ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಂಸಿಎಫ್ ಸುತ್ತಮುತ್ತ ಚಿರತೆ ಹಾವಳಿ

Srinivasa Murthy VN
Updated On : 23 Nov 2013, 1:58 am

ಹಾಸನ: ತಾಲೂಕು ಸಾಲಗಾಮೆ ಹೋಬಳಿ ಎಂಸಿಎಫ್ ಸುತ್ತಮುತ್ತಲ ಹಳ್ಳಿಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಿದೆ.
ಈ ಪ್ರದೇಶದಲ್ಲಿ ಮೂರು ಚಿರತೆಗಳಿದ್ದವು. ಇತ್ತೀಚೆಗೆ ಎಂಸಿಎಫ್ ಸುತ್ತಲಿನ ತಡೆಗೋಡೆಗೆ ಹೊಂದಿಕೊಂಡಂತಿರುವ ಪೊದೆಯಲ್ಲಿ ಅಡಗಿದ್ದ ಚಿರತೆಯನ್ನು ಗೋವಿಂದಪುರ ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಇನ್ನೂ ಎರಡು ಚಿರತೆಗಳು ಈ ಭಾಗದಲ್ಲಿ ಓಡಾಡಿಕೊಂಡಿವೆ. ಗೋವಿಂದಪುರ ಸಮೀಪದಲ್ಲಿ ಎತ್ತರಕ್ಕೆ ಬೆಳೆದು ನಿಂತಿರುವ ಜೋಳದ ಹೊಲಗಳಲ್ಲಿ ಎರಡು ಚಿರತೆಗಳು ಬುಧವಾರ ಕಾಣಿಸಿಕೊಂಡಿವೆ. ರೈತರು ಹೊಲ, ಗದ್ದೆಗಳಿಗೆ ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಬಹುತೇಕ ರೈತರು ತಮ್ಮ ಹೊಲಗಳಲ್ಲಿಯೇ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವುದರಿಂದ ರಾತ್ರಿ ವೇಳೆ ಹೊರಬರಲು ಭಯಪಡುವಂತಾಗಿದೆ. ಯಾವುದೇ ಪ್ರಾಣ ಹಾನಿಯಾಗುವ ಮುನ್ನ ಶಾಸಕ ಪ್ರಕಾಶ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ತಕ್ಷಣ ಈ ಎರಡು ಚಿರತೆಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಗೋವಿಂದಪುರ, ಆಲದಹಳ್ಳಿ, ತವರದೇವರಕೊಪ್ಪಲು ಮತ್ತು ಕಂಚಮಾರನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಾಫಿ ಫಿಲ್ಟರ್ ಯಂತ್ರಕ್ಕೆ ಜಡೆ ಸಿಲುಕಿ ಮಹಿಳೆ ಸಾವು
ಸಕಲೇಶಪುರ: ಕಾಫಿ ಫಿಲ್ಟರ್ ಯಂತ್ರಕ್ಕೆ ಜಡೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ದೇವರಾಜ್ ಎಂಬವರ ಪತ್ನಿ ಪೂಜಾ (25) ಮೃತಪಟ್ಟ ದುರ್ದೈವಿ. ಕಾಫಿ ಪಲ್ಪರ್ ಕೆಲಸ ಮಾಡುತ್ತಿದ್ದ ತನ್ನ ಪತಿಗೆ ಕುಡಿಯಲು ಕಾಫಿ ತಂದುಕೊಟ್ಟು ಹಿಂದಿರುಗುವ ಸಂದರ್ಭದಲ್ಲಿ ಪಲ್ಪರ್ ಯಂತ್ರದ ಶಾರ್ಪ್‌ಗೆ ಆಕೆಯ ಜಡೆ ಸಿಲುಕಿ ಬಿಡಿಸಿಕೊಳ್ಳಲಾರದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement