ಮೌಲ್ಯಮಾಪನ ಅಕ್ರಮಕ್ಕೆ ಮತ್ತೊಂದು ತನಿಖೆ
-ದೇವರಾಜ್ ಎಲ್.
ಬೆಂಗಳೂರು: ಅಕ್ರಮ ಮೌಲ್ಯಮಾಪನ ಕುರಿತು ಕೆಲ ದಿನಗಳ ಹಿಂದಷ್ಟೇ ತನಿಖೆ ನಡೆಸಿದ್ದ ತಾಂತ್ರಿಕ ಶಿಕ್ಷಣ ಇಲಾಖೆಗೆ ಇದೀಗ ಮತ್ತೊಂದು ತನಿಖೆ ನಡೆಸುವ ಪರಿಸ್ಥಿತಿ ಎದುರಾಗಿದೆ.
ಅಂತರಿಕ ಮೌಲ್ಯಮಾಪನ ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ನೀಡಲು ವಿದ್ಯಾರ್ಥಿಗಳಿಂದ ಉಪನ್ಯಾಸಕರೇ ಹಣ ಪೀಕುತ್ತಾರೆ ಎಂಬ ದೂರು ಬಂದಿರುವುದರಿಂದ ತನಿಖೆ ನಡೆಸಲು ಇಲಾಖೆ ನಿರ್ಧರಿಸಿದೆ.
ಹಾಸನದ ಸರ್ಕಾರಿ ಎಲ್.ವಿ. ಪಾಲಿಟೆಕಿಕ್ನ ಮುಖ್ಯಸ್ಥರೊಬ್ಬರು ಪ್ರಾಯೋಗಿಕ ಪರೀಕ್ಷೆ ಮತ್ತು ಅಂತರಿಕ ಮೌಲ್ಯಮಾಪನ ಅಂಕಗಳನು ನೀಡಲು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿರುವ ಅಂಶ ಈಗ ಬೆಳಕಿಗೆ ಬಂದಿದೆ.
25 ಅಂಕಗಳ ಆಂತರಿಕ ಮೌಲ್ಯಮಾಪನ ಮತ್ತು 125 ಅಂಕಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನು ನೀಡಲು ಈ ಮುಖ್ಯಸ್ಥರು ವಿದ್ಯಾರ್ಥಿಗಳಿಂದ ಸಾವಿರಾರು ರುಪಾಯಿ ಸುಲಿಗೆ ಮಾಡುತ್ತಿದ್ದಾರೆ. ಹಣ ಕೊಡದವರಿಗೆ ಪರೀಕ್ಷೆಯಲ್ಲಿ ಹೇಗೆ ಉತ್ತೀರ್ಣ ಆಗುವೆಯೋ ನಾನೂ ನೋಡುತ್ತೇನೆ? ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆ ಕಾಲೇಜಿನಲ್ಲಿ ಓದಿ ಅನ್ಯಾಯಕ್ಕೆ ಒಳಗಾಗಿದ್ದ ವಿದ್ಯಾರ್ಥಿಗಳೀಗ ಹೊರಬಂದು ತಾಂತ್ರಿಕ ಶಿಕ್ಷಣ ಇಲಾಖೆಗೆ ದೂರು ರವಾನಿಸಿದ್ದಾರೆ.
ಇಲಾಖೆಗೆ ದೂರು:
ಹಳೆಯ ವಿದ್ಯಾರ್ಥಿ ಕೆ.ಕೆ. ಸಂತೋಷ್ ಎಂಬುವರು ಸ್ವಯಂ ಚಾಲಿತ ವಿಭಾಗ(ಅಟೊಮೊಬೈಲ್)ದ ಮುಖ್ಯಸ್ಥರಾದ ವೆಂಕಟೇಶ್ ಅವರ ವಿರುದ್ಧ ದೂರು ನೀಡಿದ್ದಾರೆ.
ಹಣ ಕೊಡದಿದ್ದರೆ ಥಿಯರಿ ಮತ್ತು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಕನಿಷ್ಠ ಅಂಕಗಳನು ನೀಡುವುದಾಗಿ ಮತ್ತು ಅನುತ್ತೀರ್ಣ ಮಾಡುವುದಾಗಿ ಬೆದರಿಸಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಂದ ವೆಂಕಟೇಶ್ ಅವರು ಸಾವಿರಾರು ರು. ಹಣ ವಸೂಲಿ ಮಾಡುತ್ತಿದ್ದಾರೆ. ಪರೀಕ್ಷೆಗಳಲ್ಲಿ ಕಡಿಮೆ ಅಂಕ ನೀಡುವುದಾಗಿ ಬೆದರಿಸಿ ಪ್ರತಿ ವಿದ್ಯಾರ್ಥಿಯಿಂದ 2000 ಕೀಳುತ್ತಿದ್ದಾರೆ. ವೆಂಕಟೇಶ್ ಅವರು ಬೆದರಿಕೆ ಹಾಕಿರುವುದರಿಂದ ಎಲ್ಲ ವಿದ್ಯಾರ್ಥಿಗಳು ದೂರು ನೀಡಲು ಮುಂದೆ ಬರುತ್ತಿಲ್ಲ. ವೆಂಕಟೇಶ್ ಅವರಿಂದ ದೌರ್ಜನ್ಯಕ್ಕೆ ಒಳಗಾದ ಹಲವಾರು ಹಳೆಯ ವಿದ್ಯಾರ್ಥಿಗಳು ದಾಖಲೆ ಸಮೇತ ನಿಮ್ಮ ಮುಂದೆ ಬರಲು ತಯಾರಿದ್ದೇವೆ. ತಾವುಗಳು ನಮ್ಮ ದೂರನು ಪರಿಶೀಲಿಸಿ ವೆಂಕಟೇಶ್ ಅವರು ಮಾಡಿರುವ ಅನ್ಯಾಯಗಳ ಬಗ್ಗೆ ತನಿಖೆ ಮಾಡಿ ಕಾನೂನು OÚÃÈÚßOæçVÚæà×ÚßÙÈÚM}æ’ ಪತ್ರದಲ್ಲಿ ವಿದ್ಯಾರ್ಥಿಗಳು ಕೋರಿದ್ದಾರೆ.
ಮೊದಲೇ ವರ್ಗಾವಣೆ:
ಈ ಹಿಂದೆ ತಾಂತ್ರಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಆನಂದ ಪೂಜಾರಿ ಅವರು ವೆಂಕಟೇಶ್ ಅವರನು ಹಾಸನದಿಂದ ಕಾರವಾರಕ್ಕೆ ವರ್ಗಾವಣೆ ಮಾಡಿದ್ದರು. ಆದರೆ, ಇದೀಗ ದೂರು ಬಂದಿರುವ ಹಿನೆಲೆಯಲ್ಲಿ ಅವರನು ಮತ್ತೆ ಹಾಸನ ಕಾಲೇಜಿಗೆ ಕರೆದು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ತನಿಖೆ ಪ್ರಾರಂಭಿಸುವುದಾಗಿ ಪೂಜಾರಿ ಅವರು “OÚ«ÚòsÚ®ÚúڒOæQ ತಿಳಿಸಿದ್ದಾರೆ.
ಸುತ್ತೋಲೆಗೆ ಬೆಲೆ ಇಲ್ಲ: ವಿದ್ಯಾರ್ಥಿಗಳಿಂದ ಈ ರೀತಿಯ ದೂರುಗಳು ಸಾಕಷ್ಟು ವರ್ಷಗಳಿಂದ ಇಲಾಖೆಗೆ ಬರುತ್ತಲೇ ಇವೆ. ಈ ಹಿನೆಲೆಯಲ್ಲಿ 2011ರಲ್ಲಿ ಇಲಾಖೆ ಒಂದು ಸುತ್ತೋಲೆ ಹೊರಡಿಸಿತ್ತು. ಇಲಾಖೆ ಅಧೀನದಲ್ಲಿರುವ ಪಾಲಿಟೆಕಿಕ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಉಪನ್ಯಾಸಕರು ಮನೆಪಾಠಕ್ಕೆ ಸೇರಿಕೊಳ್ಳುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಬಾರದು. ಅಲ್ಲದೆ, ಆಂತರಿಕ ಮೌಲ್ಯಮಾಪನಕ್ಕೆ ಹಣ ವಸೂಲಿ ಮಾಡುತ್ತಿರುವ ಬಗ್ಗೆ ವರದಿ ಪಡೆಯಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ ಎಂಬುವುದು ಈ ದೂರಿನಿಂದ ತಿಳಿದು ಬರುತ್ತಿದೆ.