ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ರೇಷ್ಮೆ ಕೃಷಿಯಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಳಿ'್ಳ

Srinivasa Murthy VN
Updated On : 22 Nov 2013, 12:43 pm

ಹೊಳೆನರಸೀಪುರ: ರೇಷ್ಮೆ ಇಲಾಖೆಯ ಯೋಜನೆಗಳ ಅಡಿಯಲ್ಲಿ ಸಹಾಯಧನ ಪಡೆದು, ಇದರ ಸದ್ಬಳಕೆ ಮಾಡಿಕೊಂಡು ರೇಷ್ಮೆ ಕೃಷಿಯಲ್ಲಿ ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಬೆಳೆ ಪಡೆಯುವ ಮೂಲಕ ಸಬಲರಾಗುವಂತೆ ಜಿಲ್ಲೆಯ ರೇಷ್ಮೆ ಕೃಷಿ ಉಪ ನಿರ್ದೇಶಕ ಸಿ.ಶಿವನಾಗೇಂದ್ರಬಾಬು  ರೇಷ್ಮೆ ಬೆಳೆಗಾರರಿಗೆ ಕಿವಿಮಾತು ಹೇಳಿದರು. ಅವರು ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ರೇಷ್ಮೆ ಇಲಾಖೆ ಹಾಗೂ ಹಾಸನದ ರೇಷ್ಮೆ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಐದು ದಿನಗಳ ಕೆಟಲಿಟಿಕ್ ಅಭಿವೃದ್ಧಿ ಯೋಜನೆಯ ಬಲವರ್ಧನೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಟೆಲಿಟಿಕ್ ಅಭಿವೃದ್ಧಿ ಯೋಜನೆಯಡಿಯಲ್ಲಿ ಹುಳು ಸಾಕಾಣಿಕೆ ಉಪಕರಣಗಳು, ಪ್ಲಾಸ್ಟಿಕ್ ಚಂದ್ರಿಕೆಗಳು, ಹೊಸದಾಗಿ ಹಿಪ್ಪುನೇರಳೆ ನಾಟಿಗೆ ಪ್ರೋತ್ಸಾಹ ಧನ, ರೇಷ್ಮೆ ಹುಳು ಸಾಕಾಣಿಕೆ ಮನೆಗೆ ಸಹಾಯ ಧನ, ಹುಳು ಸಾಕಾಣಿಕೆ ಸಲಕರಣೆಗೆ ಸಹಾಯಧನ, ತೋಟ ಕಟಾಯಿಸುವ ಯಂತ್ರ, ದ್ವಿತಳಿ ಗೂಡಿಗೆ ಪ್ರೋತ್ಸಾಹ ಧನ ಹಾಗೂ ಉಪಕರಣಗಳಿಗೆ ಸಹಾಯಧನವನ್ನು ಈ ಯೋಜನೆಯಡಿಯಲ್ಲಿ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ರೇಷ್ಮೆ ಸಹಾಯಕ ನಿರ್ದೇಶಕ ಕೈಲಾಸಮೂರ್ತಿ ಮಾತನಾಡಿ, ಸಮಗ್ರ ರೇಷ್ಮೆ ಅಭಿವೃದ್ಧಿ ಯೋಜನೆಯು ವಿಶ್ವ ಬ್ಯಾಂಕ್ ನೆರವಿನ ರೇಷ್ಮೆ ಯೋಜನೆಗಳ ಅನುಷ್ಠಾನದಿಂದಾಗಿ ಸಾಂಪ್ರದಾಯಿಕ ಪ್ರದೇಶಕ್ಕೆ ಸೀಮಿತವಾಗಿದ್ದ ಹಿಪ್ಪುನೇರಳೆ ವ್ಯವಸಾಯವು ಇತ್ತೀಚಿನ ದಿನಗಳಲ್ಲಿ ಹೊಸ ಜಿಲ್ಲೆಗಳಿಗೂ ಆವರಿಸಲಾರಂಭಿಸಿದೆ ಎಂದರು.
ರೇಷ್ಮೆ ತರಬೇತಿ ಸಂಸ್ಥೆ ಉಪ ನಿರ್ದೇಶಕ ಸಂಗಯ್ಯ ಮಾತನಾಡಿ, ಐದು ದಿನಗಳ ಕಾಲ ನಡೆಯುವ ರೇಷ್ಮೆ ಕೃಷಿಯ ತರಬೇತಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದರಲ್ಲದೆ, ರೇಷ್ಮೆ ಕೃಷಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಮುಂಚೂಣಿಗೆ ಬರುತ್ತಿದ್ದು, ರೇಷ್ಮೆ ವ್ಯವಸಾಯವು ಹೆಚ್ಚಾಗಿ ನೂಲು ಬಿಚ್ಚಾಣಿಕೆ ಕೇಂದ್ರಗಳ ಸ್ಥಾಪನೆಯಿಂದಾಗಿ ರಾಷ್ಟ್ರದಲ್ಲಿಯೇ ಕರ್ನಾಟಕ ರಾಜ್ಯದ ರೇಷ್ಮೆ ಅಭಿವೃದ್ಧಿಯಿಂದಾಗಿ ಇದನ್ನು ಅವಲಂಬಿಸಿರುವ ಲಕ್ಷಾಂತರ ಕುಟುಂಬಗಳ ಜೀವನ ಹಸನಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ ರೇಷ್ಮೆ ಬೆಳೆಯನ್ನು ಕೈಗೊಂಡಿರುವ ಆಯ್ದ ಕೃಷಿಕರಿಗೆ ಐದು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಸೂಕ್ತ ತರಬೇತಿ ನೀಡಲಾಗುವುದಲ್ಲದೆ, ಕಡೆಯ ಎರಡು ದಿನಗಳ ಕಾಲ ರೇಷ್ಮೆ ಬೆಳೆಯಲ್ಲಿ ಸಾಧನೆ ತೋರಿರುವ ಪ್ರಗತಿಪರ ರೇಷ್ಮೆ ಕೃಷಿಕರ ತೋಟ, ಹುಳು ಸಾಕಾಣಿಕೆ ಮನೆ, ಹಾಗೂ ಅಳವಡಿಸಿಕೊಂಡಿರುವ ರೇಷ್ಮೆ ತಂತ್ರಜ್ಞಾನ ಬಳಕೆಯ ಕುರಿತಂತೆ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ರೇಷ್ಮೆ ಅಧಿಕಾರಿ ಕೈಲಾಸಮೂರ್ತಿ ತಿಳಿಸಿದರು. ಇಲಾಖೆಯ ಅಧಿಕಾರಿ ಸುಬ್ರಹ್ಮಣ್ಯ, ವೆಂಕಟರಾಮು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement