ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸರ್ಕಾರದಿಂದ ಪಕ್ಷಪಾತ ಧೋರಣೆ: ಶಿವಲಿಂಗೇಗೌಡ ಟೀಕೆ

Srinivasa Murthy VN
Updated On : 20 Nov 2013, 12:17 pm

ಕ.ಪ್ರ.ವಾರ್ತೆ ಅರಸೀಕೆರೆ ನ.19
ರಾಜ್ಯ ಕಾಂಗ್ರೆಸ್ ಸರ್ಕಾರ ಅರಸೀಕೆರೆ ತಾಲೂಕನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟು, ರಾಜಕೀಯ ಪಕ್ಷಪಾತ ಮಾಡುತ್ತಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅರಸೀಕೆರೆ ತಾಲೂಕು ಮಲೆನಾಡಿನ ಜಿಲ್ಲೆಯಲ್ಲಿದ್ದರೂ ಅಪ್ಪಟ ಬಯಲು ಸೀಮೆ ಪ್ರದೇಶವಾಗಿದೆ. ಅನೇಕ ವರ್ಷಗಳಿಂದ ಉತ್ತಮ ಮಳೆಯಿಲ್ಲದೆ ಬರಗಾಲದ ಬವಣೆಯನು ಅನುಭವಿಸುತ್ತಿದೆ. ಇಲ್ಲಿನ ಜನರು ಆರ್ಥಿಕ ಸಂಕಷ್ಟವನು ಸಹಿಸಲಾಗದೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿಗಳು ನಡೆಸಿದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಕೂಡಾ ತಾಲೂಕಿನ ಪರಿಸ್ಥಿತಿ ಬಗ್ಗೆ ಸ್ಪಷ್ಟ ಮಾಹಿತಿಗಳನು ನೀಡಿದ್ದರು.
ಇದೇ ಸಭೆಯಲ್ಲಿ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಅಲ್ಲದೆ  ಅಧಿವೇಶನದಲ್ಲಿ ಪಟೇಲ್ ಶಿವರಾಂ ಮತ್ತು ತಾವು ಕೂಡ ಈ ಬಗ್ಗೆ ಪ್ರಶಿಸಿದ ವೇಳೆ ಕೃಷಿ ಸಚಿವರು ಕೂಡ ಪರಿಸ್ಥಿತಿಯ ಸಂಪೂರ್ಣ ಅರಿವಿದ್ದು, ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ವಾಗ್ದಾನ ನೀಡಿದ್ದರು. ಆದರೆ ಈಗ ಸರ್ಕಾರ ಪ್ರಕಟಿಸಿರುವ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಅರಸೀಕೆರೆ ತಾಲೂಕನು ಕೈಬಿಟ್ಟಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದು ಹೇಳಿದರು.
ರಾಜ್ಯದ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕಾದ ಸರ್ಕಾರ ರಾಜಕೀಯ ಕಾರಣಗಳಿಗಾಗಿ ಪಕ್ಷಬೇಧ ಮಾಡಿ ಮಲತಾಯಿ ಧೋರಣೆ ಮಾಡುವುದು ಸರಿಯಲ್ಲ ಎಂದರು.
ಆದರೆ, ಬೇಲೂರು ಮತ್ತು ಅರಕಲಗೂಡು ಕ್ಷೇತ್ರಗಳ ಶಾಸಕರು ತಮ್ಮ ಕ್ಷೇತ್ರದಲ್ಲಿ ಅತಿವೃಷ್ಟಿ ಮಳೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಅವುಗಳ ದುರಸ್ಥಿ ಕಾಮಗಾರಿಗಳನು ಕೈಗೊಳ್ಳಲು ಸರ್ಕಾರ ಹಣ ನೀಡಬೇಕೆಂದು ವಿಧಾನಸಭೆಯಲ್ಲಿ ಮನವಿ ಮಾಡಿರುವುದು ಇನೂ ಹಚ್ಚಹಸಿರಾಗಿರುವಾಗಲೇ ಆ ಕ್ಷೇತ್ರಗಳು ಬರಪೀಡಿತ ಪಟ್ಟಿಯಲ್ಲಿರುವುದು ಸರ್ಕಾರದ ಪಕ್ಷಪಾತದ ನೀತಿಗೆ ಸಾಕ್ಷಿಯಾಗಿದೆ. ಈ ಹಿಂದಿನ ಯಾವುದೇ ಸರ್ಕಾರ ಇಂತಹ ಕೀಳುಮಟ್ಟದ ರಾಜಕಾರಣ ಮಾಡಿರಲಿಲ್ಲ ಎಂದು ಟೀಕಿಸಿದರು. ರಾಜ್ಯ ಸರ್ಕಾರದ ಈ ಕ್ರಮವನು ಮನವರಿಕೆ ಮಾಡಿಕೊಡಲು ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಬಳಿಗೆ ಸ್ಥಳೀಯ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳ ನಿಯೋಗವನು ಕರೆದೊಯ್ಯಲಾಗುವುದು. ಅಲ್ಲದೆ ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ತಾಲೂಕಿಗೆ ಉಂಟು ಮಾಡಿರುವ ಅನ್ಯಾಯದ ವಿರುದ್ಧ ಸದನದಲ್ಲಿ ಹೋರಾಟ ಮಾಡಲಾಗುವುದು. ಇದಕ್ಕೂ ಸರ್ಕಾರ ಮಾನ್ಯತೆ ನೀಡದಿದ್ದಲ್ಲಿ ತಾಲೂಕು ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ಪುರಸಭಾಧ್ಯಕ್ಷ ಮೋಹನ್‌ಕುಮಾರ್, ಧರ್ಮೇಶ್ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement