ಕನಕದಾಸರ ನೀತಿ, ತತ್ವಗಳು ಎಲ್ಲಾ ಜಾತಿ, ಧರ್ಮದವರಿಗೂ ಅನ್ವಯ: ಶಾಸಕ
ಕನಡಪ್ರಭ ವಾರ್ತೆ ಬೇಲೂರು ನ.20
ಕನಕದಾಸರ ನೀತಿ ತತ್ವಗಳು ಎಲ್ಲಾ ಜಾತಿ ಧರ್ಮದವರಿಗೂ ಅನ್ವಯವಾಗುವಂತಿದ್ದು, ಅವರು ವಿಶ್ವಮಾನವರಾಗಿದ್ದಾರೆ ಎಂದು ಶಾಸಕ ವೈ.ಎನ್.ರುದ್ರೇಶ್ಗೌಡ ಹೇಳಿದರು.
ತಾಲೂಕು ಕಚೇರಿಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮವನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ಭವನ ನಿರ್ಮಾಣ ಮಾಡಲು ಮುದಾದರೆ ಅದಕ್ಕೆ ಅನುದಾನ ನೀಡಲಾಗುತ್ತದೆ.
ಕನಕದಾಸರು, ಅಂದು ಬೇಧ ಭಾವ ತೊಡೆದು ಹಾಕುವಲ್ಲಿ ಪ್ರಯತ ಮಾಡಿದರು. ಅಂಧಕಾರ ಮತ್ತು ಮೂಢನಂಬಿಕೆ ವಿರುದ್ಧ ಕೀರ್ತನೆಗಳನು ರಚಿಸಿದ್ದಾರೆ. ತಮ್ಮ ಸರಳ ನಡೆ ನುಡಿಯಿಂದಾಗಿ ಕನಕದಾಸರು ಬಸವಣ್ಣ, ಅಂಬೇಡ್ಕರ್ ವಿಶ್ವ ಮಾನವರಾಗಿದ್ದಾರೆ. ಜಾತಿ ಜಾತಿಗಳ ವೈಮನಸ್ಸಿನಿಂದ ಆಂತರಿಕ ಕಲಹಗಳು ಹೆಚ್ಚಾಗುತ್ತಿದ್ದು ಮಹಾತ್ಮ , ದಾರ್ಶನಿಕರ ಜಯಂತಿ ಅಚರಣೆ ಆಚರಿಸುವುದರ ಅವರ ತತ್ವಗಳನು ನೆನಪು ಮಾಡಿಕೊಳ್ಳಲು ಒಂದು ಅವಕಾಶ ದೊರಕಿದಂತಾಗುತ್ತೆ ಎಂದು ಹೇಳಿದರು.
ತಹಸೀಲ್ದಾರ್ ಜಗದೀಶ್ ಮಾತನಾಡಿ, ಕನಕ, ಪುರಂದರದಾಸರು, ಬಸವಣ್ಣನವರು ಸಮಾಜದಲ್ಲಿನ ಜಾತಿಗಳ ವಿಷ ಬೀಜವನು ತೆಗೆಯುವಲ್ಲಿ ಹೋರಾಟ ಮಾಡಿದ್ದಾರೆ. ಈಗ ನಾವು 21 ನೇ ಶತಮಾನಕ್ಕೆ ಕಾಲಿಟ್ಟಿದ್ದರೂ ಜನಾಂಗೀಯ ಕಲಹ ಮಾತ್ರ ಇಂದಿಗೂ ನಿಂತಿಲ್ಲ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಡಿ.ಚಂದ್ರೇಗೌಡ, ಹೇಮಾವತಿ ಮಂಜುನಾಥ್, ಜಯಶೀಲ ಜಯಶಂಕರ್, ಜಿ.ಟಿ.ಇಂದಿರಾ ಧರ್ಮಪ್ಪ, ಅಮಿತ್‌ಶೆಟ್ಟಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುಮಿತ್ರ ರುದ್ರಯ್ಯ, ಸದಸ್ಯೆ ಕಮಲಚನಪ್ಪ, ಟಿ.ಡಿ.ತಮ್ಮಣ್ಣಗೌಡ, ಪುರಸಭಾ ಮಾಜಿ ಅಧ್ಯಕ್ಷ ಬಿ.ಸಿ.ಮಂಜುನಾಥ್, ಜೆಡಿಎಸ್ ಮುಖಂಡ ಕೆ.ಎಸ್.ಲಿಂಗೇಶ್, ಪುರಸಭಾ ಸದಸ್ಯ ಬಿ.ಎಲ್.ಧರ್ಮೇಗೌಡ ಇನೂ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.