ಪೆಟ್ಟಿಗೆ ಅಂಗಡಿಗೆ ಬೆಂಕಿ; 2.5 ಲಕ್ಷ ನಷ್ಟ
ಅರಸೀಕೆರೆ; ದುಷ್ಕರ್ಮಿಗಳು ಪೆಟ್ಟಿಗೆ ಅಂಗಡಿಗೆ ಬೆಂಕಿ ಇಟ್ಟ ಪರಿಣಾಮ ದವಸ ಧಾನ್ಯ, 30 ಗ್ರಾಂ ಚಿನ್ನ, 10 ಸಾವಿರ ನಗದು ಸೇರಿದಂತೆ ಸುಮಾರು 2.5 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿರುವ ಪ್ರಕರಣ ತಾಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದೆ. ಗ್ರಾಮದ ರಮೇಶ್ ಎಂಬವರಿಗೆ ಸೇರಿದ ಈ ಪೆಟ್ಟಿಗೆ ಅಂಗಡಿಗೆ ದುಷ್ಕರ್ಮಿಗಳು ಹಚ್ಚಿದ ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಮನೆಗಳಿಗೆ ತಾಗದಂತೆ ಗ್ರಾಮಸ್ಥರು ನೀರು ಹಾಕಿ ನಂದಿಸಲು ಯತ್ನಿಸಿದರು.
ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಯಶಸ್ವಿಯಾದರು. ಸಂಪೂರ್ಣ ಸುಟ್ಟು ಕರಕಲಾಗಿದ್ದವು. ಈ ಬಗ್ಗೆ ಗ್ರಾಮಾಂತರ ಪೋಲೀಸರಿಗೆ ದೂರು ನೀಡಲಾಗಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಮಾಜಿ ಸೈನಿಕರು/ವಿಧವಾ ಪತ್ನಿಯರಿಗೆ ಸೂಚನೆ
ಹಾಸನ: ಪ್ರಪಂಚದ 2ನೇ ಮಹಾಯುದ್ಧದ ಗೌರವಧನ ಪಡೆಯುತ್ತಿರುವ ಎಲ್ಲ ಮಾಜಿ ಸೈನಿಕರು ಮತ್ತು ಮೃತ ಸೈನಿಕರ ಪತ್ನಿಯರು ತಮ್ಮ ಜೀವಿತ ಪ್ರಮಾಣ ಪತ್ರವನ್ನು (ಔ್ಝಜಿಜ ಈಜ್ಠಡ್ಝಿಜ್ಝ್ಛಿಛಡಿಜ) ನ.30ರೊಳಗೆ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಹಾಸನ ಇವರಿಗೆ ಸಲ್ಲಿಸಬೇಕು. ನಿಗದಿತ ಅವಧಿಯೊಳಗೆ ಜೀವಿತ ಪ್ರಮಾಣ ಪತ್ರ ನೀಡದೆ ಇರುವ ಫಲಾನುಭವಿಗಳ ಗೌರವಧನವನ್ನು ನಿಲ್ಲಿಸಲಾಗುವುದು. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಹಾಸನ (08172 250465) ಸಂಪರ್ಕಿಸಬಹುದಾಗಿದೆ.