ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಸಮಾನತೆ ಹೋಗಲಾಡಿಸಲು ಶ್ರಮಿಸಿದ ಮಹಾನ್‌ನಾಯಕ ಕನಕ: ಶಾಸಕ

Srinivasa Murthy VN
Updated On : 23 Nov 2013, 1:31 am

ಸಕಲೇಶಪುರ: ತತ್ವ ಪದಗಳ ಮೂಲಕ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ ಮಹಾನ್ ನಾಯಕ ಕನಕದಾಸರು ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು. ತಾಲೂಕು ನಾಡಹಬ್ಬಗಳ ಸಮಿತಿ ಪುರಭವನದಲ್ಲಿ ಆಯೋಜಿಸಿದ್ದ 526 ನೇ ಕನಕಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 500 ವರ್ಷಗಳ ಹಿಂದೆ ಸಮಾಜದಲ್ಲಿದ್ದ ಅಸಮಾನತೆ, ಜಾತಿ ತಾರತಮ್ಯ ಹೋಗಲಾಡಿಸಲು ತಮ್ಮ ವಿಶಿಷ್ಟ ಕೀರ್ತನೆಗಳ ಮೂಲಕ ಜನಜಾಗೃತಿ ಮೂಡಿಸಿದ ಈ ಸಂತರು ಇಂದಿನ ಸಮಾಜಕ್ಕೂ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು. ದೇಶದಲ್ಲಿ ಬೇರು ಬಿಟ್ಟಿರುವ ಈ ಅನಿಷ್ಠಗಳನ್ನು ಹೋಗಲಾಡಿಸಲು ಬುದ್ದ, ಬಸವಣ್ಣ ಅಂಬೇಡ್ಕರ್‌ರಂತಹ ಮಹಾನ್ ನಾಯಕರು ಹೋರಾಡಿದರು 21 ನೇ ಶತಮಾನದ ಪ್ರಜಾಪ್ರಭುತ್ವ ಯುಗದಲ್ಲೂ ಅಸಮಾನತೆ ತಾಂಡವಾಡುತ್ತಿರುವುದು ಬೇಸರದ ಸಂಗತಿ. ಆದ್ದರಿಂದ ಇಂದಿನ ವಿದ್ಯಾವಂತ ಯುವ ಜನತೆ ಸಮಾಜಕ್ಕೆ ಅಂಟಿರುವ ಈ ಜಾಡ್ಯವನ್ನು ಕಿತ್ತೊಗೆಯಲು ಶ್ರಮಿಸ ಬೇಕು ಎಂದರು. ಶಿಕ್ಷಕಿ ವಾಣಿಘಟ್ಟಿ ಮಾತನಾಡಿ, ಕನಕದಾಸರು ಜಾತಿ ತಾರತಮ್ಯ ಹೋಗಲಾಡಿಸಲು ಶ್ರಮಿಸಿದ ಮಹಾನ್ ನಾಯಕರ ಜೀವನ ಇಂದಿಗೂ ಪ್ರಸ್ತುತವಾಗಿದೆ ಎಂದರು. ಪಾರ್ವತಿ, ಸುಲೋಚನಾ, ಮಂಜುಳಾ, ವೇದಾವತಿ, ಲೋಕೇಶ್, ಸೋಮೇಗೌಡ, ಎಸ್.ಎನ್. ಸತೀಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement