ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

22ರಂದು ಕಾಫಿ ಬೆಳೆಗಾರರ ಸಮ್ಮೇಳನ

Srinivasa Murthy VN
Updated On : 20 Nov 2013, 12:16 pm

ಕ.ಪ್ರ.ವಾರ್ತೆ ಹಾಸನ ನ. 19
ಕರ್ನಾಟಕ ಬೆಳೆಗಾರರ ಒಕ್ಕೂಟದವತಿಯಿಂದ ನ.22ರಂದು ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆಗಾರರ ಸಮ್ಮೇಳನ ಮತ್ತು ಕೃಷಿ ವಸ್ತು ಪ್ರದರ್ಶನ ನಡೆಯಲಿದೆ ಎಂದು ಕರ್ನಾಟಕ ಬೆಳೆಗಾರರ ಸಂಘದ ಮುಜಾಹಿದ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಹಾಸನ, ಕೊಡಗು ಮತ್ತು ಚಿಕ್ಕಮಗಳೂರಿನ ಬೆಳೆಗಾರರು ಭಾಗವಹಿಸಲಿದ್ದು, ಚಿಕ್ಕಮಗಳೂರಿನ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿದೆ. ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಎಂ.ವೀರಪ್ಪಮೊಯ್ಲಿ ಸಮಾವೇಶ ಉದ್ಘಾಟಿಸಲಿದ್ದಾರೆ. ಒಕ್ಕೂಟವು ಹೊರತರುತ್ತಿರುವ ಸ್ಮರಣ ಸಂಚಿಕೆ, ಕಾಫಿ ಸಾಗಲಿ ಮುಂದೆ ಎಂಬ ಪುಸ್ತಕ, ಭಾರತೀಯ ಕಾಫಿಯ ಪ್ರಸಕ್ತ ಸ್ಥಿತಿ ಪುಸ್ತಕಗಳನು ಬಿಡುಗಡೆಗೊಳಿಸಲಾಗುತ್ತದೆ ಎಂದು ಹೇಳಿದರು.
ಸಮಾವೇಶದಲ್ಲಿ ಸಚಿವರು, ಸಂಸದರು, ಶಾಸಕರು, ಮಾಜಿ ಮಂತ್ರಿಗಳು, ಮಾಜಿ ಶಾಸಕರು ಮತ್ತು ಕಾಫಿ ಮಂಡಳಿ ಮತ್ತು ಸಂಬಾರು ಮಂಡಳಿಯ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಒತ್ತುವರಿ ಸಮಸ್ಯೆ, ಕಾಡಾನೆ ಸಮಸ್ಯೆ, ಗೊಬ್ಬರದ ಬೆಲೆ ಏರಿ, ಪರಿಸರ ಸೇವೆಗಳು, ಜಮ್ಮಾ ಭೂಮಿ ಸಮಸ್ಯೆ, ಕೋಮಾರ್ಕ್ ಪುನಶ್ಚೇತನಕ್ಕೆ ಹಣ ಬಿಡುಗಡೆ, ಭೂ ಸುಧಾರಣೆ ತಿದ್ದುಪಡಿ, ಮಧ್ಯಮ ಬೆಳೆಗಾರರ ಸಾಲಮನಾ ದ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಜನಪ್ರತಿನಿಧಿಗಳಿಗೆ ಮನವಿ ನೀಡಲಾಗುತ್ತದೆ ಎಂದು ಹೇಳಿದರು.
ಭೂ ಒತ್ತುವರಿಗೆ ಸಂಬಂಧಿಸಿದಂತೆ ಸಣ್ಣ ಹಿಡುವಳಿದಾರರು ಒಂದೆರಡು ಎಕರೆಯಷ್ಟ ಒತ್ತುವರಿ ಮಾಡಿದ್ದಾರೆ. ಆದರೆ ಅರಣ್ಯ ಭೂಮಿಯನು ಒತ್ತುವರಿ ಮಾಡಿಲ್ಲ. ಈಗ ಅದನು ತೆರವುಗೊಳಿಸುವಂತಹ ಕಾರ್ಯ ನಡೆಯುತ್ತಿದೆ. ಇದರಿಂದ ಸಣ್ಣ ಹಿಡುವಳಿದಾರರಿಗೆ ತೊಂದರೆ ಉಂಟಾಗಲಿದೆ ಎಂದ ಅವರು, ಕೇಂದ್ರ ಸರ್ಕಾರವು ಪಶ್ಚಿಮಘಟ್ಟವನು ವಿಶ್ವಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಿರುವುದಿರಂದ ಕಾಡಂಚಿನಲ್ಲಿ ಇರುವ ಜನರಿಗೆ ತೀರಾ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಒಕ್ಕೂಟದ ಟಿ.ಎಸ್.ಮಹೇಶ್, ಮಲ್ಲಿಕಾರ್ಜುನ್, ಕೆ.ಬಿ.ಕೃಷ್ಣ, ದಿವಾನ್ ಹಾಗೂ ಎಚ್.ಎನ್.ದೇವರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement