ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಡಾನೆಗಳ ಪ್ರತ್ಯಕ್ಷ: ಭೀತಿಯಲ್ಲಿ ಗ್ರಾಮಸ್ಥರು

Srinivasa Murthy VN
Updated On : 1 Apr 2013, 12:21 pm

ಕ.ಪ್ರ.ವಾರ್ತೆ  ಅರಸೀಕೆರೆ ಮಾ 31-
ಬನ್ನೇರುಘಟ್ಟ ಕಾಡಿನಿಂದ ಆಹಾರ ಹುಡುಕುತ್ತಾ ನಾಡಿಗೆ ಬಂದ 3 ಕಾಡಾನೆಗಳು ತಾಲೂಕಿನ ಕೋಡಿಹಳ್ಳಿ, ಬೆಳಗುಂಬ, ಜ್ಯೋತಿಮಲ್ಲಾಪುರ ಹಾಗೂ ತಳಲೂರು ಸುತ್ತಮುತ್ತ ಕಾಣಿಸಿಕೊಂಡು ಈ ಭಾಗದ ಜನರನ್ನು ಭಯಭೀತರಾಗುವಂತೆ ಮಾಡಿದೆ.
ಬನ್ನೇರುಘಟ್ಟ ಕಾಡಿನಿಂದ ತುಮಕೂರು ಮಾರ್ಗವಾಗಿ ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು ಮಾರ್ಗವಾಗಿ ಬಂದಿರುವ ಈ ಆನೆಗಳು ಶನಿವಾರ ಸಂಜೆ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದ ಲಚ್ಚಾನಾಯ್ಕ ಎಂಬಾತನನ್ನು ಕೊಂದಿದ್ದು ಮತ್ತೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿವೆ. ಈ ಪುಂಡಾನೆಗಳು ನಂತರ ಅರಸೀಕೆರೆ ತಾಲೂಕಿನ ಗ್ರಾಮಾಂತರ ಪ್ರದೇಶದ ಸುತ್ತಮುತ್ತ ಲಗ್ಗೆ ಇಟ್ಟಿವೆ.
ಭಾನುವಾರ ಮುಂಜಾನೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕಾಡಾನೆಗಳನ್ನು ಕಂಡ ಸುತ್ತಮುತ್ತಲ ಗ್ರಾಮಸ್ಥರು ಭಯಭೀತರಾಗಿ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಇಲಾಖೆಯವರು ಅಪಾಯದ ಮುನ್ಸೂಚನೆ ಅರಿತು ಜನರನ್ನು ನಿಯಂತ್ರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ನಂತರ ತಳಲೂರು ಮಾರ್ಗವಾಗಿ ಕೋಡಿಹಳ್ಳಿಗೆ ಆಗಮಿಸಿದ ಆನೆಗಳ ಹಿಂಡು ಮಧ್ಯ ಮಧ್ಯ ಸಿಕ್ಕ ಬಾಳೆ ತೋಟ, ಮುಳ್ಳು ತಂತಿ ಕಂಬಗಳನ್ನು ಮುರಿದು ಜ್ಯೋತಿಮಲ್ಲಾಪುರ ಗ್ರಾಮಕ್ಕೆ ಲಗ್ಗೆ ಇಟ್ಟು ನೆರಳಿನ ಆಶ್ರಯದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಕುತೂಹಲಗೊಂಡ ಗ್ರಾಮಸ್ಥರು ಆನೆಗಳನ್ನು ಅಲ್ಲಿಂದ ಓಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವರ್ಷ ಒಂಟಿಸಲಗದ ದಾಳಿಯಿಂದ ತಾಲೂಕಿನಲ್ಲಿ ಮೂರು ಮಂದಿ ಮೃತ ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ತಿಪಟೂರು ವಲಯ ಅರಣ್ಯಾಧಿಕಾರಿ ಸತ್ಯನಾರಾಯಣ್ ಇದು ಆನೆ ಕಾರಿಡಾರ್ ಆಗಿದ್ದು ಕಾಡಿನಲ್ಲಿ ಆಹಾರ ಮತ್ತು ನೀರಿನ ಕೊರತೆ ಉಂಟಾದಾಗ ವರ್ಷದಲ್ಲಿ ಒಮ್ಮೊಮ್ಮೆ ಈ ಆನೆಗಳು ಈ ದಾರಿಯಲ್ಲಿ ಆಗಮಿಸುತ್ತಿವೆ. ಮನುಷ್ಯನ ಅತಿಯಾದ ದುರಾಸೆ ಹಾಗೂ ಅರಣ್ಯ ನಾಶವೇ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣವಾಗಿದೆ ಎಂದು ತಿಳಿಸಿದರು. ಸಂಭವನೀಯ ಅಪಾಯ ತಡೆಗಟ್ಟುವ ಉದ್ದೇಶದಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ನೆರವು ಪಡೆಯಲಾಗುತ್ತಿದೆ. ಗ್ರಾಮಸ್ಥರು ಸಂಯಮದಿಂದ ವರ್ತಿಸಬೇಕು. ಆನೆಗಳು ಸಂಜೆಯ ವೇಳೆಗೆ ಇಲ್ಲಿಂದ ಹೊರಡುವ ನಿರೀಕ್ಷೆ ಇದೆ.

ಜಯಲಲಿತಾ ದುರಾಸೆಗೆ ತೀವ್ರ ಖಂಡನೆ
ಕೋಲಾರ: ಕಾವೇರಿ ನದಿ ನೀರಿನ ಮೇಲೆ ಹಕ್ಕು ಸಾಧಿಸುವ ಮೂಲಕ ಕರ್ನಾಟಕ ಜನತೆ ಬದುಕಿನ ಜತೆ ಚಲ್ಲಾಟವಾಡುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಈಗ ಚರಂಡಿ ನೀರಿನ ಮೇಲೂ ಕಣ್ಣು ಹಾಕಿರುವುದನ್ನು ವಿವಿಧ ಸಂಘಟನೆಗಳು ಖಂಡಿಸಿವೆ. ತಮಿಳುನಾಡಿಗೆ ಮಳೆಗಾಲದಲ್ಲಿ ಕರ್ನಾಟಕದ ಕಾವೇರಿ ಪ್ರದೇಶದಿಂದ ಹರಿಯುವ ನೀರೇ ಸಾಕು. ಆದರೆ, ನೀರನ್ನು ಜಲಾಶಯಗಳಲ್ಲಿ ಸಂಗ್ರಹಣೆ ಮಾಡಿ ಸದುಪಯೋಗ ಮಾಡಿಕೊಳ್ಳದೆ ಸಮುದ್ರದ ಪಾಲಾಗಿಸುತ್ತಿರುವ ತಮಿಳುನಾಡು ಸರ್ಕಾರ ಉದ್ದೇಶಪೂರ್ವಕವಾಗಿ ನೀರಿನ ವಿವಾದ ಜೀವಂತವಾಗಿಡುತ್ತಿದೆ ಎಂದು ಆರೋಪಿಸಿವೆ. ಜಯಲಲಿತಾ ಮುಖ್ಯಮಂತ್ರಿ ಆದಾಗಲೆಲ್ಲಾ ಕಾವೇರಿ ನೀರಿನ ಮೇಲೆ ತಮ್ಮ ಹಕ್ಕು ಚಲಾಯಿಸಿ ಕರ್ನಾಟಕವನ್ನು ಮರಳುಗಾಡಾಗಿಸಲು ಹುನ್ನಾರ ನಡೆಸುತ್ತಿದ್ದಾರೆ. ಜಯಲಲಿತಾ ಅವರ ಒತ್ತಡಗಳಿಗೆ ಕೇಂದ್ರ ಮಣಿಯಬಾರದು ಎಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement