ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಹಾರ ಭದ್ರತೆ; ಜಾಗೃತಿ ಜಾಥಾ

Srinivasa Murthy VN
Updated On : 22 Nov 2013, 12:43 pm

ಕ.ಪ್ರ.ವಾರ್ತೆ ಅರಕಲಗೂಡು ನ. 21
ಸರ್ಕಾರ ಪ್ರತಿಯೊಬ್ಬರಿಗೂ ಆಹಾರ ಧಾನ್ಯಗಳು ದೊರಕಬೇಕೆಂದು ಆಹಾರ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಹೊನ್ನವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪುಟ್ಟಮ್ಮ ತಿಳಿಸಿದರು.
ಕೇಂದ್ರ ಕ್ಷೇತ್ರ  ಪ್ರಚಾರ ನಿರ್ದೇಶನಾಲಯ, ಆಹಾರ ಇಲಾಖೆ, ವಾರ್ತಾ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಅರಕಲಗೂಡು, ಗ್ರಾಮ ಪಂಚಾಯ್ತಿ ಹೊನ್ನವಳ್ಳಿ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಹೊನ್ನವಳ್ಳಿ ಗ್ರಾಮಪಂಚಾಯ್ತಿಯ ನೈಗೆರೆ ಗ್ರಾಮದಲ್ಲಿ ನಡೆದ, ಆಹಾರ ಭದ್ರತೆ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಡಜನರಿಗೆ  ಅಗ್ಗದ ದರದಲ್ಲಿ ಆಹಾರ ಧಾನ್ಯಗಳನ್ನು  ಒದಗಿಸಲು ಆಹಾರ ಮಸೂದೆಯನ್ನು ಜಾರಿಗೆ  ತಂದಿರುವ ಕೇಂದ್ರ ಸರ್ಕಾರ ಪ್ರತಿಯೊಬ್ಬ ಅರ್ಹರಿಗೂ ಹಾಗೂ ನಿಗಧಿಪಡಿಸಿದ ದರದಲ್ಲಿ  ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ  ಆಹಾರ ಧಾನ್ಯಗಳನ್ನು ನೀಡುವ ಯೋಜನೆಯನ್ನು ರಾಜ್ಯ ಸರ್ಕಾರಗಳ ಮೂಲಕ ಜಾರಿಗೆ  ತಂದಿದ್ದು, ಇದರ ಸದುಪಯೋಗವನ್ನು  ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದರು.
ತಾ. ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ನಿರ್ಮಲ ಮಾತನಾಡಿ, ಪೌಷ್ಠಿಕಾಂಶಯುಕ್ತ ಆಹಾರವನ್ನು  ಕಿಶೋರಿಯವರಿಗೂ ಸೇರಿದಂತೆ ಅರ್ಹ ಫಲಾನುಭವಿಗಳಿಗೂ ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತಿದ್ದು, ಅರ್ಹರು ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು ಹಾಗೂ ಇಲಾಖೆಯಲ್ಲಿ ಮಹಿಳೆಯರಿಗಾಗಿ ಹಲವಾರು  ಸೌಲಭ್ಯಗಳನ್ನು ವಿವರಿಸಿದರು.
 ಹೊನ್ನವಳ್ಳಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ನಂದಿಗ ಮಾತನಾಡಿ, ಪ್ರತಿಯೊಬ್ಬರೂ ಶೌಚಾಲಯ ನಿರ್ಮಿಸಿಕೊಳ್ಳಲು  ನಿರ್ಮಲ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಅವಕಾಶವಿದ್ದು, ಬಯಲುಮುಕ್ತ ಶೌಚಾಲಯವನ್ನು ನಿರ್ಮಿಸಲು ಗ್ರಾಮದವರ ಸಹಕಾರ ಪ್ರಮುಖವಾಗಿದೆ  ಹಾಗೂ ಎಂಜಿಎನ್‌ಆರ್‌ಇಜಿಎ, ಎನ್‌ಆರ್‌ಎಚ್‌ಎಂ, ಐವೈಎ ಮುಂತಾದ ಯೋಜನೆಗಳು ಜಾರಿಯಲ್ಲಿದ್ದು, ಅರ್ಹರು ಇದರ ಪ್ರಯೋಜವನ್ನು ಪಡೆದುಕೊಳ್ಳಬೇಕೆಂದರು.
ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಿಕ್ಕೇಗೌಡ ವಹಿಸಿ ಮಾತನಾಡಿ, ಇಲಾಖೆಗಳು ಇಂತಹ ಜಾಗೃತಿ ಕಾರ್ಯಕ್ರಮಗಳ ಮುಖಾಂತರ ಗ್ರಾಮಗಳಲ್ಲಿ ತಲುಪಿಸುವಲ್ಲಿ ಶ್ರಮಿಸುತ್ತಿರುವುದನ್ನು ಶ್ಲಾಘಿಸಿದರು.
ಶಾಲಾ ಮುಖ್ಯೋಪಾಧ್ಯಾಯ ವೆಂಕಟೇಶ್‌ಮೂರ್ತಿ, ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು. ಕ್ಷೇತ್ರ ಪ್ರಚಾರ ಸಹಾಯಕ ಪ್ರಕಾಶ್ ಪ್ರಾಸ್ತಾವಿಕ  ಭಾಷಣ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಪಿ.ರತ್ನಮ್ಮ ಸ್ವಾಗತಿಸಿದರು. ಕಾಂತಮಣಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement