತ ಸಮುದಾಯಕ್ಕೆ ಇರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯ್ತಿ ಸಹಾಯಕ ಯೋಜನಾಧಿಕಾರಿ ಶಿವಣ್ಣ ಮಾತನಾಡಿ, ಸ್ವ ಸಹಾಯ ಸಂಘಗಳಿಗೆ ನಾನಾ ಇಲಾಖೆಗಳ ವತಿಯಿಂದ ಇರುವ ಸವಲತ್ತುಗಳ ಬಗ್ಗೆ ತಿಳಿಸುತ್ತಾ, ಸಂಘಗಳಲ್ಲಿ ಸಂಪನ್ಮೂಲ ಕ್ರೋಢೀಕರಣ ಹಾಗೂ ಆದಾಯ ಆಧಾರಿತ ಉತ್ಪನ್ನಗಳ ತಯಾರಿಕೆ ಬಗ್ಗೆ ಮಾಹಿತಿ ನೀಡಿದರು.
ಹಾಸನ ಆಕಾಶವಾಣಿಯ ವಿಜಯ್ ಅಂಗಡಿ ಮಾತನಾಡಿ, ವ್ಯಕ್ತಿಗತವಾಗಿ ಸ್ವ ಸಾಮರ್ಥ್ಯ ಬಲವರ್ಧನೆಗೊಳಿಸಿಕೊಂಡು ಆ ಮೂಲಕ ಸಮುದಾಯ ಹಾಗೂ ಸಮಾಜದ ಬಲವರ್ಧನೆ ಸಾಧ್ಯವಿದೆ ಎಂದು ತಿಳಿಸಿದರು. ಹಾಸನ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಎ.ಎಸ್. ಕೋಕಿಲಾ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ನಾನಾ ರೈತಶಕ್ತಿ ಗುಂಪುಗಳ ಸದಸ್ಯರು, ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿಗಳು, ತಾಂತ್ರಿಕ ವ್ಯವಸ್ಥಾಪಕ ಹಾಗೂ ಸ್ವ ಸಹಾಯ ಸಂಘಗಳ ರೈತ ಮಹಿಳೆಯರುಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.