ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಿತ್ಯ ಯಶವಂತಪುರ- ಮಂಗಳೂರು ರೈಲು ಸಂಚಾರಕ್ಕೆ ಮನವಿ

Srinivasa Murthy VN
Updated On : 23 Nov 2013, 1:29 am

ಸಕಲೇಶಪುರ: ಪ್ರತಿದಿನ ಮಂಗಳೂರು-ಯಶವಂತಪುರ ನಡುವಿನ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳವಂತೆ ನೈಋತ್ಯ ರೇಲ್ವೆ ಜನರಲ್ ಮ್ಯಾನೇಜರ್ ರಾಜೀವ್ ಭಾರ್ಗವ ಅವರಿಗೆ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. ಕಳೆದ ಮೂರು ವರ್ಷಗಳಿಂದ ಹಗಲುವೇಳೆ ಯಶವಂತಪುರ-ಮಂಗಳೂರು-ಕಾರವಾರಕ್ಕೆ ವಾರದ ಮೂರುದಿನ ಮಾತ್ರ ಪ್ರಯಾಣಿಕರ ರೈಲು ಸಂಚರಿಸುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ರೈಲು ನಿಲ್ಲಲು ಸ್ಥಳವಿಲ್ಲದಷ್ಟ ಜನಜಂಗುಳಿಯಿಂದ ತುಂಬಿದ್ದು, ಸಕಲೇಶಪುರದಿಂದ ಪ್ರಯಾಣಿಕರು ರೈಲಿಗೆ ಹೋಗಲು ಅಸಾಧ್ಯವಾಗಿದೆ. ಆದ್ದರಿಂದ ಉತ್ತಮ ಆದಾಯವಿರುವ ಈ ಮಾರ್ಗದಲ್ಲಿ ಪ್ರತಿದಿನ ಹಗಲುವೇಳೆ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳ ಬೇಕು ಎಂದು ಮನವಿ ಸಲ್ಲಿಸಲಾಯಿತು. ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾರಯಣ ಆಳ್ವ, ಸಂದೇಶ್,ರಾಜಣ್ಣ ಇನ್ನೂ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement