ಲೆವಿ ಅಕ್ಕಿ ಖರೀದಿ ಕೇಂದ್ರಗಳ ಸ್ಥಾಪನೆ
ಹಾಸನ: ಅಕ್ಕಿ ಗಿರಣಿ ಮಾಲೀಕರಿಂದ ಲೆವಿ ಅಕ್ಕಿಯನ್ನು ಖರೀದಿಸಲು ಲೆವಿ ಅಕ್ಕಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಹಾಸನದಲ್ಲಿ ಎಪಿಎಂಸಿ ಆವರಣ, ಕರ್ನಾಟಕ ಆಹಾರ ನಾಗರಿಕ ನಿಗಮ ನಿಯಮಿತದ ಸಗಟು ಮಳಿಗೆ, ಲೆವಿ ಅಕ್ಕಿ ಖರೀದಿ ಕೇಂದ್ರದ ಖರೀದಿ ಅಧಿಕಾರಿಗಳ ಹೆಸರು ಎ.ಎಸ್.ಕುಮಾರ್, ಕಿರಿಯ ಸಹಾಯಕರು(9449888369), ಮತ್ತು ಹೊಳೆನರಸೀಪುರ ಎಪಿಎಂಸಿ ಆವರಣದ ಕರ್ನಾಟಕ ಆಹಾರ ನಾಗರಿಕ ನಿಗಮ ನಿಯಮಿತದ ಸಗಟು ಮಳಿಗೆ ಲೆವಿ ಅಕ್ಕಿ ಖರೀದಿ ಕೇಂದ್ರದ ಖರೀದಿ ಅಧಿಕಾರಿ ರಾಮೇಗೌಡ,. ಕಿರಿಯ ಸಹಾಯಕರು(9449211829) ಆಗಿದೆ. ಸರ್ಕಾರದಿಂದ ಘೋಷಿಸಿರುವ ದರ, ಅಕ್ಕಿ ಎ ಗ್ರೇಡ್, ಪ್ರತಿ ಕ್ವಿಂಟಲ್ಗೆ (ನಿವ್ವಳ) 2211.07 ಮತ್ತು ಅಕ್ಕಿ ಸಾಮಾನ್ಯ- ಪ್ರತಿ ಕ್ವಿಂಟಲ್ಗೆ (ನಿವ್ವಳ) 2162.53 ಆಗಿದೆ. ಜಿಲ್ಲೆಯ ಅಕ್ಕಿ ಗಿರಣಿ ಮಾಲೀಕರು ತಮಗೆ ನಿಗದಿ ಪಡಿಸಿದ ಗುರಿಯಂತೆ ಲೆವಿ ಅಕ್ಕಿ ಮೇಲ್ಕಂಡ ಕೇಂದ್ರಗಳಿಗೆ ತಂದು ಒಪ್ಪಿಸುವಂತೆ ಕರ್ನಾಟಕ ಆಹಾರ ನಾಗರಿಕ ನಿಗಮ ನಿಯಮಿತದ ಜಿಲ್ಲಾ ನಿರ್ವಾಹಕರು ಕೋರಿದ್ದಾರೆ.
ಸಹಕಾರ ಸಂಘಗಳ ಸಮಾಪನೆ
ಹಾಸನ: ಹೊಳೆನರಸೀಪುರ ತಾಲೂಕಿನ ಶ್ರೀ ಮಾಚಿ ಮಡಿವಾಳ ವಿವಿಧೋದ್ದೇಶ ಸಹಕಾರ ಸಂಘ, ಅಫಿಷಿಯಲ್ ಬಳಕೆದಾರರ ಸಹಕಾರ ಸಂಘ, ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ , ಚಿಟ್ಟನಕೂಡು ಹಾಗೂ ಸಕಲೇಶಪುರ ತಾಲೂಕಿನ ಯಸಳೂರು ಮತ್ತು ಹಡ್ಲಹಳ್ಳಿಯ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ನಿ.ಗಳು ಸ್ಥಗಿತಗೊಂಡಿರುವುದರಿಂದ ಸದರಿ ಸಂಘಗಳನ್ನು ಸಮಾಪನೆಗೊಳಿಸಲು ಸಹಕಾರ ಅಭಿವೃದ್ಧಿ ಅಧಿಕಾರಿ, ಹೊಳೆನರಸೀಪುರ ಇವರು ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಹಾಸನ ಇವರ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸದರಿ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಷೇರುದಾರರು ಇವನ್ನು ಸಮಾಪನೆಗೊಳಿಸುವ ಬಗ್ಗೆ ತಮ್ಮ ಆಕ್ಷೇಪಣೆಗಳೇನಾದರೂ ಇದ್ದರೆ ಈ ಪ್ರಕಟಣೆ ಪ್ರಕಟಗೊಂಡ ಒಂದು ವಾರದೊಳಗೆ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ, ಹಾಸನ ಜಿಲ್ಲೆ, ಹಾಸನ ಇವರನ್ನು ಸಂಪರ್ಕಿಸುವಂತೆ ತಿಳಿಸಿದೆ. ಇಲ್ಲದಿದ್ದಲ್ಲಿ ಸಮಾಪನೆಗೆ ಕ್ರಮವಿಡಲಾಗುವುದು ಎಂದು ಸಹಕಾರ ಸಂಘಗಳ ಉಪ ನಿಬಂಧಕ ಇಲ್ಯಾಸ್ ಉಲ್ಲಾ ಷರೀಫ್ ತಿಳಿಸಿದ್ದಾರೆ.