ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತೆಪ್ಪ ಮಗುಚಿ ಇಬ್ಬರು ಸಾವು

Srinivasa Murthy VN
Updated On : 12 Nov 2013, 1:09 am

ಕನ್ನಡಪ್ರಭ ವಾರ್ತೆ ಆಲೂರು ನ. 11
ತಾಲೂಕಿನ ಕೆ.ಹೊಸಕೋಟೆ ಹೋಬಳಿಯ ಮಣಿಪುರ ಗ್ರಾಮದಲ್ಲಿ  ಹೇಮಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಇಬ್ಬರು ಯುವಕರು ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ನಡೆದಿದೆ. ಮಣಿಪುರ ಗ್ರಾಮದ ಯೋಗೀಶ್ (30) ಹಾಗೂ ಹುಲುಕುಂದ ಗ್ರಾಮದ ಮಧು (28) ಮೃತಪಟ್ಟ ದುರ್ದೈವಿಗಳು.ಗ್ರಾಮದಲ್ಲಿ ಸೋಮವಾರ ಆರಾಧನಾ ಕಾರ್ಯಕ್ರಮವಿದ್ದು ಅದಕ್ಕಾಗಿ ಸಾಮಗ್ರಿಗಳನ್ನು ತೆಗೆದುಕೊಂಡು ಹಾಗೂ ಕಾರ್ಯಕ್ಕೆ ಬರುವ ನೆಂಟರನ್ನು ಕರೆದುಕೊಂಡು ಬರಲು ಹಿನ್ನೀರಿನ ಇನ್ನೊಂದು ಬದಿಗೆ ಹೋಗುತ್ತಿದ್ದ ಸಂದರ್ಭದಲ್ಲಿ  ಇದ್ದಕ್ಕಿದ್ದಂತೆ ಆಯ ತಪ್ಪಿ ತೆಪ್ಪ ಮಗುಚಿಕೊಂಡಿದೆ. ಆಳವಾದ ನೀರಿನಲ್ಲಿ ಈಜಲಾಗದೇ ಮೃತಪಟ್ಟಿದ್ದಾರೆ.  ಸಕಲೇಶಪುರ ಡಿವೈಎಸ್ಪಿ ಕುಮಾರಸ್ವಾಮಿ ಹಾಗೂ ಆಲೂರು ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಸಂಜೆಯಾದರೂ ಮೃತ ದೇಹಗಳು ಮೇಲೆ ಬಾರದ ಕಾರಣ ಮುಳುಗು ತಜ್ಞರನ್ನು ಕರೆಸಿ ಶೋಧ ಕಾರ್ಯ ನಡೆಸಿದ್ದಾರೆ.

ಕಡಿಮೆ ಅಂಕ ಬಂದದ್ದಕ್ಕೆ ನೊಂದ ಬಾಲಕಿ ಆತ್ಮಹತ್ಯೆ
ಸಕಲೇಶಪುರ: ಶಾಲೆ ಕಿರು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡದೆ ಎಂದು ಮನನೊಂದು ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಪಟ್ಟಣದಲ್ಲಿ ಭಾನುವಾರ ನಡೆದಿದೆ.ಮಾನಸ (13) ಆತ್ಮಹತ್ಯೆಗೆ ಶರಣಾದ ಬಾಲಕಿ. ಪಟ್ಟಣದ ಚಂಪಕನಗರ ಬಡಾವಣೆಯ ಪಾಪಣ್ಣ ಎಂಬುವವರ ಪುತ್ರಿ ಸಂತ ಜೋಸಫರ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾವಕಿ ಕಳೆದ ತಿಂಗಳು ನಡೆದ ಶಾಲ ಕಿರು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದೆ ಎಂಬ ಖಿನ್ನತೆಯಲ್ಲಿ ಬಾನುವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ.ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯ ಸಾವಿನ ಹಿನ್ನೆಲೆಯಲ್ಲಿ ಶಾಲ ಅವರಣದಲ್ಲಿ ಸಂತಾಪ ಸೂಚಿಸಿ, ತರಗತಿಗೆ ರಜೆ ನೀಡಲಾಗಿತ್ತು.

ಬಸ್ - ಜೀಪ್ ಡಿಕ್ಕಿ: ಚಾಲಕ ಸ್ಥಳದಲ್ಲೇ ಸಾವು
ರಾಮನಾಥಪುರ: ಸಾರಿಗೆ ಬಸ್ - ಜೀಪ್ ನಡುವೆ  ಸಂಭವಿಸಿದ  ಮುಖಾಮುಖಿ ಡಿಕ್ಕಿಯಲ್ಲಿ  ಜೀಪ್ ಚಾಲಕ  ಸ್ಥಳದಲ್ಲೇ ಮೃತಪಟ್ಟ ಘಟನೆ  ಹೋಬಳಿಯ  ಮಾದಿಹಳ್ಳಿ  ಬಳಿ ಸೋಮವಾರ ಸಂಜೆ  ನಡೆದಿದೆ. ಜೀಪ್ ಚಾಲಕನನ್ನು  ತಮ್ಮಯ್ಯ (45) ಎಂದು ಗುರುತಿಸಲಾಗಿದೆ. ರಾಮನಾಥಪುರದಿಂದ ಅರಕಲಗೂಡಿಗೆ   ಹೋಗುತ್ತಿದ್ದ ಸಾರಿಗೆ ಬಸ್  ಎದುರಿನಿಂದ  ಬಂದ ಜೀಪ್‌ಗೆ  ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರ ಗಾಯಗೊಂಡ ಜೀಪ್ ಚಾಲಕ  ತಮ್ಮಯ್ಯ  ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ  ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement