ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರುದ್ರೇಶ್ವರ ಸ್ವಾಮಿ ನೂತನ ದೇವಾಲಯ ಪ್ರಾರಂಭೋತ್ಸವ

Srinivasa Murthy VN
Updated On : 20 Nov 2013, 12:17 pm

ಜಾವಗಲ್: ಹೋಬಳಿಯ  ಮಠದಹೊಸಳ್ಳಿ ರುದ್ರೇಶ್ವರ ಸ್ವಾಮಿ ನೂತನ ದೇವಾಲಯ ಪ್ರಾರಂಭೊತ್ಸವ ಅಂಗವಾಗಿ ವಿಶೇಷ ಹೋಮ, ಪೂಜಾಕೈಂಕರ್ಯ ಶಾಸಕ ವೈ.ಎನ್.ರುದ್ರೇಶ್‌ಗೌಡ ಚಾಲನೆ ನೀಡಿದರು. ಮಠದ ಹೊಸಳ್ಳಿ ಮುಖ್ಯರಸ್ತೆಯಿಂದ ದೇವಸ್ಥಾನದ ವರೆಗೆ ಕಾಂಕ್ರಿಟ್ ರಸ್ತೆ ಮಾಡಿಸಿ ಕೊಡುವುದಾಗಿ ಈ ಸಂದರ್ಭದಲ್ಲಿ ಶಾಸಕರು ಭರವಸೆ ನೀಡಿದರು. ಹೋಬಳಿಯ 78 ಹಳ್ಳಿಗಳ ಪೈಕಿ ಸುಮಾರು 25 ಹಳ್ಳಿಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಕೂಡಲೆ ಸಮಸ್ಯೆ ಬಗೆಹರಿಸುವ ಸಲುವಾಗಿ ಕೊಳವೆಬಾವಿ ಮತ್ತು ಪೈಪ್‌ಲೈನ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಸುತ್ತಮುತ್ತಲ ಗ್ರಾಮಗಳ ಮುಖಂಡ ಪಟೇಲ್ ರಾಜಶೇಖರಯ್ಯ, ಶೇಖರಪ್ಪ, ವೀರಭದ್ರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಧರ್ಮಭೋವಿ, ಬಸವರಾಜು, ರಾಜಶೇಖರಪ್ಪ, ಶಂಕರಪ್ಪ, ಎಮ್.ಟಿ.ಬಸವರಾಜು, ನಿಂಗೇಗೌಡ, ಮಹೇಶಪ್ಪ ಇತರರು ಇದ್ದರು. ಪೂಜಾಕೈಂಕರ್ಯಗಳು ಜಾವಗಲ್ ಹೊನಪ್ಪಾಜಿ ನೇತೃತ್ವದಲ್ಲಿ ನಡೆದವು. ಮೂಡನಹಳ್ಳಿ ಬಸವೇಶ್ವರ ಸ್ವಾಮಿ, ಯಾದಪುರ ಜೇನುಕಲ್ ಸಿದ್ದೇಶ್ವರಸ್ವಾಮಿ, ಸಿಂಗನಹಳ್ಳಿ ಕಣಿವೆರಾಮಲಿಂಗೇಶ್ವರ ಸ್ವಾಮಿ, ನೀರಗುಂದ  ವೀರಭದ್ರೇಶ್ವರ ಸ್ವಾಮಿ, ಗ್ರಾಮದೇವತೆ ಹೋತನಕಲ್ಲಮ್ಮ ದೇವಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಕರವೇಯಿಂದ ರಾಜ್ಯೋತ್ಸವ, ಟಿಪ್ಪು ಜಯಂತಿ
ಹಾಸನ: ನಗರದ ಪೆನ್‌ಷನ್ ಮೊಹಲ್ಲಾ, ಶಾದಿ ಮಸೀದಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ವೇದಿಕೆಯಿಂದ 58ನೇ ಕನಡ ರಾಜ್ಯೋತ್ಸವ ಮತ್ತು 257ನೇ ಟಿಪ್ಪು ಜಯಂತಿ ಆಚರಿಸಲಾಯಿತು.  ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಇದೆ ವೇಳೆ ಬಡ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮತ್ತು ಗಣ್ಯ ವ್ಯಕ್ತಿಗಳಿಗೆ ಸನ್ಮಾನ ನಡೆಯಿತು. ಜಿಲ್ಲಾ ಸಂಚಾಲಕ ವಸಂತಕುಮಾರ್, ನಗರಾಧ್ಯಕ್ಷ ಶಿವು, ರಫೀದ್, ಚಲನಚಿತ್ರ ನಿರ್ದೇಶಕ ಎಂ.ಡಿ. ಹಾಶಮ್, ನಗರ ಪ್ರಧಾನ ಕಾರ್ಯದರ್ಶಿ ಸಮೀರ್ ಅಹಮದ್, ಗಿರೀಶ್, ವೈದ್ಯರಾದ ಬಸವರಾಜ್, ಆಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಶೀರ್ ಅಹಮದ್, ಅರುಣ್, ನೌಶತ್‌ಪಾಷಾ, ಶಕೀಜ್ ಇತರರು ಇದ್ದರು. ಸಮಾಜ ಸೇವಕ  ಸ್ವರೂಪ್ ನಿರೂಪಿಸಿದರು.

ಸ್ವರ್ಣ ಗೌರಮ್ಮ ವಿಸರ್ಜನೆ
ಜಾವಗಲ್: ಜಾವಗಲ್ ಹೋಬಳಿ ಮೊಸಳೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ 125ನೇ ವರ್ಷದ ಸ್ವರ್ಣ ಗೌರಮ್ಮನವರ ವಿಸರ್ಜನಾ  ಮಹೋತ್ಸವ ಇತ್ತೀಚೆಗೆ ನಡೆಯಿತು.  ಸುಮಾರು 45ಕ್ಕೂ ಹೆಚ್ಚು ದಿನಗಳ ಕಾಲ ಪ್ರತಿನಿತ್ಯ ವಿಶೇಷ ಪೂಜೆ, ಅರ್ಜನೆ, ಮಹಾಮಂಗಳಾರತಿ ಹಾಗೂ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಮತ್ತು ಸೇವಾ ಸಮಿತಿಯವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement