ತಾಲೂಕು ವಿಜ್ಞಾನ ವಸ್ತು ಪ್ರದರ್ಶನಕ್ಕೆ ಪ್ರಶಂಸೆ
ಕ.ಪ್ರ.ವಾರ್ತೆ ಅರಸೀಕೆರೆ ನ.19
ತಾಲೂಕಿನ ಬಾಣಾವರ ಸಮೀಪವಿರುವ ಗುರುಕುಲ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ರಾಜ್ಯ ವಿಜ್ಞಾನ ಪರಿಷತ್, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಟ್ಟಣದ ಬಸವರಾಜೇಂದ್ರ ಡೆಮಾನ್ಸ್ಟೇಶನ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರದರ್ಶಿಸಿದ ವಿಜ್ಞಾನ ಮಾದರಿಗಳು ಪ್ರಶಸ್ತಿ ಗಳಿಸಿವೆ. 10ನೇ ತರಗತಿ ವಿದ್ಯಾರ್ಥಿನಿ ನವ್ಯ ಎಸ್.ಕೆ. ಹಾಗೂ ಸಹನ ಎಸ್. ಪ್ರದರ್ಶಿಸಿದ ಆರೋಗ್ಯ ಸಂಬಂಧಿ ಚಟುವಟಿಕೆಗಳ ಮಾದರಿ ಪ್ರಥಮ ಸ್ಥಾನ, ಇದೇ ತರಗತಿಯ ಭಾನು ಡಿ. ಹಾಗೂ ನಯನ ಆರ್. ಪ್ರದರ್ಶಿಸಿದ ವಿಜ್ಞಾನ ಮತ್ತು ಗಣಿತದ ಅನ್ವೇಷಣೆಗಳು ಪ್ರಥಮ ಸ್ಥಾನ ಗಿಟ್ಟಿಸಿವೆ. ಇದಲ್ಲದೆ 9ನೇ ತರಗತಿಯ ಪಲ್ಲವಿ ಹಾಗೂ 10ನೇ ತರಗತಿಯ ಕಾವ್ಯ ಕೆ. ಪ್ರದರ್ಶಿಸಿದ ಕೃಷಿ ಉಪಕರಣಗಳು ತೃತೀಯ ಸ್ಥಾನ ಪಡೆದವು. ಶಾಲೆಯ ಗಣಿತ ಶಿಕ್ಷಕ ಕೆ.ಆರ್.ದಯಾನಂದ್ ಶಿಕ್ಷಕರ ವೈಯಕ್ತಿಕ ವಿಭಾಗದಲ್ಲಿ ಪ್ರದರ್ಶಿಸಿದ ಗಣಿತದ ಮಾದರಿಗಳು ಪ್ರಥಮ ಸ್ಥಾನ ಗಳಿಸಿದೆ. ಈ ಮೂಲಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಈ ಮಾದರಿಗಳು ಜಿಲ್ಲಾ ಮಟ್ಟದ ಪ್ರಶಸ್ತಿ ಸುತ್ತು ತಲುಪಿವೆ. ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಾಧನೆಯನು ಯಳನಡು ಜಗದ್ಗುರು ವಿದ್ಯಾಸಂಸ್ಥೆಯ ಅಧ್ಯಕ್ಷ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಮುಖ್ಯ ಶಿಕ್ಷಕ ಜಿ.ಎಂ.ರಾಜಶೇಖರ್, ಶಿಕ್ಷಕವರ್ಗ, ಆಡಳಿತ ಮಂಡಳಿಯ ಸದಸ್ಯರು ಪ್ರಶಂಸಿಸಿದ್ದಾರೆ.
ಇಂದು ಕನಕ ಜಯಂತಿ
ಹಾಸನ: ಜಿಲ್ಲಾಡಳಿತ, ಕನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನಕ ಜಯಂತಿ ಆಚರಣಾ ಸಮಿತಿಯಿಂದ ನ.20 ರಂದು ಸಂತಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮೆರವಣಿಗೆಯ ಉದ್ಘಾಟನೆ ನೆರವೇರುವುದು. ಮೆರವಣಿಗೆಯಲ್ಲಿ ಎಲ್ಲಾ ಅಧಿಕಾರಿಗಳು, ನೌಕರರು, ನಾಗರಿಕರು, ಎಲ್ಲಾ ಸಮಾಜದ ಮುಖಂಡರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಜಾನಪದ ಕಲಾತಂಡಗಳು ಭಾಗವಹಿಸುವರು. ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಹಾಸನಾಂಬ ಕಲಾ ಕ್ಷೇತ್ರದವರೆಗೆ ನಡೆಯುವುದು. ಸಭಾ ಸಮಾರಂಭವು ಬೆಳಿಗ್ಗೆ 11.30ಕ್ಕೆ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯುವುದು. ಸಭಾ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಹಾಗೂ ಮಾಲಾರ್ಪಣೆಯನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೆರವೇರಿಸುವರು. ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಚ್.ಎಸ್.ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಡಿ.ಜಿ.ಅಂಬಿಕಾ ರಾಮಣ್ಣ, ಎಚ್.ಕೆ.ಕುಮಾರಸ್ವಾಮಿ, ಎ.ಮಂಜು, ವೈ.ಎನ್.ರುದ್ರೇಶಗೌಡ, ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಪಟೇಲ್ ಶಿವರಾಂ, ಬಿ.ಬಿ.ಶಿವಪ್ಪ, ಮರಿತಿಬ್ಬೇಗೌಡ, ಗೋ.ಮಧುಸೂದನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎಚ್.ಎಚ್.ವಿದ್ಯಾ ಆನಂದ್, ಬಿಳಿಚೌಡಯ್ಯ, ಡಿ.ರತಮ್ಮ ಹನುಮೇಗೌಡ, ಇರ್ಷಾದ್ಪಾಷಾ, ಪಟೇಲ್ ಶಿವಣ್ಣ ಉಪಸ್ಥಿತರಿರುವರು.