ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗ್ರಂಥಾಲಯ ದೇವಾಲಯ ಇದ್ದಂತೆ: ನ್ಯಾ.ದೇವರಾಜ್

Srinivasa Murthy VN
Updated On : 19 Nov 2013, 1:52 am

ಚನ್ನರಾಯಪಟ್ಟಣ: ತಾಲೂಕಿನ ಎಲ್ಲಾ ಗ್ರಂಥಾಲಯಗಳಿಗೆ ಉಚಿತವಾಗಿ ಜನಸಾಮಾನ್ಯರಿಗೆ ಕಾನೂನು ಮಾಹಿತಿ ಪುಸ್ತಕವನ್ನು ದೇಣಿಗೆ ನೀಡುವುದಾಗಿ ಹಿರಿಯ ಸಿವಿಲ್ ನ್ಯಾ.ಎಸ್. ಟಿ. ದೇವರಾಜ್ ತಿಳಿಸಿದರು.
  ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ, ಹೇಮವಾಣಿ ಪ್ರಕಾಶನ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಂಥಾಲಯ ವ್ಯಾಪ್ತಿಯನ್ನು ಅಳೆಯಲಾಗದು, ದೇವಾಲಯದಂತೆ ಪವಿತ್ರವಾದದ್ದು, ದೇಶ ಸುತ್ತು ಕೋಶ ಓದು ಎಂಬ ರೀತಿ ಜ್ಞಾನ ವೃದ್ಧಿ ಮಾಡಿಕೊಳ್ಳಬೇಕು. ರಾಜ್ಯದಲ್ಲಿರುವ ಗ್ರಂಥಾಲಯಗಳ ಕಾರ್ಯ ಹಾಗೂ ಅಂಕಿ ಅಂಶಗಳನ್ನು ವಿವರಿಸಿದರು, ರಾಷ್ಟ್ರದಲ್ಲೇ ರಾಜ್ಯದ ಗ್ರಂಥಾಲಯದ ಸಾಧನೆ ಬಗ್ಗೆ ಮೆಚ್ಚುಗೆ ಸೂಚಿಸಿ 5652 ಗ್ರಂಥಾಲಯಗಳು ರಾಜ್ಯದಲ್ಲಿದ್ದು 3251 ಗ್ರಾಮೀಣ ಗ್ರಂಥಾಲಯಗಳಿವೆ, ಆಸ್ಪತ್ರೆ, ಜೈಲುಗಳಲ್ಲಿ ಗ್ರಂಥಾಲಯಗಳಿವೆ ಎಂದು ಹೇಳಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ,  ಪಟ್ಟಣದಲ್ಲಿ ಉತ್ತಮ ಗ್ರಂಥಾಲಯದ ಕಟ್ಟಡ ಹಾಗೂ ಆಸನದ ವ್ಯವಸ್ಥೆ ಇದ್ದು ಜಿಲ್ಲೆಯಲ್ಲೆ ಪ್ರಥಮವಾಗಿದ್ದು ಹೇಮವಾಣಿ ಪ್ರಕಾಶನದ ಪುಟ್ಟಣ್ಣ ಹಾಗೂ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಶ್ರಮದ ಕನಸು ನೆರವೇರಿದೆ. ಇದರ ಸದ್ಬಳಕೆಯನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಡಾ. ಎಚ್. ಎಲ್. ನಾಗರಾಜ್, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ   ಎಚ್. ಅನಂತರಾಮು, ಗೊರೂರುಪಂಕಜ, ಎ.ಪಿ. ಚಂದ್ರಯ್ಯ, ರಾಜಶೇಖರ್ ಮಾತನಾಡಿದರು.
ಎಸ್. ಪಿ. ಮಂಜೇಗೌಡ ಹಾಗೂ ನಂಜಪ್ಪ ಅವರಿಗೆ ಉತ್ತಮ ಸೇವಾ ಸಿಬ್ಬಂದಿ ಎಂದು ಹಾಗೂ ಸ್ಪಂದಕರಾದ ಎ. ಎಂ. ಜಯರಾಂ, ವರ್ಷದ ಓದುಗ ಪ್ರಶಸ್ತಿ ಎಂ. ಎನ್. ಕಾಳೇಗೌಡ ಅವರನ್ನು ಗಣ್ಯರು ಪುರಸ್ಕರಿಸಿದರು.ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಎಚ್. ಎಂ. ಗೌಡಯ್ಯ, ಪ್ರಾಂಶುಪಾಲ ಶಿವರಾಮೇಗೌಡ, ಡಿ.ಎಲ್. ಕುಮಾರಸ್ವಾಮಿ, ಟಿ. ಅಶೋಕ್, ಶಂಕರಲಿಂಗೇಗೌಡ, ಭರತ್‌ಗೌಡ, ಕಿರಣ್, ಸುಬ್ಬಲಕ್ಷ್ಮಿ ಉಪಸ್ಥಿತರಿದ್ದರು. ಧನುಶ್ರೀ ಪ್ರಾರ್ಥಿಸಿದರು.  ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಕೆ. ಹಸೀನಾತಾಜ್ ಸ್ವಾಗತಿಸಿದರು.  ಪುಟ್ಟಣ್ಣ ನಿರೂಪಿಸಿದರು. ಶಾಖಾ ಗ್ರಂಥಾಲಯ ಸಹಾಯಕ ದೇವರಾಜ್ ವಂದಿಸಿದರು.

ಶೀಘ್ರ ಜಮೀನು ಸರ್ವೆ ಮಾಡಿ: ರೈತರ ಒತ್ತಾಯ
ಹಾಸನ:
ಒಂದೆರಡು ಗುಂಟೆ ಜಮೀನಿಗೆ ಸರ್ವೇ ಸ್ಕೆಚ್ ಮಾಡದ ಕಾರಣ ರೈತರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಸರ್ವೇ ಸ್ಕೆಚ್ ಮಾಡದಿದ್ದರೆ ಹೋರಾಟ ಕೈಗೊಳ್ಳುವುದಾಗಿ ಎಂದು ರೈತ ಹೋರಾಟಗಾರ ಗಣೇಶ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ತಮ್ಮ ಜಮೀನಿನ ಎರಡು-ಮೂರು ಗುಂಟೆ ಮಾರಾಟ ಮಾಡಿದ ಜಮೀನಿನ ಸರ್ವೆ ಸ್ಕೆಚ್ ಹಣ ಕಟ್ಟಲು ಕೇಳಿದರೆ ನೆಮ್ಮದಿ ಕೇಂದ್ರದವರು 5 ಗುಂಟೆ ಮೇಲೆ ಇದ್ದವರಿಗೆ ಮಾತ್ರ  ಸರ್ವೇ ಸ್ಕೆಚ್ ಹಕಟ್ಟಿಸುತ್ತೇವೆ ಎನ್ನುತ್ತಾರೆ. ಇದನ್ನು ಪ್ರಶ್ನಿಸಿದರೆ ರಿಯಲ್ ಎಸ್ಟೇಟ್ ಉದ್ದೇವೆ ಮಾಡುವವರಿಗೆ ಕಡಿವಾಣ ಹಾಕುವುದರಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ ಎಂದರು. ಜೊತೆಗೆ ಜಿಲ್ಲಾಧಿಕಾರಿಗಳು ಸಹ ಸರ್ವೇ ಸ್ಕೆಚ್ ಹಣವನ್ನು ಕಟ್ಟಿಸದಂತೆ ಸೂಚಿಸಿದ್ದಾರೆ ಅನ್ನುತ್ತಿದ್ದು, ಈ ವಿರುದ್ಧ ರೈತರು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಕೂಡಲೇ
ಸರ್ವೇ ಸ್ಕೆಚ್‌ಅನ್ನು ಕಡಿಮೆ ಗುಂಟೆ ಜಾಗಕ್ಕೂ ಮಾಡಿಕೊಡಬೇಕು ಎಂದು ಒತ್ತಾಯಿಸಿದ ಅವರು, ಜಿಲ್ಲಾಡಳಿತ ಅದಕ್ಕೆ ಒಪ್ಪದಿದ್ದರೆ ಈ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಮಂಜುನಾಥ್, ಮಹಂತೇಶ್, ವಿಜಯ್‌ಕುಮಾರ್, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement