ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ದೊಡ್ಡವರ ದುರುಪಯೋಗ ಸಲ್ಲ'

Srinivasa Murthy VN
Updated On : 18 Nov 2013, 1:24 am

ಕೈರಂಗಳ: ದೊಡ್ಡವರ ಸಾಮಿಪ್ಯದ ದುರುಪಯೋಗ ಸಲ್ಲದು. ಚಾಡಿ ಮೂಲಕ ಇಬ್ಬರನ್ನು ಒಡೆಯಲು ಬಳಸುವ ಶಕ್ತಿಯನ್ನು ಇಬ್ಬರನ್ನೂ ಒಂದುಗೂಡಿಸಲು ಬಳಸಬೇಕು ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ. ಕೈರಂಗಳ ಪುಣ್ಯಕೋಟಿನಗರ ಶ್ರೀ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಶನಿವಾರ ಕೊನೆಗೊಂಡ ಶ್ರೀರಾಮಕಥೆ ಕಾರ್ಯಕ್ರಮದ 7ನೇ ದಿನ ರಾಮಾಂಲಿಂಗನ ಭಾಗದ ಪ್ರವಚನ ನೀಡಿದರು. ಸ್ವಾರ್ಥ ಸಾಧನೆಯಲ್ಲಿ ಸಂತಸ ಸಿಗದು, ಸ್ವಾಮಿ ಕಾರ್ಯ, ರಾಮ ಕಾರ್ಯದಲ್ಲಿ ಆಗುವ ಸಂತಸವೇ ಬೇರೆ. ಕೇವಲ ಸಂಸಾರಿ, ಸ್ವಾರ್ಥಿಗಳಿಗೆ ಬದುಕಿನ ಇನ್ನೊಂದು ಮುಖ ಪರಿಚಯವಿರುವುದಿಲ್ಲ. ರಾಮ ಕಾರ್ಯಕರ್ತರು ತಮ್ಮ ಬದುಕನ್ನು ಹೊಸ ಜನ್ಮ ಎಂದು ಭಾವಿಸುತ್ತಾರೆ ಎಂದರು. ಸೇವಾಕರ್ತ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್, ವಿದ್ವಾನ್ ಸತ್ಯನಾರಾಯಣ ಶರ್ಮ ಪ್ರಾಸ್ತಾವಿಕ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement