ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಧ್ಯಕ್ಷರ ನಿರ್ಲಕ್ಷ್ಯ: ಎಪಿಎಂಸಿ ಕಟ್ಟಡ ಉದ್ಘಾಟನೆ ನನೆಗುದಿಗೆ

Srinivasa Murthy VN
Updated On : 19 Nov 2013, 1:47 am

ಕ.ಪ್ರ.ವಾರ್ತೆ ಬೇಲೂರು ನ.18
ಎಪಿಎಂಸಿಯಲ್ಲಿ ರು. 324 ಲಕ್ಷ ಅಂದಾಜು ವೆಚ್ಚದ ಅಭಿವೃದ್ಧಿ ಕೆಲಸ ಕೈಗೊಂಡಿದ್ದು, 80 ಭಾಗ ಕೆಲಸ ಪೂರ್ಣ ಗೊಂಡಿದ್ದರೂ ಎಪಿಎಂಸಿ ಅಧ್ಯಕ್ಷರ ನಿರ್ಲಕ್ಷ್ಯದಿಂದ ಉದ್ಘಾಟನೆಯಾಗುತ್ತಿಲ್ಲ ಎಂದು ಸದಸ್ಯರು ದೂರಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಟ್ಟಣದ ಹಾಸನ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಕೃಷಿ ಉತ್ಪನ್ನಗಳನ್ನು ಸರಾಗ ಮಾರಾಟ ಮಾಡಲು ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡುವ ನಿಟ್ಟಿನಲ್ಲಿ ರು.324 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಯಿತು.
ಆದರೆ ಶೇ.80 ಭಾಗ ಕಾಮಗಾರಿ ಮುಗಿಯುತ್ತಾ ಬಂದಿದ್ದರೂ ಉದ್ಘಾಟನೆಯ ಭಾಗ್ಯ ಮಾತ್ರ ಇನ್ನೂ ಆಗದಿರುವುದು ಅಧ್ಯಕ್ಷರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಅಧ್ಯಕ್ಷರ ನಿರ್ಲಿಪ್ತತೆ ಆಡಳಿತದಿಂದಾಗಿ ಕಚೇರಿಯಲ್ಲಿ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಕೊರತೆ ಇದ್ದು ಯಾವುದೇ ಕೆಲಸ ಕಾರ್ಯಗಳು ನಡೆಯದೆ ಅಭಿವೃದ್ಧಿ ಕುಂಠಿತ ಗೊಂಡಿದೆ ಎಂದು ದೂರಿದ್ದಾರೆ.
ಈ ನಿಟ್ಟಿನಲ್ಲಿ ಇದೇ ರೀತಿಯಲ್ಲಿ  ರೈತರ ಶೋಷಣೆ ಮುಂದುವರಿದರೆ  ಅಭಿವೃದ್ಧಿ ಕೆಲಸ ಪೂರ್ಣವಾಗದಿದ್ದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ವರೆಗೆ ನಿರಂತರ ಹೋರಾಟ ನಡೆಸುವುದಾಗಿ ಎಪಿಎಂಸಿ ಸಮಿತಿ ಸದಸ್ಯರಾದ ಸಿ.ಎಚ್.ಮಹೇಶ್, ಜಿ.ಬಿ.ರಂಗೇಗೌಡ, ಎನ್.ಇ ಮಹೇಶ್, ವೈಸಿ. ಪಂಚಾಕ್ಷರಿ, ಮೀನಾಕ್ಷಮ್ಮ, ಚಂದ್ರನಾಯಕ್ ಮತ್ತಿತರರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಾನ್ವಿತರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ
ಹಾಸನ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಇತ್ತೀಚೆಗೆ ನಡೆದ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ 2013-14ನೇ ಸಾಲಿನ ಶಿಕ್ಷಣ, ಕಲೆ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆಯ ಅಸಾಧಾರಣ ಪ್ರತಿಭೆಯುಳ್ಳ 8 ಮಕ್ಕಳಿಗೆ ಜಿಲ್ಲಾ ಮಟ್ಟದ ಅಸಾಧಾರಣ ಪ್ರಶಸ್ತಿ ಮತ್ತು ರು.10000 ನಗದು ಬಹುಮಾನ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ಪಟ್ಟಿಯಲ್ಲಿ ಚನ್ನರಾಯಪಟ್ಟಣದ ಖ್ಯಾತ ಭರತನಾಟ್ಯ ಕಲಾವಿದೆ ಸ್ವಾತಿ ಪಿ. ಭಾರದ್ವಾಜ್ ಶಿಷ್ಯೆ ಶರಣ್ಯ ಆರ್. ವಶಿಷ್ಠ ಸೇರಿದ್ದಾರೆ. ಇವರು ಸುಮಾರು 4 ವರ್ಷಗಳಿಂದ  ನಾಟ್ಯ ಭೈರವಿ ಭರತನಾಟ್ಯ ಶಾಲೆಯಲ್ಲಿ ನಿರಂತರ ಅಭ್ಯಾಸ ಮಾಡಿರುವ ಈ ಭರತನಾಟ್ಯ ಕಲಾವಿದೆಗೆ 2013-14ನೇ ಸಾಲಿನ ಜಿಲ್ಲಾಮಟ್ಟದ ಅಸಾಧಾರಣ ಪ್ರತಿಭಾ ಪ್ರಶಸ್ತಿ ಮತ್ತು 10,000 ರು.  ನಗದನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎಸ್. ಸೋಮಶೇಖರ್ ಮತ್ತು  ಉಪ ನಿರ್ದೇಶಕ ಹೆಚ್.ಸಿ. ಚಿದಾನಂದ ಗೌರವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement