ಗುಡಿ, ಚರ್ಚ್, ಮಸೀದಿಗಿಂತ ಗ್ರಂಥಾಲಯ ಅವಶ್ಯ: ನವಾಬ್
ಬೇಲೂರು: ಗುಡಿ, ಚರ್ಚ್ ಮಸೀದಿ ಇವುಗಳಿಂತ ಗ್ರಂಥಲಾಯ ಅವಶ್ಯವಾಗಿದೆ. ಗ್ರಂಥಾಲಯ ವ್ಯಕ್ತಿಯ ಜ್ಞಾನ ವೃದ್ಧಿಯ ಜೊತೆಯಲ್ಲಿ ವ್ಯಕ್ತಿತ್ವದ ವಿಕಸನಕ್ಕೆ ನಾಂದಿಯಾಡುತ್ತದೆ ಎಂದು ಸಾಹಿತಿ ಬೇಲೂರು ನವಾಬ್ ಅವರು ಹೇಳಿದರು. ಅವರು ಪಟ್ಟಣದ ಗ್ರಂಥಲಾಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ದೃಶ್ಯ ಮಾಧ್ಯಮಗಳ ನಾಗಲೋಟದಲ್ಲಿ ಪುಸ್ತಕದ ಓದುವ ಅಭ್ಯಾಸ ಕಡಿಮೆಯಾಗಿದೆ. ಅನುವಾದ ಸಾಹಿತ್ಯಕ್ಕಿಂತ ಸೃಜನಶೀಲತೆಯಿಂದ ಕೂಡಿದ ಹೆಚ್ಚು ಸಾಹಿತ್ಯ ಹೊರ ಬರಲಿ ಎಂದರು.
ಪತ್ರಕರ್ತ ಹೆಬ್ಬಾಳು ಹಾಲಪ್ಪ ಮಾತನಾಡಿ, ನಾಡು ನುಡಿ ಜನಪದ ಸೊಗಡಿನ ಸಾಹಿತ್ಯ ಬರವಣಿಗೆ ಇಲ್ಲದಿರುವದು ವಿಷಾದನೀಯ ಎಂದ ಅವರು ವಿದೇಶದ ನಾಗರಿಕತೆಯನ್ನು ನಮ್ಮ ಸಾಹಿತ್ಯಕ್ಕೆ ಅನುವಾದ ಮಾಡುವ ಲೇಖಕರು ಬಹುತೇಕರು ಹುಟ್ಟಿಕೊಂಡಿದ್ದಾರೆ. ಈ ದಿಸೆಯಲ್ಲಿ ನಾಡಿನ ಓದುಗರಲ್ಲಿ ಓದುವ ಅಭಿರುಚಿ ಬೆಳೆಸಲು ಸರ್ಕಾರ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಕನ್ನಡ ಪ್ರಾದಿಕಾರಗಳು ಹೆಚ್ಚು ಕೆಲಸ ಮಾಡಬೇಕು ಎಂದು ತಿಳಿಸಿದರು.
ಬೇಲೂರು ಗ್ರಂಥಾಲಯಕ್ಕೆ ಇಲ್ಲಿಯವರೆಗೆ ಸ್ವತ: ಕಟ್ಟಡವಿಲ್ಲದೆ ಅಲೆಮಾರಿ ಗ್ರಂಥಲಾಯ ನಡೆಸುವ ಪರಿಸ್ಥಿತಿ ಒದಗಿ ಬಂದಿದೆ, ಈ ದಿಸೆಯಲ್ಲಿ ಬೇಲೂರು ಪುರಸಭೆ ಗ್ರಂಥಾಲಯಕ್ಕೆ ನಿವೇಶ ನೀಡಬೇಕು ಎಂದು ಮನವಿ ಮಾಡಿದರು.
ಪುರಸಭಾ ಮಾಜಿ ಅಧ್ಯಕ್ಷ ತೋ.ಚ.ಅನಂತಸುಬ್ಬರಾಯ ಮಾತನಾಡಿದರು. ಪತ್ರಕರ್ತ ವಾಸುದೇವಧನ್ಯ, ತಾಲೂಕು ಆರೋಗ್ಯ ಸಹಕಾರ ಸಂಘದ ಅಧ್ಯಕ್ಷ ಹಕ್ಯಿಣ್ಣಕುಮಾರ್, ಸಮಾಜಸೇವಕಿ ಸೌಭಾಗ್ಯಅಂತೋಣಿ, ತಾಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಐ.ಎನ್.ಅರುಣ್ಕುಮಾರ್, ಗ್ರಂಥಾಲಯ ಖಾಯಂ ಓದುಗ ನಾಗರಾಜು ಮತ್ತು ಗ್ರಂಥಪಾಲ ಸೋಮಶೇಖರ, ಗ್ರಂಥಪಾಲಕ ಗಣೇಶ್, ಮಂಜೇಗೌಡ, ಪತ್ರಕರ್ತ ಗಣೇಶ್, ಬಿ.ಎನ್.ಲಕ್ಷ್ಮಣ್. ಸೋಮಶೇಖರ್ ಇನ್ನು ಮುಂತಾದವರು ಇದ್ದರು.