ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಪಹೃತ ಉದ್ಯಮಿ ಮರಳಿ ಮನೆಗೆ

Srinivasa Murthy VN
Updated On : 25 Mar 2013, 12:02 pm

ಕ.ಪ್ರ.ವಾರ್ತೆ ಹಾಸನ ಮಾ 24
ಜಿಲ್ಲೆಯ ಆಲೂರು ತಾಲೂಕಿನ ಮಗ್ಗೆ ಗ್ರಾಮದ ದಿನಸಿ ಉದ್ಯಮಿ ಬೋಸ್ಲೆ ಮೆಂತರೋ ಎಂಬುವರನ್ನು ಅಪಹರಿಸಿ 50 ಲಕ್ಷ ರು. ಗಳಿಗೆ ಬೇಡಿಕೆ ಇಟ್ಟದ್ದ ಪ್ರಕರಣ ಭಾನುವಾರ ಸುಖಾಂತ್ಯ ಕಂಡಿದೆ.
ಬೆಂಗಳೂರು ಮೂಲದ ದುರ್ಷ್ಕಮಿಗಳ ತಂಡ ಸ್ಥಳೀಯನೊಬ್ಬನ ಕುಮ್ಮಕ್ಕಿನಿಂದ 3 ದಿನದ ಹಿಂದೆ ಜೋಸ್ಲೆ ಮೆಂತರೋ ಅವರನ್ನು ಅಪಹರಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ನೇತೃತ್ವದ ತಂಡ 2 ದಿನಗಳ ಒಳಗೆ ಜೋಸ್ಲೆ ಅವರನ್ನು ರಕ್ಷಿಸಿ, ಈ ಸಂಬಂಧ ಇಬ್ಬರನ್ನು ಬಂಧಿಸಿದೆ.  ಜೋಸ್ಲೆ ಮೆಂತೆರೋ ಆರ್ಥಿಕವಾಗಿ ಉತ್ತಮವಾಗಿದ್ದರು. ಸ್ಥಳೀಯ ದೀಪು ಎಂಬಾತನ ಕುಮ್ಮಕ್ಕಿನಿಂದ ಹಣದ ಆಸೆಗಾಗಿ ದುರ್ಷ್ಕಮಿಗಳ ತಂಡ ಕಳೆದ ಶುಕ್ರವಾರ ರಾತ್ರಿ ಜೋಸ್ಲೆ ಅವರನ್ನು ಅಪಹರಿಸಿತ್ತು. ಜೋಸ್ಲೆ ತಮ್ಮ ಅಂಗಡಿ ಬಂದ್ ಮಾಡಿ ಮನೆಗೆ ಬರುವುದನ್ನೇ ಕಾದು ಕುಳಿತಿದ್ದ ಅಪಹರಣಕಾರರ ತಂಡ, ಮನೆಯ ಮುಂದಿನ ರಸ್ತೆಯಲ್ಲೇ ಜೋಸ್ಲೆ ಅವರನ್ನು ಅಪಹರಿಸಿತ್ತು. ನಂತರ ಜೋಸ್ಲೆ ಪತ್ನಿಗೆ ಫೋನ್ ಮಾಡಿ ನಿಮ್ಮ ಪತಿ ಬೇಕಾದಲ್ಲಿ 50 ಲಕ್ಷ ರು. ಕೊಡಬೇಕು. ಇಲ್ಲದಿದ್ದರೆ ಕೊಲೆ ಮಾಡಲಾಗುವುದು ಎಂದು ದುರ್ಷ್ಕಮಿಗಳು ಬೆದರಿಕೆ ಹಾಕಿದ್ದರು. ಮೊದಲೇ ಕಾಡಾನೆ ಕಾಟದಿಂದ ಬೆದರಿರುವ ಮಗ್ಗೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅಪಹರಣ ಪ್ರಕರಣದಿಂದಾಗಿ ಮತ್ತಷ್ಟೂ ಬೆಚ್ಚಿ ಬೀಳುವಂತಾಯಿತು. ಕೇವಲ ದೊಡ್ಡ ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದ ಇಂಥ ಪ್ರಕರಣಗಳು, ಇದೀಗ ಗ್ರಾಮೀಣ ಭಾಗಕ್ಕೂ ವ್ಯಾಪಿಸಿರುವುದು ಗ್ರಾಮಸ್ಥರಲ್ಲಿ ಭಯ ಉಂಟುಮಾಡಿದೆ. ಘಟನೆ ನಡೆದ 2 ದಿನಗಳ ಅಂತರದಲ್ಲಿ ಪೊಲೀಸರು ಅಪಹರಣಕಾರರ ಬೆನ್ನಟ್ಟಿ ಚಿಕ್ಕಮಗಳೂರು ಜಿಲ್ಲೆ ಕಡೂರು ಬಳಿ ಜೋಸ್ಲೆರನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಕಾರ್ಯವೈಖರಿಯನ್ನು ಜನತೆ ಶ್ಲಾಘಿಸಿದ್ದಾರೆ. ಪ್ರಕರಣ ಸಂಬಂಧ ಉಳಿದ ಮೂವರ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ. ಜೋಸ್ಲೆ ಸುರಕ್ಷಿತವಾಗಿ ಮರಳಿರುವುದರಿಂದ ಕಳೆದೆರಡು ದಿನಗಳಿಂದ ಮನೆಯಲ್ಲಿ ಮತ್ತು ಸ್ಥಳೀಯರಲ್ಲಿ ಕವಿದಿದ್ದ ಆಂತಕದ ಕಾರ್ಮೋಡ ದೂರವಾಗಿದೆ.

'ವಿಶೇಷ ಆರ್ಥಿಕ ವಲಯದಲ್ಲಿ ರೇಲ್ವೆ ಸೌಲಭ್ಯದ ಅವಶ್ಯಕತೆ'
ಕ.ಪ್ರ.ವಾರ್ತೆ ಹಾಸನ ಮಾ 24
ಮೈಸೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿಯಲ್ಲಿ ವಾಣಿಜ್ಯ ಅಧ್ಯಯನ ವಿಭಾಗದ ವಾಣಿಜ್ಯ ಸಂಘ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಅಶ್ರಯದಲ್ಲಿ ವಾಣಿಜ್ಯ ಹಬ್ಬ ಅಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕಾವೇರಿ ಗ್ರಾನೈಟ್ ವ್ಯವಸ್ಥಾಪಕ ನಿರ್ದೇಶಕ ರವಿಪ್ರಕಾಶ್ ರೆಡ್ಡಿ ಮಾತನಾಡಿದರು. ಜಿಲ್ಲೆಯ ಎಲ್ಲಾ ಕಾಲೇಜುಗಳ ವಾಣಿಜ್ಯ ವ್ಯವಸ್ಥಾಪಕ ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷ ನಡೆಸುವ ನಾನಾ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ನಡೆಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಿಎಸ್‌ಎನ್‌ಎಲ್‌ನ ಸಹಾಯಕ ವ್ಯವಸ್ಥಾಪಕಿ ಶಾಂತಲ ಭಟ್ ಬಹುಮಾನ ವಿತರಣೆ ಮಾಡಿದರು.
ದೇವರಾಜ್, ಡಾ. ಯಶವಂತ ಡೋಂಗ್ರೆ ಮತ್ತು ಡಾ. ಕುಮಾರಸ್ವಾಮಿ ಹಾಗೂ ಗೌತಮ್ ಇದ್ದರು. ಜಿಲ್ಲೆಯ 21 ಕಾಲೇಜುಗಳ ವಿದ್ಯಾರ್ಥಿಗಳು ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು. ರಚನಾತ್ಮಕ ಜಾಹಿರಾತು ಸ್ಪರ್ಧೆಯಲ್ಲಿ ಬೇಲೂರಿನ ವೈಡಿಡಿ ಪ್ರಥಮ ದರ್ಜೆ ಕಾಲೇಜು - ಪ್ರಥಮ, ನಗರದ ಸಂತ ಫಿಲೋಮಿನ ಪ್ರಥಮ ದರ್ಜೆ ಕಾಲೇಜು - ದ್ವಿತೀಯ ಬಹುಮಾನ ಪಡೆಯಿತು. ಚರ್ಚಾ ಸ್ಪರ್ಧೆಯಲ್ಲಿ   ಪ್ರಥಮ ಸ್ಥಾನವನ್ನು ಸಂತ ಫಿಲೋಮಿನ ಪ್ರಥಮ ದರ್ಜೆ ಕಾಲೇಜಿನ ಕೀರ್ತನಾ ಹಾಗೂ  ದ್ವಿತೀಯ ಬಹುಮಾನ ಬೇಲೂರಿನ ಶಾಂತಲಾ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಚಂದ್ರಿಕಾ  ಪಡೆದರು.  ಕಾಮರ್ಸ್ ಮಾಸ್ಟರ್ ಕ್ವಿಜ್ ಪ್ರಥಮ ಬಹುಮಾನ ಎ.ವಿ.ಕೆ. ಕಾಲೇಜು ಹಾಗೂ, ದ್ವಿತೀಯ ಹೊಳೇನರಸಿಪುರದ ಪ್ರಥಮ ದರ್ಜೆ ಕಾಲೇಜು ಪಡೆಯಿತು. ನಗರದ ಸಂತ ಫಿಲೋಮಿನ ಪ್ರಥಮದರ್ಜೆ  ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪಾರಿತೋಷಕ ಗಳಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement