ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜನರಲ್ಲಿ ಕಾನೂನು ಅರಿವಿನ ಕೊರತೆ: ನ್ಯಾ. ಸರಸ್ವತಿ

Srinivasa Murthy VN
Updated On : 12 Nov 2013, 1:09 am

ಕ.ಪ್ರ. ವಾರ್ತೆ ಅರಸೀಕೆರೆ ನ.11
ಪ್ರತಿಯೊಬ್ಬರಲ್ಲೂ ಕಾನೂನಿನ ಅರಿವು ಇದ್ದಲ್ಲಿ ಜೀವನದಲ್ಲಿ ಸಂಭವಿಸಬಹುದಾದ ಅವಘಡಗಳಿಂದ ಪಾರಾಗಬಹುದು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಸರಸ್ವತಿ ಕೋಸಂದರ್ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಭವನದಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ,  ಶಿಕ್ಷಣ ಇಲಾಖೆ, ವಕೀಲರ ಸಂಘ ಮತ್ತು  ರೋಟರಿ ಸಂಸ್ಥೆ  ಆಶ್ರಯದಲ್ಲಿ  ಆಯೋಜಿಸಿದ್ದ ಕಾನೂನು ಅರಿವು ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ದೌರ್ಜನ್ಯಕ್ಕೆ ಒಳಗಾದ ಪ್ರತಿಯೊಬ್ಬರಿಗೂ ಯಾವುದೇ ವಯೋವುತಿ ಇಲ್ಲದೇ ಸಂವಿಧಾನದ ಅಡಿಯಲ್ಲಿ ನ್ಯಾಯ ದೊರೆಯುವಂತಾಗಬೇಕು ಎಂಬುದು ಈ ಕಾನೂನು ಅರಿವು ಶಿಬಿರದ ಉದ್ದೇಶವಾಗಿದೆ ಎಂದರು.
ಜನಸಾಮಾನ್ಯರಲ್ಲಿ ಕಾನೂನು ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ನಾಗರಿಕರು ದುಷ್ಟ ಶಕ್ತಿಗಳಿಂದ ದೈಹಿಕ ಹಾಗೂ ಮಾನಸಿಕ ಹಿಂಸೆಯಿಂದ ಪಾರಾಗಲು ಸೂಕ್ತ ಕಾನೂನಿನ ಜ್ಞಾನ ಮೂಡಿಸುವುದರ ಮೂಲಕ ತಿಳಿವಳಿಕೆ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ  ದೇವಾನಂದ್ ಮಾತನಾಡಿ,  ಸಾರ್ವಜನಿಕರು ತಮಗೆ ಸಿಗಬೇಕಾದ ಸವಲತ್ತುಗಳಿಂದ ವಂಚಿತರಾಗುವುದನ್ನು ತಡೆಯಲು ಕಾನೂನಿನ ಅರಿವು ಪಡೆದುಕೊಳ್ಳುವುದು ಇಂದಿನ ದಿನಗಳಲ್ಲಿ ಆವಶ್ಯಕತೆಯಾಗಿದೆ. ವಿದ್ಯಾರ್ಥಿಗಳು ಹಾಗೂ ಪ್ರತಿ ಪ್ರಜೆಯೂ ಕಾನೂನು ಅರಿತುಕೊಳ್ಳಲು ಯಾವುದೇ ಕಟ್ಟು ಪಾಡುಗಳಿಲ್ಲ. ಕಾನೂನು ತಿಳಿವಳಿಕೆಯಿಂದ ನಮ್ಮದಿಯಾಗಿ ಬಾಳಲು ಸಾಧ್ಯ ಎಂದರು.
ಅಪರ ಸಿವಿಲ್ ನ್ಯಾಯಾಧೀಶ ಚೆನ್ನಪ್ಪ ಕುರಬೆಟ್ ಮಾತನಾಡಿ ದೇಶದಲ್ಲಿ ಮಹಿಳೆಯರು ಹಾಗೂ ಅಮಾಯಕ ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಶಾಲಾ ಕಾಲೇಜು ವಿದ್ಯಾರ್ಥ್ಥಿಗಳಿಗೆ ಈ ಕಾನೂನು ಅರಿವು ಶಿಬಿರಗಳು ಹೆಚ್ಚಿನ ಮಹತ್ವವಾಗಿದ್ದು ಸಮೂಹ ಗುಂಪುಗಳನ್ನಾಗಿ ಮಾಡಿಕೊಂಡು ಇಂತಹ ಶಿಬಿರಗಳನ್ನು ಏರ್ಪಡಿಸಬೇಕು ಎಂದು ಹೇಳಿದರು.
ಉದ್ಯೋಗಸ್ಥ  ಮಹಿಳೆಯರಿಗೆ ಕಿರಕುಳ ನಡೆಯುತ್ತಿದ್ದರೂ ಅವನ್ನು ಬೆಳಕಿಗೆ ತರದೇ ಇರುವುದರಿಂದ ಪದೇ ಪದೇ ಇಂತಹ ದೌರ್ಜನ್ಯಗಳು ಹೆಚ್ಚಾಗುತ್ತಿವೆ.ಇದರಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗಬಹುದು ಅದ್ದರಿಂದ ಉದ್ಯೋಗ ಸ್ಥಳಗಳಲ್ಲಿಯೂ ಇಂಥ ಶಿಬಿರ ಏರ್ಪಡಿಸುವ ಆವಶ್ಯಕತೆ ಇದೆ ಎಂದರು.
ರೋಟರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕಾನೂನು ಸೇವೆಗಳಿಗೆ ಸಂಬಂಧಿಸಿದಂತೆ ವಕೀಲ ಆರ್.ವಿಜಯಕುಮಾರ್ ಉಪನ್ಯಾಸ ನೀಡಿದರು. ರೋಟರಿ ವಿದ್ಯಾಸಂಸ್ಥೆ ಅಧ್ಯಕ್ಷ ಗೋವಿಂದರಾವ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಅರ್.ಸರ್ವೇಶ್, ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರವೀಣಕುಮಾರ್, ರೋಟರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅರುಣಕುಮಾರ್ ಇತತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement