ಅದುರವಳ್ಳಿ ಬಳಿ ಒಂಟಿ ಸಲಗ ದಾಳಿ: ಕಾರ್ಮಿಕ ಸಾವು
ಸಕಲೇಶಪುರ: ಒಂಟಿ ಸಲಗದ ದಾಳಿಗೆ ಸಿಲುಕಿ ಮಾರಣಾಂತಿಕವಾಗಿ ಗಾಯಗೊಂಡಿದ್ದ ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ತಾಲೂಕಿನ ಆದುರವಳ್ಳಿ ಕಾಫಿ ಎಸ್ಟೇಟ್‌ನಲ್ಲಿ ಮಂಗಳವಾರ ಮುಸ್ಸಂಜೆ ನಡೆದಿದೆ.
ಕಾಫಿ ಎಸ್ಟೇಟ್‌ಗೆ ಕೂಲಿ ಕೆಲಸಕ್ಕೆಂದು ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯಿಂದ ಸೋಮವಾರ ಬಂದಿದ್ದ ಮೈಲಾರಿ (35) ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಕಾರ್ಮಿಕ. ತನ ಸಹವರ್ತಿ ನಾಗರಾಜ್ ಎಂಬುವವರೊಂದಿಗೆ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆಸಿದ ಒಂಟಿ ಸಲಗ ಮೈಲಾರಿಯನು ಸೊಂಡಲಿನಿಂದ ಎರಡು ಬಾರಿ ನೆಲಕ್ಕೆ ಬಡಿಯಿತು. ಇವರೊಂದಿಗಿದ್ದ ನಾಗರಾಜ್ ಓಡಿ ತಪ್ಪಿಸಿಕೊಂಡಿದ್ದಾನೆ.
ಜಾವಗಲ್ ಸಂತೆ: ತರಕಾರಿ ಧಾರಣೆ ದಿಢೀರ್ ಏರಿಕೆ
ಜಾವಗಲ್: ಪಟ್ಟಣದ ಸಂತೆಯಲ್ಲಿ ಇತ್ತೀಚೆಗೆ ತರಕಾರಿ ಮತ್ತು ಕೊಬ್ಬರಿ, ತೆಂಗಿನಕಾಯಿ ಧಾರಣೆ ವಾರದಿಂದ ವಾರಕ್ಕೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ 1,000 ತೆಂಗಿನ ಕಾಯಿಗಳ ಬೆಲೆ 12,000 ರಿಂದ 13,000 ರು.ಗಳಾಗಿತ್ತು. 1 ಕೆ.ಜಿ. ತೆಂಗಿನಕಾಯಿಬೆಲೆ 22-23 ರುಗಳಿಗೆ ಏರಿಕೆ ಕಂಡಿತು. ಕೊಬ್ಬರಿ ಬೆಲೆ ಕ್ವಿಂಟಾಲ್ 1 ಕ್ಕೆ 7800-8000ರೂಗಳಿಗೆ ಏರಿಕೆಯಾಯಿತು. ಬೆಲ್ಲದ ಬೆಲೆ ಸಕ್ಕರೆಗಿಂತಲೂ ಹೆಚ್ಚಾಗಿದ್ದು ಕಿ.ಲೋ. 1ಕ್ಕೆ 45 ರುಗಳಾಗಿತ್ತು. ಈರುಳ್ಳಿ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದ್ದು 25-30 ರು. ಗಳಾಗಿತ್ತು. ಉಳಿದಂತೆ ಕ್ಯಾರೆಟ್, ಟೊಮೆಟೋ ಗೆಡ್ಡೆಕೋಸು, ಆಲೂಗಡ್ಡೆ, ಜವಳಿಕಾಯಿ, ಬೆಂಡೆಕಾಯಿ ಕಿಲೋ 1ಕ್ಕೆ 40 ರು ಗಳಾಗಿತ್ತು. ಬೆಳ್ಳುಳ್ಳಿ ಬೆಲೆಯೂ ಏರಿಕೆ ಕಂಡಿದ್ದು ಕಿಲೋ 1ಕ್ಕೆ 80 ರು. ಗಳಾಗಿತ್ತು. ನಾನಾ ಸೊಪ್ಪುಗಳ ಧಾರಣೆಯು ವಾರದಿಂದ ವಾರಕ್ಕೆ ಏರಿಕೆಯಾಗುತ್ತಿದ್ದು ಕಟ್ಟು 1ಕ್ಕೆ 5ರು. ಗಳಾಗಿತ್ತು. 3 ತಿಂಗಳ ಕುರಿಮರಿ ಬೆಲೆಯೂ 3,200-3,500 ರು.ಗಳಾಗಿತ್ತು.
ವೃದ್ಧ ನಾಪತ್ತೆ
ಅರಸೀಕೆರೆ: ಪಟ್ಟಣದ ಬಸವಣ್ಣ ಎಂಬುವರು ಸೋಮವಾರ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಬಸವಣ್ಣನವರ ಹೆಂಡತಿ ಗಿರಿಜಮ್ಮ ನಗರ ಠಾಣೆಗೆ ದೂರು ನೀಡಿದ್ದಾರೆ. ಚಹರೆ 88 ವರ್ಷ, 5.5 ಅಡಿ ಎತ್ತರ, ಕನಡ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಧರಿಸಿದ್ದರು.
ಜ್ಯೋತಿ ಕಾನ್ವೆಂಟ್‌ನಲ್ಲಿ ಮಕ್ಕಳ ದಿನಾಚರಣೆ
ಚನರಾಯಪಟ್ಟಣ: ಸಂವಿಧಾನದಲ್ಲಿ ಮಕ್ಕಳ ಕಲಿಕೆ, ಪೋಷಣೆ ಬಗ್ಗೆ ಜವಾಬ್ದಾರಿ ನೀಡಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ. ಮಹದೇವ್ ಹೇಳಿದರು. ಅವರು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಗೌರವ ನೀಡುವುದೇ ಮಕ್ಕಳ ದಿನಾಚರಣೆ. 1925 ರಲ್ಲೇ ವಿಶ್ವಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಬಗ್ಗೆ ಪ್ರತಿಪಾದನೆಯಾಗಿತ್ತು. ಮಕ್ಕಳ ಹಕ್ಕುಗಳಲ್ಲಿ 2 ವಿಭಾಗವಿದ್ದು ಮಕ್ಕಳ ಸಬಲೀಕರಣ ಹಾಗೂ ಮಕ್ಕಳ ಹಕ್ಕು ರಕ್ಷಣೆ ಮಾಡುವುದಾಗಿದೆ. ಅಪಾಯಕಾರಿ ಉದ್ಯೋಗದಲ್ಲಿ ಮಕ್ಕಳನು ತೊಡಗಿಸಬಾರದು. ಭಾರತದಲ್ಲಿ ಕ್ರೈಂ, ರೇಫ್ ಅಧಿಕವಾಗುತ್ತಿದೆ. ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶ ವೆಂಕಣ್ಣ ಬಿ. ಹೊಸಮನಿ, ಬಿ.ಇ.ಓ. ಪಾಂಡು ಮುಖ್ಯ ಶಿಕ್ಷಕ ಚಂದ್ರಶೇಖರ್, ಮೃತ್ಯುಂಜಯ, ವಕೀಲರಾದ ವೆಂಕಟರಮಣೇಗೌಡ ಇತರರು ಇದ್ದರು.