ಇಂದು ಮಾಜಿ ಪ್ರಧಾನಿ ಭೇಟಿ
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನ.23 ರಂದು ಹಾಸನ ನಗರಕ್ಕೆ ಆಗಮಿಸಿ ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ನಂತರ ಸಂಜೆ ಬೆಂಗಳೂರಿಗೆ ತೆರಳುವರು.
ಜಿಲ್ಲಾ ಲೋಕಾಯುಕ್ತ ಎಸ್ಪಿ ಪ್ರವಾಸ
ಹಾಸನ: ಲೋಕಾಯುಕ್ತ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ತಂಡದವರು ನ.23 ರಂದು ಅರಕಲಗೂಡು ತಾಲೂಕಿನ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1.30 ರವರೆಗೆ ನಂತರ ಹೊಳೆನರಸೀಪುರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಧ್ಯಾಹ 2ರಿಂದ ಸಂಜೆ 5.30 ರವರೆಗೆ ಭೇಟಿ ನೀಡಲಿದ್ದು, ಆ ಸಮಯದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳುನ್ನು ಸಲ್ಲಿಸಬಹುದಾಗಿರುತ್ತೆ ಎಂದು ಹಾಸನ ವಿಭಾಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
ಕಾಫಿ ಫಿಲ್ಟರ್ಗೆ ಜಡೆ ಸಿಲುಕಿ ಮಹಿಳೆ ಸಾವು
ಸಕಲೇಶಪುರ: ಕಾಫಿ ಪಲ್ಪರ್ಯಂತ್ರಕ್ಕೆ ಜಡೆ ಸಿಲುಕಿ ಮಹಿಳೆಯೊಬ್ಬರು ಧಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ದೇವರಾಜ್ ಎಂಬುವವರ ಪತ್ನಿ ಪೂಜಾ (25) ಮೃತಪಟ್ಟ ದುರ್ದೈವಿ. ಕಾಫಿ ಪಲ್ಪರ್ ಕೆಲಸ ಮಾಡುತ್ತಿದ್ದ ತನ್ನ ಪತಿಗೆ ಕುಡಿಯಲು ಕಾಫಿ ತಂದುಕೊಟ್ಟು ಹಿಂದಿರುಗುವ ಸಂದರ್ಭದಲ್ಲಿ ಪಲ್ಪರ್ ಯಂತ್ರದ ಶಾರ್ಪ್ಗೆ ಆಕೆಯ ಜಡೆ ಸಿಲುಕಿ ಬಿಡಿಸಿಕೊಳ್ಳಲಾರದೆ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.