ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಕ್ಕಳಲ್ಲಿ ಇಂಟರ್‌ನೆಟ್ ಪಾರ್ಲರ್ ವ್ಯಾಮೋಹ: ರವಿಕುಮಾರ್ ಆತಂಕ

Srinivasa Murthy VN
Updated On : 22 Nov 2013, 12:44 pm

ಅರಕಲಗೂಡು: ಇಂದಿನ ದಿನಗಳಲ್ಲಿ ಮಕ್ಕಳು ಪುಸ್ತಕ ಓದುವ ಹವ್ಯಾಸದಿಂದ ದೂರ ಉಳಿದು ಇಂಟರ್‌ನೆಟ್ ಪಾರ್ಲರ್‌ಗಳ ಕಡೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ ಮಕ್ಕಳು ಇಂಟರ್‌ನೆಟ್‌ಗಳಲ್ಲಿ ಉತ್ತಮ ಮಾಹಿತಿ ಪಡೆಯುತ್ತಿದ್ದಾರೆಯೇ ಎಂಬುದನ್ನೂ ಪೋಷಕರು ಅರಿಯಬೇಕಾದ ಅವಶ್ಯಕತೆ ಇದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮತ್ತು ಕೆಜೆಪಿ ಮುಖಂಡ ಎನ್.ರವಿಕುಮಾರ್ ತಿಳಿಸಿದ್ದಾರೆ. ಇಲ್ಲಿನ ಅ.ನ.ಕೃ ಸ್ಮಾರಕ ಗ್ರಂಥಾಲಯದಲ್ಲಿ ಆಯೋಜಿಸಲಾಗಿದ್ದ ಗ್ರಂಥಾಲಯ ಸಪ್ತಾಹದಲ್ಲಿ ಪಾಲ್ಗೊಂಡಿದ್ದ ಅವರು ಮಕ್ಕಳು ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪಾಲಕರೂ ಚಿಕ್ಕ ವಯಸ್ಸಿನಿಂದಲೇ ಇಂತಹ ಹವ್ಯಾಸ ಬೆಳೆಸಲು ಅಗತ್ಯ ಪ್ರೋತ್ಸಾಹ ನೀಡಬೇಕು ಎಂದರು. ಶಾಖಾ ಗ್ರಂಥಾಲಯ ಅಧಿಕಾರಿ ಜಯಣ್ಣ ಮಾತನಾಡಿ ಉದ್ಯೋಗ ಕ್ಷೇತ್ರ ಸ್ಪರ್ಧಾತ್ಮಕವಾಗಿ ಹೆಚ್ಚು ಪ್ರಭಾವಶಾಲಿಯಾಗುತ್ತಿರುವಾಗ ಇಂದಿನ ಯುವ ಸಮುದಾಯ ಗ್ರಂಥಾಲಯಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಪಪಂ ಸದಸ್ಯ ವಾಟಾಳ್ ರಮೇಶ್,ಮಂಜು, ಉಪನ್ಯಾಸಕ ವಿಜಯಕುಮಾರ್,ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement