ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಆತ್ಮರಕ್ಷಣೆಗೆ ಕರಾಟೆ ಮಹಿಳೆಗೆ ಅತೀ ಅವಶ್ಯ'

Srinivasa Murthy VN
Updated On : 22 Nov 2013, 12:45 pm

ಆಲೂರು: ಇಂದಿನ ಸೂಕ್ಷ್ಮ ಪರಿಸ್ಥಿತಿಯಲ್ಲಿ ತಮ್ಮ ಆತ್ಮ ರಕ್ಷಣೆಗಾಗಿ  ಹೆಣ್ಣು ಮಕ್ಕಳು ಕರಾಟೆ ಕಲಿಯಬೇಕೆಂದು ಬಿಇಓ ಪುಷ್ಪಲತ ತಿಳಿಸಿದರು. ಅವರು ಪಟ್ಟಣದ ಸ.ಪ.ಪೂ.ಕಾಲೇಜಿನಲ್ಲಿ  ಹೆಣ್ಣು ಮಕ್ಕಳಿಗೆ ಕರಾಟೆ ತರಗತಿ ಉದ್ಘಾಟಿಸಿ ಮಾತನಾಡಿ, ಕರಾಟೆ ಒಂದು ಕಲೆ ಎನ್ನುವುದಕ್ಕಿಂತ ದೈಹಿಕ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಪ್ರತಿ ದಿನ  ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿದ್ದು ಹೆಣ್ಣು ಮಕ್ಕಳು ಕರಾಟೆ ಕಲಿತಿದ್ದರೆ ಇಂತಹ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬಹುದು ಎಂದರು. ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಿಗೆ ಈ ನಿಟ್ಟಿನಲ್ಲಿ 12 ದಿನಗಳ ತರಬೇತಿ ನೀಡಲಾಗಿದ್ದು  ಪ್ರತಿ ದಿನ ಕರಾಟೆಯ 1 ತರಗತಿ ಇರುತ್ತದೆ. ನೂಡಲ್ ಅಧಿಕಾರಿ ಮಹಮದ್ ಜಬೀಉಲ್ಲಾ ತಾಲೂಕಿನ 10 ಶಾಲೆಗಳಿಗೆ ಭೇಟಿ ನೀಡುತ್ತಿದ್ದು  ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement