ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಸೀಕೆರೆ ಭಾಗಶಃ ಬಂದ್

Srinivasa Murthy VN
Updated On : 19 Nov 2013, 1:48 am

ಕ.ಪ್ರ.ವಾರ್ತೆ ಅರಸೀಕೆರೆ ನ.18
ಸತತ ಮಳೆಯಿಲ್ಲದೆ ತೀವ್ರ ಸಮಸ್ಯೆ ಎದುರಿಸುತ್ತಿರುವ ಅರಸೀಕೆರೆ ತಾಲೂಕನ್ನು ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಹಾಗೂ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುವುದನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಸೋಮವಾರ ತಾಲೂಕು ರೈತಸಂಘ ಕರೆ ನೀಡಿದ ಪಟ್ಟಣ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಸತತ ಮಳೆ ವಂಚಿತವಾದ ಅರಸೀಕೆರೆ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಇದುವರೆಗೂ ಯಾವುದೇ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ತಾಲೂಕು ರೈತಸಂಘ, ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೆಂಪೇಗೌಡ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕರೆ ನೀಡಿದ್ದ ಅರಸೀಕೆರೆ ಬಂದ್‌ಗೆ ಸಾರ್ವಜನಿಕರಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಪಟ್ಟಣದ ಎಲ್ಲಾ ಅಂಗಡಿ ಮುಗ್ಗಟ್ಟುಗಳು, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ವಾಣಿಜ್ಯ ಬ್ಯಾಂಕ್‌ಗಳು, ಸಿನಿಮಾ ಮಂದಿರಗಳು, ಎಪಿಎಂಸಿ ಮಾರುಕಟ್ಟೆ, ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ-ವ್ಯವಹಾರ ಸ್ಥಗಿತಗೊಳಿಸುವ ಮೂಲಕ ಬಂದ್‌ಗೆ ಸಹಕಾರ ನೀಡಿದ್ದವು, ಬಸ್ಸ್‌ಂಚಾರ ಮಾಮೂಲಿ ಇದ್ದರೂ ಜನದಟ್ಟಣೆ ವಿರಳವಾಗಿತ್ತು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ಮೆರವಣಿಗೆ ವಿವಿಧ ಸಂಘಟನೆಗಳ ಕಾರ್ಯಕರ್ಥರು ಸರ್ಕಾರದ ವಿರುದ್ಧ ವಿರುದ್ದ ಘೋಷಣೆ  ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ರೈತ ಸಂಘದ ಅಧ್ಯಕ್ಷ ಮೇಳೆನಹಳ್ಳಿ ನಾಗರಾಜು ಮಾತನಾಡಿ, ರೈತರ ಹೋರಾಟಕ್ಕೆ ಈ ಹಿಂದೆ ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾಗಿದ್ದ ಟಿ.ಬಿ. ಜಯಚಂದ್ರ ಬೆಂಬಲ ಸೂಚಿಸಿದ್ದರು. ಆದರೆ ಅವರೇ ಈಗ ಸಚಿವರು. ಇದುವರೆಗೂ ಈಡೇರುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಜಿಲ್ಲಾ ಕಾರ್ಯಧ್ಯಕ್ಷ ಸುರೇಶ್‌ಬಾಬು ಮಾತನಾಡಿ,  ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು,  ಗ್ರಾಮಾಂತರ ಪ್ರದೇಶದಲ್ಲಿ ಎರಡು ಎಕರೆ ಜಮೀನು ಸರ್ವ ಮಾಡಲು ರು.1500 ಕಟ್ಟಬೇಕಾಗಿದ್ದು, ಅದಕ್ಕೂ ಹೆಚ್ಚಿನ ಪ್ರತಿ ಎಕರೆ ಜಮೀನಿಗೆ 200 ರು.ಗಳನ್ನು ಹೆಚ್ಚುವರಿ ಹಣವನ್ನು ಸಂದಾಯ  ಮಾಡಬೇಕಾಗಿದೆ ತೀವ್ರ ಅಸಮಾಧಾನ ವ್ಯಕ್ತಪಡಿಸದರು.
ಜಿಲ್ಲಾ ಉಪಾಧ್ಯಕ್ಷ ಕುಮಾರ್, ಅಣ್ಣಾನಾಯಕನಹಳ್ಳಿ ಶಿವಲಿಂಗಪ್ಪ, ಕನಕೆಂಚೇನಹಳ್ಳಿ ಪ್ರಸನ್ನಕುಮಾರ್, ಕರವೇ ತಾಲೂಕು ಅಧ್ಯಕ್ಷ ಹೇಮಂತ್‌ಕುಮಾರ್, ಕೆಂಪೇಗೌಡ ವೇದಿಕೆ ಅಧ್ಯಕ್ಷ ದಯಾನಂದ್ ಮತ್ತಿತರರು  ಮಾತನಾಡಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿದರು.
ರೈತಸಂಘದ ಗೌರವಾಧ್ಯಕ್ಷ ಜವೇನಹಳ್ಳಿ ನಿಂಗಪ್ಪ, ಸಂಚಾಲಕ ಮಾಗೇನಹಳ್ಳಿ ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಬೊರನಕೊಪ್ಪಲು ಶಿವಲಿಂಗಪ್ಪ, ಕರಗುಂದ ಶಿವಮೂರ್ತಿ, ಮೇಳೆನಹಳ್ಳಿ ರಮೇಶಪ್ಪ, ಗೀಜಿಹಳ್ಳಿ ಪ್ರಸಾದ್, ಎನ್.ಎಸ್.ರವೀಶ್‌ಬಾಬು, ದಲಿತ ಸಂಘಟನೆ ಮುಖಂಡ ಹುಲಿಯಪ್ಪ, ಕರವೇ ನಗರಾಧ್ಯಕ್ಷ ಕಿರಣ್‌ಕುಮಾರ್, ತಾಲೂಕು ಹಸಿರುಸೇನೆ ಅಧ್ಯಕ್ಷ ಎಸ್.ಎಂ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement