ಅಂತಾರಾಷ್ಟ್ರೀಯ ನೃತ್ಯ ಕಾರ್ಯಾಗಾರ
ಕ.ಪ್ರ.ವಾರ್ತೆ ಹಾಸನ ನ. 23
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಶ್ರಯದಲ್ಲಿ ಈಚೆಗೆ ನಡೆದ ಖ್ಯಾತ ಭರತನಾಟ್ಯ ಕಲಾವಿದೆ ನೃತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ವೈಜಯಂತಿ ಕಾಶಿಯವರ ನೇತೃತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ನೃತ್ಯ ಕಾರ್ಯಾಗಾರದಲ್ಲಿ ಬೇರೆ ಬೇರೆ ರಾಜ್ಯ ಮತ್ತು ಜಪಾನ್ ಕಲಾವಿದರು ಭಾಗವಹಿಸಿದ್ದ ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಖ್ಯಾತ ಭರತನಾಟ್ಯ ಕಲಾವಿದೆ ಕು. ಸ್ವಾತಿ ಪಿ ಭಾರದ್ವಾಜ್ ಭಾಗವಹಿಸಿದ್ದರು. ಕಥಕ್, ಒಡಿಸ್ಸಿ, ಮೋಹಿನಿಆಟ್ಟಂ, ಕೂಚುಪುಡಿ, ಭರತನಾಟ್ಯಕ್ಕೆ ಉಪಯುಕ್ತ ಆರೋಗ್ಯ ಮತ್ತು ಯೋಗ ಹಾಗೂ ಕೇರಳ ಪ್ರಾಂತ್ಯದ ನೃತ್ಯ ತರಬೇತಿಯನ್ನು ನವದೆಹಲಿ, ರಾಜಸ್ಥಾನ್, ಆಂಧ್ರ, ಕೇರಳದಿಂದ ಬಂದಿದ್ದ ಪ್ರಖ್ಯಾತಿ ಪಡೆದ ಹಿರಿಯ ಕಲಾವಿದರಿಂದ ತರಬೇತಿ ನೀಡಿದರು.