ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ಡಯಾಲಿಸಿಸ್ ಘಟಕ ಉದ್ಘಾಟನೆ

Srinivasa Murthy VN
Updated On : 20 Nov 2013, 12:17 pm

ಕ.ಪ್ರ.ವಾರ್ತೆ ಹೊಳೆನರಸೀಪುರ ನ.19
ಕಿಡಿ ತೊಂದರೆಯಿಂದ ಬಳಲುತ್ತಿದ್ದ ತಾಲೂಕಿನ ರೋಗಿಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಆರಂಭವಾಗಲಿದ್ದು, ಘಟಕವನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನ.20 ರಂದು ಉದ್ಘಾಟಿಸಲಿದ್ದಾರೆ ಎಂದು ವೈದ್ಯಾಧಿಕಾರಿ ಲಕ್ಷ್ಮಿಕಾಂತ್ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಇಂತಹ ಘಟಕ ರಾಜ್ಯದ ತಾಲೂಕು ಕೇಂದ್ರಗಳಲ್ಲಿ ಪ್ರಥಮದ್ದಾಗಿದೆ ಎಂದ ಅವರು, ಈ ಘಟಕ ವಾರದ ಆರು ದಿನಗಳು ನಡೆಯಲಿದ್ದು ಘಟಕದಲ್ಲಿ ಜರ್ಮಿನಿಯ ನಾಲ್ಕು ಮಿಷನ್‌ಗಳನು ಅಳವಡಿಸಿದ್ದು ಈ ನಾಲ್ಕರಲ್ಲಿ ಮೂರು ಕಾರ್ಯನಿರ್ವಹಿಸಲಿದೆ. ಉಳಿದ ಒಂದು ಯಂತ್ರ ಅವಶ್ಯವಾಗಿದ್ದಾಗ ಮಾತ್ರ ಕಾರ್ಯ ನಿರ್ವಹಿಸಲಿದೆ.
ಘಟಕಕ್ಕೆ ಸುಮಾರು 70 ಲಕ್ಷ ವೆಚ್ಚವಾಗಿದ್ದು, ಈ ಘಟಕ ಆರಂಭವಾಗುವುದರಿಂದ  ತಾಲೂಕಿನಲ್ಲಿ ನಲವತ್ತರಿಂದ ಐವತ್ತು ಮಂದಿ ರಕ್ತ ಶುದ್ಧೀಕರಣಕ್ಕಾಗಿ ಹಾಸನ, ಮೈಸೂರು, ಬೆಂಗಳೂರು ಮತ್ತು ಶಿವಮೊಗ್ಗಗಳಿಗೆ ತೆರಳಿ ಡಯಾಲಿಸಿಸ್ ಮಾಡಿಕೊಂಡು ಬರುತ್ತಿದ್ದಾರೆ.
ಈ ಘಟಕ ಆರಂಭವಾಗಿರುವುದರಿಂದ ದೂರದ ಊರಿಗೆ ತೆರಳಿ ಖಾಸಾಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವುದರಿಂದ ದುಬಾರಿ ವೆಚ್ಚ ಭರಿಸಬೇಕಾಗಿದೆ. ಇವೆಲ್ಲವನು ಮನಗಂಡ ವೈದ್ಯರ ತಂಡ ತಾಲೂಕು ಕೇಂದ್ರದಲ್ಲಿ ಈ ಘಟಕ ಆರಂಭಿಸುವುದರಿಂದ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ರೇವಣ್ಣ ಸಹಕಾರದಿಂದ ಈ ಘಟಕ ಆರಂಭಿಸಲು ಸಾಧ್ಯವಾಯಿತೆಂದು ತಿಳಿಸಿದರು.
ವೈದ್ಯರಾದ ಡಾ.ನಟರಾಜ್ ಹಾಗೂ ಡಾ.ರೇಖಾ ಅವರು, ಡಯಾಲಿಸಿಸ್ ತರಬೇತಿ ಪಡೆದು ಬಂದಿದ್ದು ಇವರೊಂದಿಗೆ ನುರಿತ ನಾಲ್ವರು ದಾದಿಯರು ಡಯಾಲಿಸಿಸ್ ಘಟಕದಲ್ಲಿ ತಮ್ಮನು ತೊಡಗಿಸಿಕೊಳ್ಳಲಿದ್ದಾರೆ. ಈ ಘಟಕದಲ್ಲಿ ತಾಲೂಕಿನ ರೋಗಿಗಳಿಗೆ ಪ್ರಥಮ ಆಧ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಡಾ.ನಟರಾಜ್, ಡಾ.ವಿಜಯಕುಮಾರ್, ಡಾ.ಶ್ರೀನಿವಾಸಮೂರ್ತಿ ಇದ್ದರು.

'ಮಾನವೀಯ ಮೌಲ್ಯಗಳಿಂದ ಮನುಕುಲ ಉದ್ಧಾರ ಸಾಧ್ಯ'
ಕ.ಪ್ರ.ವಾರ್ತೆ ಅರಸೀಕೆರೆ ನ.19
ಮನುಕುಲದ ಉದ್ಧಾರ ಮತಗಳ ಆಚರಣೆ ಮತ್ತು ಸ್ವಾರ್ಥ ಮಾತುಗಳಿಂದ ಸಾಧ್ಯವಿಲ್ಲ. ಅದನು ಮೀರಿದ ಮಾನವೀಯ ಮೌಲ್ಯಗಳ ಆಚರಣೆಯಿಂದ ಮಾತ್ರ ಸಾಧ್ಯ ಎಂದು ಶಾಸಕ ಕೆ.ಎಂ.ಶಿವಲಿಂಗೌಡ ಹೇಳಿದರು.  ಪಟ್ಟಣ ಪುರಪ್ರವೇಶ ಮಾಡಿದ ಕನಕ ಸದ್ಭಾವನ ಜ್ಯೋತಿ ಯಾತ್ರೆಗೆ ಭವ್ಯ ಸ್ವಾಗತ ಕೋರಿದ ಅವರು ಪೂಜೆ ಸಲ್ಲಿಸಿ ಮಾತನಾಡಿದರು.
ಜಾತಿ ಮತ ಕುಲಧರ್ಮಗಳನು ಮೀರಿದ ದಾರ್ಶನಿಕ ಸಂತಶ್ರೇಷ್ಠ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಾರಿದ ತತ್ವ ಸಿದ್ಧಾಂತಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ. ಈ ಶ್ರೇಷ್ಠ ಸಂತರ ವಿಚಾರಧಾರೆಗಳ ಪುನರುತ್ಥಾನ ಸಮಾಜದ ಮುಂದಿನ ಸವಾಲಾಗಿದೆ ಎಂದು ಹೇಳಿದರು.     
ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ ಮಾತನಾಡಿ, ತತ್ವಜ್ಞಾನಿ ಕನಕದಾಸರು ತಮ್ಮ ಜೀವನದಲ್ಲಿ ಸಮಾನತೆಗಾಗಿ ಹೋರಾಡಿದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಸಾಮರಸ್ಯದ ಸಂಕೇತವಾಗಿ ನ.15 ರಂದು ಕಾಗಿನೆಲೆಯಿಂದ ಕನಕ ಸದ್ಭಾವನಾ ಜ್ಯೋತಿ ಯಾತ್ರೆಯನು ಆರಂಭಗೊಂಡಿದ್ದು, ನ.20 ರಂದು ಕನಕ ಜಯಂತಿ ದಿನದಂದು ಉಡುಪಿ ಶ್ರೀಕೃಷ್ಣ ದೇವಾಲಯ ತಲುಪಲಿದೆ ಎಂದರು.
ಕೆ.ಆರ್.ಪೇಟೆಯ ಕಾಗಿನೆಲೆ ಕನಕಗುರುಪೀಠದ ಶಿವಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಜಿಪಂ ಸದಸ್ಯ ಹುಚ್ಚೇಗೌಡ, ಮಾಜಿ ಉಪಾಧ್ಯಕ್ಷ ಬಂಡಿಗೌಡ್ರ ರಾಜಣ್ಣ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಟಿ.ಆರ್.ಕೃಷ್ಣಮೂರ್ತಿ, ತಾಪಂ ಸದಸ್ಯ ಲಕ್ಷ್ಮಣ್, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ, ಪುರಸಭಾ ಸದಸ್ಯ ಪಂಚಾಕ್ಷರಿ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ವಕೀಲರಾದ ಆದಿಹಳ್ಳಿ ಲೋಕೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement