ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬುರ್ಖಾಧಾರಿಗಳಿಂದ ಮಾಂಗಲ್ಯ ಸರ ಕಳವು

Srinivasa Murthy VN
Updated On : 23 Nov 2013, 9:43 am

ಬೇಲೂರು: ಚಿನ್ನ ಖರೀದಿಸುವ ನೆಪದಲ್ಲಿ ಮಹಿಳೆಯರು 32 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಅಪಹರಿಸುವ ಘಟನೆ ಇತ್ತೀಚೆಗೆ ನಡೆದಿದ್ದು, ಸಿಸಿ ಟಿವಿ ಮೂಲಕ ಪತ್ತೆಯಾಗಿದೆ.
 ಪಟ್ಟಣದ  ಶುಭಾ ಜ್ಯುವೆಲರ್ಸ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಬುರ್ಖಾ ತೊಟ್ಟಿದ್ದ ನಾಲ್ವರು ಮಹಿಳೆಯರು ಅಂಗಡಿಗೆ ಭೇಟಿ ನೀಡಿ ಮದುವೆಗೆ  ಚಿನ್ನದ ಆಭರಣ ಖರೀದಿಸಲು ಬಂದಿರುವುದಾಗಿ ಹೇಳಿದರು.   ಅಂಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೇಲ್ಸ್‌ಮನ್ ಮೋಹನ್ ಬಂದ ಮಹಿಳೆಯರಿಗೆ ನಾನಾ ಬಗೆಯ ಚಿನ್ನದ ಆಭರಣವನ್ನು ತೋರಿಸಿದ್ದಾರೆ.
 ಆಭರಣ ನೋಡುವ ನೆಪದಲ್ಲಿ ಅಂಗಡಿಯ ನೌಕರನ ಕಣ್ಣು ತಪ್ಪಿಸಿ 32 ಗ್ರಾಂ ಮಾಂಗಲ್ಯ ಸರವನ್ನು ಮಹಿಳೆಯರು ಅಪಹರಿಸಿದ್ದಾರೆ. ಮಹಿಳೆಯರು ಹೋದ ಬಳಿಕ ಆಭರಣವನ್ನು ಪರಿಶೀಲಿಸಲಾಗಿ ಮಾಂಗಲ್ಯ ಸರ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
  ಈ ಬಗ್ಗೆ ಅಂಗಡಿಯಲ್ಲಿ ಅಳವಡಿಸಿರುವ ಸಿ.ಸಿ ಕ್ಯಾಮೆರಾದಲ್ಲಿ ಪರಿಶೀಲಿಸಲಾಗಿ ಬುರ್ಕಾ ತೊಟ್ಟಿದ್ದ ಮಹಿಳೆಯರು ಸರವನ್ನು ಕಳವು ಮಾಡುತ್ತಿದ್ದುದು ಕಂಡು ಬಂದಿದೆ. ಅಂಗಡಿ ಮಾಲಿಕ ಮಹಮದ್‌ಪಾಷ ಪೊಲೀಸರಿಗೆ ದೂರು ಸಲ್ಲಿಸಿದ್ದು, ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement