ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಉನ್ನತ ಸಾಧನೆಗೆ ಪ್ರೋತ್ಸಾಹ ಅಗತ್ಯ: ಬಿಸಲ್ವಾಡಿ

Srinivasa Murthy VN
Updated On : 19 Nov 2013, 1:56 am

ಕ.ಪ್ರ.ವಾರ್ತೆ ಚಾಮರಾಜನಗರ ನ. 18
ಕಲೆ, ಸಾಹಿತ್ಯ ಬರವಣಿಗೆಗೆ ಸೂಕ್ತ ವೇದಿಕೆ ಮತ್ತು ಉತ್ತಮ ಪ್ರೋತ್ಸಾಹ ದೊರೆತಲ್ಲಿ ಮಾತ್ರ ಉನ್ನತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ ಹೇಳಿದರು.
ಜಿಲ್ಲಾ ಕಸಾಪ ಮತ್ತು ಜಿಲ್ಲಾ ಬರಹಗಾರರ ಬಳಗದ ಸಂಯುಕ್ತಾಶ್ರಮದಲ್ಲಿ ರಾಜ್ಯೋತ್ಸವ ಮಾಸಾಚರಣೆಯ ಅಂಗವಾಗಿ ಅರಕಲವಾಡಿ ಎ.ಎಂ.ನಾಗಮಲ್ಲಪ್ಪ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಬಳಗದ 12ನೇ ವಾರ್ಷಿಕೋತ್ಸವ ಮತ್ತು ಸರಣಿಯ 150ನೇ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.  
12 ವರ್ಷದಿಂದ ಸಾಹಿತ್ಯ, ಕಲೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ, ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುತ್ತಾ ಸಾಗಿರುವ ಜಿಲ್ಲಾ ಬರಹಗಾರರ ಹಾಗೂ ಕಲಾವಿದರ ಬಳಗವು ತನ್ನ ಸರಣಿಯ 150ನೇ ಕವಿಗೋಷ್ಠಿ ನಡೆಸುತ್ತಿರುವುದು ಸಾಧನೆಯೇ ಸರಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ, ಎಂ.ಪುಟ್ಟತಾಯಮ್ಮ ಮಾತನಾಡಿ, ಕವಿಯಾದವನು ತನ್ನ ದೃಷ್ಠಿಕೋನದಿಂದ ಕಾವ್ಯವನ್ನು ವಿಶ್ಲೇಷಿಸಬೇಕಾಗುತ್ತದೆ. ಅದು ತುಂಬ ಕಷ್ಟದ ಕೆಲಸ. ಇಂದು ಕವನ ವಾಚಿಸಿದ ಬಹುತೇಕರ ಕವನಗಳು ಬದುಕಿನ ಅನುಭವದ ಪ್ರತಿರೂಪವಾಗಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಎಂ.ನಾಗಮಲ್ಲಪ್ಪ, ಜಿಲ್ಲಾ ಕಸಾಪ ನವೆಂಬರ್ ಪೂರ್ತಿ ಜಿಲ್ಲಾದ್ಯಂತ ಹಲವು ಸಂಘ ಸಂಸ್ಥೆಗಳೊಂದಿಗೆ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಬರಹಗಾರರ ಬಳಗದ ಗೌ. ಅಧ್ಯಕ್ಷ ಎನ್.ಅಶ್ವಥ್ ನಾರಯಣ್ ಕವನ ವಾಚಿಸಿದ ಕವಯಿತ್ರಿಯರಿಗೆ ಸ್ಮರಣ ಫಲಕ, ಪ್ರಶಂಸನಾ ಪತ್ರ ನೀಡಿ ಗೌರವಿಸಿದರು. ನಿವೃತ್ತ ಕೃಷಿ ಅಧಿಕಾರಿ ಸಾಹಿತಿ ಎಂ.ನಾಗಮಲ್ಲಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಾಜೇಂದ್ರ ಪ್ರಾರ್ಥಿಸಿದರು. ಬಳಗದ ಅಧಕ್ಷ ಎಸ್. ನಿರಂಜನ್‌ಕುಮಾರ್ ಸ್ವಾಗತಿಸಿದರು. ಗುಂಡ್ಲುಪೇಟೆ ತಾ.ಕಸಾಪ ಅಧ್ಯಕ್ಷ ಪಿ.ಸಿ.ರಾಜಶೇಖರ್, ಯಳದೂರು ತಾ. ಕಸಾಪ ಅಧ್ಯಕ್ಷ ಮದ್ದೂರು ದೊರೆಸ್ವಾಮಿ, ಸಾಹಿತಿ ಡಾ. ಪಳನಿಸ್ವಾಮಿ ಮೂಡುಗೂರು, ನಾಗಭೂಷಣ ಬಸವಾಪುರ ನಾಟಕ ಭಾರ್ಗವ ಕೆಂಪರಾಜು, ಪ್ರಕಾಶ್ ಶೆಟ್ಟಿ,  ಬೆಂಗಳೂರು, ಕನ್ನಡ ರತ್ನ ಹರೀಶ್ ಮತ್ತಿಕೆರೆ, ಕೆ.ಎಂ.ವೀರಶೆಟ್ಟಿ ಇದ್ದರು.
47 ಕವಿ ಕವಯಿತ್ರಿಯರು ತಮ್ಮ ಕವನ ವಾಚಿಸಿದರು. ದಾವೂದ್ ಷರೀಫ್, ಚಾ. ಜಗದೀಶ್ ರಾಧ ಗುರುರಾಜ್, ಪದ್ಮಾಕ್ಷಿ, ಕೆ.ಪಿ.ಬಸವಯ್ಯರ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಪುಟಾಣಿ ಪ್ರಜ್ವಲ್ ಗಾಯನ ನೆರೆದಿದ್ದವರ ಮನಸೂರೆಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement