ನಗರದಲ್ಲಿ 23-24 ರಂದು ಹೇಮಾವತಿ ನೀರಿಲ್ಲ
ಹಾಸನ: ನಗರಕ್ಕೆ ನೀರು ಸರಬರಾಜು ಮಾಡುವ ಹೇಮಾವತಿ ಜಾಕ್ವೆಲ್ನ ಗೊರೂರು ನೀರು ಸರಬರಾಜು ಕೇಂದ್ರದಲ್ಲಿರುವ 750 ಮಿಮೀ.ವ್ಯಾಸದ ಜಾಕ್ವೆಲ್ ಏರುಕೊಳವೆ ಮಾರ್ಗ, ಹೌಸಿಂಗ್ಬೋರ್ಡ್ನಲ್ಲಿರುವ ಮೇಲ್ಮಟ್ಟದ ಜಲ ಸಂಗ್ರಹಾಗಾರದ ಏರು ಕೊಳವೆ ಮಾರ್ಗ ಮತ್ತು ಸಾಲಗಾಮೆ ಮುಖ್ಯ ರಸ್ತೆ ಹಾಗೂ ಹೇಮಾವತಿ ನಗರದ 1ನೇ ಮೈನ್ನಲ್ಲಿ ನಗರದ ಜಯನಗರ ಜಿಎಲ್ಎಸ್ಆರ್ ಹಾಗೂ ಶಾಂತಿ ನಗರ ಮೇಲ್ಮಟ್ಟದ ಜಲಸಂಗ್ರಹಾಗಾರಕ್ಕೆ ಏರು ಕಾಂಕ್ರಿಟ್ ಪೈಪ್ಗಳ ದುರಸ್ಥಿ ಕೆಲಸವನ್ನು ನ. 23 ರಂದು ಮಾಡುತ್ತಿರುವುದರಿಂದ ನ.23 ಮತ್ತು 24ರಂದು ಎರಡು ದಿನಗಳು ಹೇಮಾವತಿ ನೀರು ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ. ಎಂದಿನಂತೆ ಬೋರ್ವೆಲ್ಗಳಿಂದ ನೀರು ಸರಬರಾಜು ಮಾಡಲಾಗುವುದು. ಸಾರ್ವಜನಿಕರು ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತರುಕೋರಿದ್ದಾರೆ.