ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ಖಂಡನೀಯ

Srinivasa Murthy VN
Updated On : 20 Nov 2013, 12:18 pm

ಚನರಾಯಪಟ್ಟಣ: ಪಟ್ಟಣದಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಗೋಮಾಂಸ ಮಾರಾಟ ಅಂಗಡಿಗಳನು ತೆರವುಗೊಳಿಸುವ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮೇಲೆ ನಡೆಸಿರುವ ಹಲ್ಲೆ ಖಂಡನೀಯ. ಹಲ್ಲೆ ನಡೆಸಿದವರನು ಬಂಧಿಸಬೇಕು ಎಂದು ಜಿಲ್ಲಾ ಗೋ ಪರಿವಾರ ವೇದಿಕೆ ಸಂಚಾಲಕ ರಾಮಕೃಷ್ಣ ಒತ್ತಾಯಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಟ್ಟಣದಲ್ಲಿ ಹಿಂದಿನಿಂದಲೂ ಅನಧಿಕೃತ ಕಸಾಯಿಖಾನೆಗಳಿರುವ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ, ಪುರಸಭೆ ಹಾಗೂ ಪೊಲೀಸರು ಕ್ರಮ ತೆಗೆದುಕೊಂಡಿರಲಿಲ್ಲ. ಪುರಸಭಾ ಅಧ್ಯಕ್ಷರು ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದರಿಂದ ಅಧಿಕಾರಿ ಮೇಲೆ ಹಲ್ಲೆ ನಡೆಸಿದವರನು ಬಂಧಿಸುವತ್ತಾ ಮುಂದಾಗಬೇಕು ಎಂದು ಒತ್ತಾಯಿಸಿದರು.  ಪಟ್ಟಣದಲ್ಲಿ ಗೋಮಾಂಸ ಮಾರಾಟ ಮಾಡಲು ಮುಂದಿನ ದಿನಗಳಲ್ಲಿ ಪುರಸಭೆ ವತಿಯಿಂದ ಅನುಮತಿ ನೀಡಿದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.  ಕಸಾಯಿಖಾನೆಗಳನು ತೆರೆಯುವ ವಿಷಯದಲ್ಲಿ ಯಾವುದೇ ರಾಜಕೀಯ ಬೆರಸದೆ ಪಟ್ಟಣದಲ್ಲಿ ಶಾಂತಿ ಕಾಪಾಡಿಕೊಂಡು ಹೋಗಲು ಸಹಕರಿಸಬೇಕೆಂದು ಕೋರಿದರು. ಪಟ್ಟಣದಲ್ಲಿ ರೈತರ ಹೊರತುಪಡಿಸಿ ಕಸಾಯಿಖಾನೆಗೆ ಕೊಂಡೊಯ್ಯಲು ಮಾರುಕಟ್ಟೆಯಿಂದ ಸಾಗಿಸುವ ಜಾನುವಾರುಗಳನು ತಡೆಯಲು ಮುಂದಾಗುವುದಾಗಿ ತಿಳಿಸಿದರು. ತಾಲೂಕು ಘಟಕ ಕಾರ್ಯದಶಿ  ಮಂಜೇಗೌಡ, ಹರೀಶ್, ದೇವರಾಜು ಇದ್ದರು.

ಇಂದು ರಾಜವಾಡೆ ಜನ್ಮ ಶತಮಾನೋತ್ಸವ
ಸಕಲೇಶಪುರ: ತಾಲೂಕು ಕನಡ ಸಾಹಿತ್ಯ ಪರಿಷತ್ ಘಟಕ ಮತ್ತು ಜೈಕರ್ನಾಟಕ ಸಂಘ ಬೆಳ್ಳೆಕೆರೆ ಸಂಯುಕ್ತಾಶ್ರಯದಲ್ಲಿ ಕನಡ ರಾಜ್ಯೋತ್ಸವ ಅಂಗವಾಗಿ ಸರಸ್ವತೀಬಾಯಿ ರಾಜವಾಡೆ ಜನ್ಮ ಶತಮಾನೋತ್ಸವ  ಹಮ್ಮಿಕೊಳ್ಳಲಾಗಿದೆ. 20 ಬುಧವಾರ ಮಧ್ಯಾಹ 3 ಕ್ಕೆ  ಪಟ್ಟಣದ ಪುರಭವನದಲ್ಲಿ ರಾಜೆವಾಡೆಯವರ ಬದುಕು ಬರಹಗಳ ಬಗ್ಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ಸಂಜೆ 6 ಕ್ಕೆ ವ್ಯದೇಹಿ ನಿರೂಪಿಸಿರುವ ರಾಜೆವಾಡೆಯವರ ಆತ್ಮ ಚರಿತ್ರೆಯನು ಆಧರಿಸಿ ತೊಮರಿ ಕಿನರ ಮೇಳ ಪ್ರದರ್ಶಿಸುವ ಗಿರಿಬಾಲೆ ಎಂಬ ಏಕವ್ಯಕ್ತಿ ನಾಟಕ ನಡೆಯಲಿದೆ. ಶಾಸಕ ಎಚ್.ಕೆ.ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ತಾಲೂಕು ಕಸಾಪ ಅಧ್ಯಕ್ಷ ಎಸ್.ಎಂ.ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಜನಾರ್ದನ್, ಸಾಹಿತಿ ಡಾ.ಜಾನಕಿ ಸುಂದರೇಶ್, ಡಾ.ಕೇಶವ ಧರಣಿ, ಮುಗಳವಳ್ಳಿ, ನಿರ್ದೇಶಕ ಡಾ.ಕೆ.ಜೆ.ಕೃಷ್ಣಮೂರ್ತಿ, ಪುರಸಭಾಧ್ಯಕ್ಷ ಸತೀಶ್, ಚೆನವೇಣಿ ಎಂ.ಶೆಟ್ಟಿ ಭಾಗವಹಿಸಲಿದ್ದಾರೆ. ಎಲ್ಲಾ ಕನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಸಿ.ಪಿ.ಪ್ರಸನಕುಮಾರ್ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement