ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೋಬಳಿಯಲ್ಲಿ ಬಿಗಡಾಯಿಸಿದ ಸಮಸ್ಯೆ

Srinivasa Murthy VN
Updated On : 28 Mar 2013, 9:59 am

ಕ.ಪ್ರ.ವಾರ್ತೆ ಜಾವಗಲ್‌ ಮಾ. 28
ಹಿಂಗಾರು ಮಳೆಯ ಅಭಾವ ಮತ್ತು ನೀರು ಸಂಗ್ರಹಣೆ ವ್ಯವಸ್ಥೆ ಕೊರತೆಯಿಂದ ಹೋಬಳಿಯ ನೇರ್ಲಿಗೆ, ಕೋಳಗುಂದ, ಅರಕೆರೆ, ಬಂದೂರು ಹಂದ್ರಾಳು ಉಂಡಿಗನಾಳು ಕಲ್ಯಾಡಿ ಕರಗುಂದ ಕೆರೆ ಕಟ್ಟೆಗಳು ಬತ್ತಿ ನೀರಿನ ಕೊರತೆ ತೀವ್ರವಾಗಿ ಬಿಗಡಾಯಿಸಿವೆ.
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯದಿಂದ ಜಾನುವಾರುಗಳಿಗೆ ಮೇವಿನ ಅಭಾವ ಮುಂತಾದ ಹಲವು ಸಮಸ್ಯೆಗಳನ್ನು ರೈತರು ಅನುಭವಿಸುವಂತಾಗಿದೆ. ಬೇಸಿಗೆಯಲ್ಲಿ ಜನರಿಗೆ ಆಸರೆಯಾಗ ಬೇಕಾಗಿದ್ದ ಕೆರೆಗಳು ಭಣಗುಡುತ್ತಿವೆ.
ಕಳೆದ 5 ವರ್ಷಗಳಿಂದ ಮಳೆ ಇಲ್ಲದೆ ಕೆರೆಗಳೆಲ್ಲಾ ಬಿರುಕು ಬಿಟ್ಟಿವೆ. ಬರಗಾಲದ ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ.
 ಹೊಲ ತೋಟಗಳಲ್ಲಿ 300-400 ಅಡಿ ಕೊಳವೆ ಬಾವಿ ಕೊರೆದರು ನೀರು ಲಭ್ಯವಾಗುತ್ತಿಲ್ಲಾ. ಗ್ರಾಮೀಣ ಪ್ರದೇಶಗಳಲ್ಲಿ ಜನ ಮತ್ತು ಜಾನುವಾರುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಬರಗಾಲ ಬೆನ್ನು ಬಿಡದೆ ಕಾಡುತ್ತಿದೆ. ಮತ್ತೊಂದೆಡೆ ಮಳೆಯ ಅಭಾವದಿಂದ ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಈ ಹೋಬಳಿಯ ಕೆರೆಗಳಿಗೆ ಶಾಶ್ವತ ನೀರು ಕಲ್ಪಿಸ ಬೇಕೆಂದು ರೈತರು ಒತ್ತಾಯಿಸಿದ್ದಾರೆ.
ವಿದ್ಯುತ್ ಸಮಸ್ಯೆ:  ಇತ್ತೀಚಿನ ದಿನಗಳಲ್ಲಿ ದಿನಕ್ಕೆ 7 ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ರಾತ್ರಿಯ ವೇಳೆ 2 ಗಂಟೆಗೂ ಹೆಚ್ಚು ಸಮಯ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈಗ ಪರೀಕ್ಷಾ ಸಮಯವಾಗಿರುವುದರಿಂದ ತುಂಬಾ ತೊಂದರೆಯಾಗುತ್ತಿದೆ. ಮತ್ತು ಪಂಪ್ ಸೆಟ್ ಹೊಂದಿರುವ ರೈತರು ಜೀವನೋಪಾಯಕ್ಕೆ ತರಕಾರಿ ಬೆಳೆ ಮಾಡಿದ್ದು ಕೊಳವೆ ಬಾವಿಗಳಿಂದ ನೀರನ್ನು ಹಾಯಿಸಿ ಅವುಗಳನ್ನು ಉಳಿಸಿ ಕೊಳ್ಳಲು ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಸಾಧ್ಯವಾಗದೆ ನಿತ್ರಾಣಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement