ಗ್ರಂಥಾಲಯ ಜ್ಞಾನ ಭಂಡಾರ: ರವಿಶಂಕರ್
ಆಲೂರು: ಗ್ರಂಥಾಲಯವೆಂಬುದು ದೇಶವನ್ನೇ ತನ್ನಲ್ಲಿ ಅಡಗಿಸಿಕೊಂಡಿರುವ ಮಹಾ ಜ್ಞಾನ ಭಂಡಾರ ಎಂದು ಬಿಆರ್ಸಿ ರವಿಶಂಕರ್ ಹೇಳಿದರು. ಪಟ್ಟಣದ ಶಾಖಾ ಗ್ರಂಥಾಲಯದಲ್ಲಿ ಶಾಖಾ ಗ್ರಂಥಾಲಯ, ಕಸಾಪ ಹಾಗು ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಗ್ರಂಥಾಲಯ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಓದು ನಿರಂತರವಾಗಿರ ಬೇಕು.ವಿದ್ಯಾರ್ಥಿಗಳು ಶಾಲೆಯಲ್ಲಿ ಓದುತ್ತಾರೆ. ಶಾಲೆಯಲ್ಲಿ ಓದಲಾಗದವರ ಪಾಲಿಗೆ ಗ್ರಂಥಾಲಯ ವರದಾನವಿದ್ದಂತೆ. ಯಾವುದೇ ದುರಭ್ಯಾಸಗಳಿಂದ ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು. ಗ್ರಂಥಾಲಯ ದೇಗುಲವಿದ್ದಂತೆ ಎಂದ ಅವರು, ಹಿಂದೆ ಪುಸ್ತಕಗಳನ್ನು ಕೊಳ್ಳಲಾಗದವರು ಅಥವಾ ಸಂಬಂಧ ಪಟ್ಟ ವಿಷಯಗಳ ಕುರಿತಂತೆ ಮಾಹಿತಿ ಬೇಕಾದಾಗ ಗ್ರಂಥಾಲಯ ಮೋರೆ ಹೋಗುತ್ತಿದ್ದರು. ಈ ದಿನಗಳಲ್ಲಿ ಓದುವ ಆಸಕ್ತಿ ಕಡಿಮೆಯಾಗಿದೆ. ಮಕ್ಕಳಾದಿಯಾಗಿ ಎಲ್ಲರೂ ಕೋಶವನ್ನು ಓದುವ ಉತ್ತಮ ಅಭ್ಯಾಸವನ್ನು ಇಟ್ಟುಕೊಳ್ಳಬೇಕೆಂದರು. ಇದೇ ವೇಳೆ ಅಗಸರ ಹಟ್ಟಿ ವೆಂಕಟೇಗೌಡರನ್ನು ಸನ್ಮಾನಿಸಲಾಯಿತು.