ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲೆಯ ನಾನಾ ಕೃಷಿಕ ಕ್ಷೇತ್ರಗಳ ತೆರವಾದ ಸ್ಥಾನಗಳಿಗೆ ಚುನಾವಣೆ

Srinivasa Murthy VN
Updated On : 15 Nov 2013, 1:06 am

ಕನ್ನಡಪ್ರಭ ವಾರ್ತೆ ಹಾಸನ ನ 14
ಹಾಸನ ತಾ. ದುದ್ದ ಮತ್ತು ಸಾಲಗಾಮೆ ಹಾಗೂ ಹೊಳೆನರಸೀಪುರ ತಾ. ದೊಡ್ಡಕುಂಚೇವು ಕೃಷಿಕ ಕ್ಷೇತ್ರಗಳ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.
 ಈಗಾಗಲೇ ಚುನಾವಣಾ ವೇಳಾಪಟ್ಟಿಯಂತೆ ನ.11  ಚುನಾವಣಾ ನೋಟಿಸ್ ಪ್ರಕಟಣೆ ದಿನದಿಂದ ನಾಮಪತ್ರಗಳನ್ನು ಸಲ್ಲಿಸಲು ನ.18 ರ ಸೋಮವಾರ ಅಪರಾಹ್ನ 3 ರವರೆಗೆ ಕೊನೆಯ ದಿನವಾಗಿದೆ. ನ.19ರಂದು ಪೂರ್ವಾಹ್ನ 11ಕ್ಕೆ ನಾಮಪತ್ರಗಳ ಪರಿಶೀಲನೆ, ನ.21ರಂದು ಗುರುವಾರ ಅಪರಾಹ್ನ 3 ರವರೆಗೆ ನಾಮಪತ್ರಗಳನ್ನು ವಾಪಸು ಪಡೆಯಬಹುದಾಗಿದೆ.
 ಡಿ.1ರಂದು ಭಾನುವಾರ ಬೆಳಿಗ್ಗೆ 8ರಿಂದ ಸಂಜೆ 5 ರವರೆಗೆ ಅಗತ್ಯವಿದ್ದಲ್ಲಿ ಮತದಾನ ನಡೆಯುವುದು, ಡಿ.3 ರಂದು ಮಂಗಳವಾರ ಬೆಳಿಗ್ಗೆ 8ರಿಂದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತಗಳ ಎಣಿಕೆ ನಡೆಯುವುದು. ಡಿ.5 ರಂದು ಗುರುವಾರ ಚುನಾವಣಾ ಪ್ರಕ್ರಿಯೆ ಮುಗಿಯುವುದು.
ಚುನಾವಣಾಧಿಕಾರಿಗಳ ನೇಮಕ:    ದುದ್ದ ಮತ್ತು ಸಾಲಗಾಮೆ ್ಞಷಿಕ ಕ್ಷೇತ್ರಗಳ ತೆರವಾದ ಸ್ಥಾನಗಳಿಗೆ ಚುನಾವಣೆಯನ್ನು ನಡೆಸಲು ಹಾಸನದ ಉಪವಿಭಾಗಾಧಿಕಾರಿರನ್ನು ಚುನಾವಣಾಧಿಕಾರಿಯನ್ನಾಗಿಯೂ, ಹಾಸನ ತಹಶೀಲ್ದಾರ್‌ರನ್ನು ಸಹಾಯಕ ಚುನಾವಣಾಧಿಕಾರಿಯನ್ನಾಗಿಯೂ ಮತ್ತು ಹೊಳೆನರಸೀಪುರ ತಾ. ದೊಡ್ಡಕುಂಚೇವು ಕೃಷಿಕ ಕ್ಷೇತ್ರದ ತೆರವಾದ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲು ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕರು ರನ್ನು ಚುನಾವಣಾಧಿಕಾರಿಯನ್ನಾಗಿಯೂ, ಹೊಳೆನರಸೀಪುರ ತಹಶೀಲ್ದಾರ್‌ನ್ನು ಸಹಾಯಕ ಚುನಾವಣಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ನಾಮಪತ್ರಗಳನ್ನು ಸ್ವೀಕರಿಸುವ ಸ್ಥಳ: ಹಾಸನ ಮತ್ತು ಆಲೂರು ್ಞಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದ ನಾಮಪತ್ರಗಳನ್ನು ಹಾಸನ ಉಪವಿಭಾಗಾಧಿಕಾರಿಗಳ ಕಚೆರಿಯಲ್ಲಿ, ಹೊಳೆನರಸೀಪುರ ಮತ್ತು ಅರಕಲಗೂಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದ ನಾಮಪತ್ರಗಳನ್ನು ಹೊಳೆನರಸೀಪುರ ತಾಲ್ಲೂಕು ಕಚೇರಿಯಲ್ಲಿ ಸ್ವೀಕರಿಸಲಾಗುತ್ತದೆ.
 ಈ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತದಾರರ ಪಟ್ಟಿಗಳು, ಅವಶ್ಯಕ ನಾಮಪತ್ರಗಳ ನಮೂನೆ ಇನ್ನಿತರೆ ಪ್ರಪತ್ರ, ನಮೂನೆಗಳು ಹಾಸನ ತಾಲೂಕು ಕಚೇರಿಯಲ್ಲಿ ಮತ್ತು ಹೊಳೆನರಸೀಪುರ ರವರಲ್ಲಿ ಲಭ್ಯವಿರುತ್ತವೆ.
ಮತದಾನದ ಸಮಯದಲ್ಲಿ ಮತ ಚಲಾಯಿಸಲು ಹಾಜರಾದ ಮತದಾರರು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ಮತದಾರರ ಗುರುತು ಚೀಟಿಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ. ಅದು ಲಭ್ಯವಿಲ್ಲದಿದ್ದಲ್ಲಿ ಇತರೆ 21 ವಿವಿಧ ರೀತಿಯ ದಾಖಲೆಗಳ ಪೈಕಿ ಯಾವುದಾದರೊಂದನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.

ಹಳೇ ಮಾರುಕಟ್ಟೆ ವರ್ತಕರ ಸಂಘದಿಂದ ರಾಜ್ಯೋತ್ಸವ
ಬೇಲೂರು:
ಪಟ್ಟಣದ ಹಳೇ ಮಾರುಕಟ್ಟೆ ವರ್ತಕರ ಸಂಘದಿಂದ ರಾಜ್ಯೋತ್ಸವ ನಡೆಯಿತು. ಮುಖ್ಯ ಅತಿಥಿ ಚುಟುಕು ಸಾಹಿತಿ ಬೇಲೂರು ನವಾಬ್ ಮಾತನಾಡಿ ಇಂದಿನ ದಿನಗಳಲ್ಲಿ ಕನ್ನಡದ ಬಗ್ಗೆ ಮಾತನಾಡುತ್ತಿರುವುದು ಕೇವಲ ವೇದಿಕೆಗೆ ಸೀಮಿತವಾಗಿದ್ದು ಆಚರಣೆಯಲ್ಲಿ ಇಲ್ಲ. ಕನ್ನಡ ಹಬ್ಬ ಕೇವಲ ನವೆಂಬರ್ ತಿಂಗಳು ಮಾತ್ರ ಅಚರಣೆಯಾಗದೆ ನಿತ್ಯವು ಕನ್ನಡದ ಹಬ್ಬದ ಅಚರಣೆ ಮಾಡುವುದು ಅವಶ್ಯಕ ಎಂದರು.  ವರ್ತಕರ ಸಂಘದ ಅಧ್ಯಕ್ಷ ಕೆ.ಆರ್.ಕುಮಾರ್ ತಾ. ಹಲ್ಮಿಡಿ ಗ್ರಾಮವನ್ನು ನಿರ್ಲಕ್ಷ್ಯ ಮಾಡದೆ ಸೌಲಭ್ಯ ಒದಗಿಸಿ ಪ್ರವಾಸಿ ಹಾಗೂ ಐತಿಹಾಸಿಕ ಸ್ಥಳ ಮಾಡಬೇಕು ಎಂದರು.ಡಾ.ನರಸೇಗೌಡ,ಉಪಾಧ್ಯಕ್ಷ ಕುಮಾರ್, ಖಜಾಂಚಿ ಹಿತೇಶ್, ಸೋಮಣ್ಣ,  ಪುರಸಭೆ ಮಾಜಿ ಸದಸ್ಯ ಗುರುಪಾದಸ್ವಾಮಿ ಅನೂಷಾ, ಪ್ರತಾಪ್, ಶ್ರೀನಿವಾಸ್, ಜಾಕಿರ್‌ಪಾಷಾ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement