ಹಾಸನ

ನಗರಕ್ಕೆ ಕುಡಿವ ನೀರು ಒದಗಿಸದಿದ್ದರೆ ಸಿಎಂ ನಿವಾಸ ಬಳಿ ಧರಣಿ: ಶಾಸಕ ಎಚ್ಚರಿಕೆ

ಕ.ಪ್ರ. ವಾರ್ತೆ೤ ಹಾಸನ೤ ಮಾ. 29
ನಗರದಲ್ಲಿ ಕುಡಿಯುವ ನೀರಿನ ತೀವ್ರ ತೊಂದರೆ ಉಂಟಾಗಿದ್ದು, ಜಲಾಶಯದಿಂದ ಕೆಐಎಡಿಬಿಗೆ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಒದಗಿಸುವ ನೀರಿನ ಭಾಗವನ್ನು ಬೇಸಿಗೆಯಲ್ಲಿ ನಗರಕ್ಕೆ ನೀಡುವಂತೆ ಮುಕ್ಯಮಂತ್ರಿ ಆದೇಶಿಸಿದ್ದಾರೆ. ಆದರೂ ಕೆಐಎಡಿಬಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಏ.1ರೊಳಗೆ ಕ್ರಮ ಕೈಗೊಳ್ಳದಿದ್ದರೆ ನಗರಸಭಾ ಸದಸ್ಯರೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸುವುದಾಗಿ ಶಾಸಕ ಎಚ್.ಎಸ್.ಪ್ರಕಾಶ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಕ್ಕೆ ಕುಡಿಯುವ ನೀರು ಒದಗಿಸಲು ಜಲಾಶಯದ ಮೂರನೇ ಜರಡಿ ಬ್ಲಾಕ್ ಆಗಿದೆ. ಇದರಿಂದ ನೀರಿನ ಪ್ರಮಾಣ ಕಡಿಮೆಯಾದಂತೆ ಮುಂದೆ ನಗರಕ್ಕೆ ನೀರು ಒದಗಿಸಲು ಬಹಳ ತೊಂದರೆ ಎದುರಾಗುತ್ತದೆ. ಕುಡಿಯುವ ನೀರನ್ನು ಒದಗಿಸಲು ಡ್ಯಾಂನಲ್ಲಿ ಮೂರು ಜರಡಿ (ಸ್ಟೈನರ್‌ಗಳನ್ನು ಅಳಪಡಿಸಲಾಗಿದೆ. ಈ ಜರಡಿಗಳ ಮೂಲಕ ನೀರು ಹರಿದು ಜಾಕ್‌ವೆಲ್ ಕೆಳ ಮಟ್ಟದ ನೀರೆತ್ತುವ ಯಂತ್ರಗಾರ) ಬಾವಿಗೆ ಸೇರಲಿದೆ.
  ಈ ಮೂಲಕ ನೀರನ್ನು ಮೇಲೆತ್ತಿ ನೀರು ಶುದ್ಧೀಕರಣ ಘಟನಕ್ಕೆ ನೀರು ಬರಲಿದೆ. ಅಲ್ಲಿ ನೀರು ಶುದ್ಧೀಕರಣಗೊಂಡು ನಂತರ ನಗರಕ್ಕೆ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಲಾಗುತ್ತದೆ.
ಮೂರನೇ ಜರಡಿ ಬ್ಲಾಕ್:    ಜಲಾಶಯದೊಳಗಿರುವ ಮೂರು ಜರಡಿಗಳ ಪೈಕಿ ಎರಡು ಜರಡಿಗಳಿಗಿಂತ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಮೂರನೇ ಜರಡಿಯಿಂದ ನೀರನ್ನು ಒದಗಿಸುವುದು ಅನಿವಾರ್ಯವಾಗಿದೆ. ಆದರೆ ಮೂರನೇ ಜರಡಿ ಬ್ಲಾಕ್ ಆಗಿರುವುದರಿಂದ ಸಮರ್ಪಕವಾಗಿ ನೀರು ಹರಿದು ಜಾಕ್‌ವೆಲ್‌ಗೆ ಸಂಗ್ರಹವಾಗುತ್ತಿಲ್ಲ. ಇದರಿಂದ ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ಕಷ್ಟ ಸಾಧ್ಯವಾಗಿದೆ ಎಂದು ಹೇಳಿದರು.
ಕೊನೆಯ ಜರಡಿಯೂ ಕಟ್ಟಿಕೊಂಡು ನೀರು ಜಾಕ್‌ವೆಲ್‌ಗೆ ಹರಿಯದ ಕಾರಣ ನಗರಸಭೆಯು ಜೆಸಿಬಿ ಯಂತ್ರಗಳ ಮೂಲಕ ಜಲಾಶಯದಿಂದ ಎರಡನೇ ಜರಡಿಯವರೆಗೆ ಟ್ರಂಚ್ ಒಡೆದು, ಅಲ್ಲಿ 10 ಅಡಿಗೂ ಹೆಚ್ಚು ಆಳ ಅಗೆದು ನೀರು ಹರಿಯುವಂತೆ ಮಾಡಿ, ಆಲ್ಲಿಂದ ನೀರನ್ನು ಮೋಟಾರ್ ಮೂಲಕ ಎರಡನೇ ಜರಡಿಗೆ ಹರಿಯುವಂತೆ ಪೈಪ್ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದೆ.
 ನಂತರ ಜರಡಿಯಿಂದ ನೀರು ಜಾಕ್‌ವೆಲ್‌ಗೆ ಬಾವಿಗೆ ಬಂದು ಅಲ್ಲಿಂದ ನೀರನ್ನು ಮೇಲೆತ್ತಿ ಪಂಪ್‌ಹೌಸ್‌ಗೆ ಸರಬರಾಜು ಮಾಡಲಾಗುತ್ತಿದೆ ಎಂದರು.
ಪ್ರತ್ಯೇಕ ಪೈಪ್‌ಲೈನ್:  ಹೇಮೆಯ ಒಡಲಿನಿಂದ ಕೆಐಎಡಿಬಿಗೆ 2 ಎಂಜಿಡಿ ನೀರನ್ನು ಪ್ರತ್ಯೇಕ ಪೈಪ್‌ಲೈನ್ ಒದಗಿಸಲಾಗುತ್ತಿದೆ. ಈ 2 ಎಂಜಿಡಿ ನೀರಿನ ಪೈಕಿ ಒಂದೂವರೆ ಎಂಜಿಡಿ ನೀರನ್ನು ಒದಗಿಸಲು ಅನುಮೋದಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಅದರಂತೆ ಮುಖ್ಯಮಂತ್ರಿಗಳು ಕೆಐಎಡಿಬಿ ಎಂಡಿ ಗೆ ನೀರು ಒದಗಿಸುವಂತೆ ಆದೇಶ ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಕೆಐಎಡಿಬಿ ಎಂಡಿ ಅವರು ಮುಖ್ಯಎಂಜಿನಿಯರ್‌ರಿಂದ ವರದಿ ತರಿಸಿಕೊಳ್ಳಲು ಸಾಧ್ಯವಾಗಿಲ್ಲ.
 ಅಷ್ಟೇ ಅಲ್ಲದೆ ಮುಖ್ಯ ಎಂಜಿನಿಯರ್ ಕನ್ನಡದಲ್ಲಿ ನಕ್ಷೆಯನ್ನು ಹಾಕಲು ಬರುವುದಿಲ್ಲ ಎಂಬ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಆದ್ದರಿಂದ ಏ.1ರೊಳಗೆ ಕೆಐಎಡಿಬಿ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಸಿಎಂ ಮನೆ ಮುಂದೆ ಹಾಗೂ ಕೆಐಎಡಿಬಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಶಾಸಕರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!

CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್​ಗೆ ಬಿಗ್ ಶಾಕ್; ಗಡಿಪಾರು ಸಾಧ್ಯತೆ

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ