ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮನುಷ್ಯನನ್ನು ಬದಲಿಸುವ ಶಕ್ತಿ ಓದಿಗಿದೆ: ನಟ ರಾಮಕೃಷ್ಣ

Srinivasa Murthy VN
Updated On : 23 Nov 2013, 9:44 am

ಕ.ಪ್ರ.ವಾರ್ತೆ ಹಾಸನ ನ. 23
ಓದು ಮನುಷ್ಯನ್ನು ಬಹಳಷ್ಟು ರೀತಿಯಲ್ಲಿ ಬದಲಾಯಿಸುವ ಶಕ್ತಿ ಹೊಂದಿದೆ ಎಂದು ಖ್ಯಾತ ಚಿತ್ರ ನಟ  ರಾಮಕೃಷ್ಣ ಹೇಳಿದರು.
ಜಾವಗಲ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಸಹಯೋಗದಲ್ಲಿ ಹಿರಿಯ ಗಾಯಕರು ಮತ್ತು ಸಾಹಿತಿಗಳಿಗೆ ಅಭಿನಂದನೆ,  ಕನ್ನಡ ಗೀತ ಗಾಯನ ಹಾಗೂ ಬಾಂಧವ್ಯ ಲೋಕ  ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನೀರಿಗೂ ಮತ್ತು  ಗಿಡಕ್ಕೂ ಬಾಂಧವ್ಯವಿದ್ದು ಮಕ್ಕಳಲ್ಲಿ ಕನ್ನಡ ಭಾಷೆಯನ್ನು ಕಲಿಸಿ ನಂತರ ಬೇರೆ ಭಾಷೆಗಳನ್ನು ಕಲಿಸಬೇಕು. ಮನುಷ್ಯನ ಬದುಕು ಹಸನಾಗಲು ಮಧುರಬಾಂಧವ್ಯ ಇದ್ದರೆ ಸಾಕು ಎಂದು ನುಡಿದರು.
ಗಾಯಕ ಡಾ.  ಶಿವಮೊಗ್ಗ ಸುಬ್ಬಣ್ಣ ಮಾತನಾಡಿ, ಕನ್ನಡಿಗರಾದ ನಾವು ನವೆಂಬರ್ ಕನ್ನಡಿಗರು ಎಂಬುದಕ್ಕೆ ಸೀಮಿತವಾಗಿರುವುದು ವಿಷಾದನೀಯವೆಂದರು. ಬೇಲೂರು ಪುರಸೆ ಮಾಜಿ ಅಧ್ಯಕ್ಷ ಬಿ.ಸಿ.ಮಂಜುನಾಥ್ ಮಾತನಾಡಿ, ಜಾವಗಲ್‌ನಲ್ಲಿ ಸಾಹಿತ್ಯ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಿತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು.
ಹಾಸನದ ಎವಿಕೆ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್. ಎಲ್.ಮಲ್ಲೇಶಗೌಡ  ಮಾತನಾಡಿದರು.
ಸಾಹಿತಿ ಡಾ. ವಿಜಯ ದಬ್ಬೆ ಅವರು ಬೇಲೂರಿನ ಪುಟ್ಟ ಗ್ರಾಮ ದಬ್ಬೆಯಿಂದ ಬಂದು ಸಾಹಿತಿ, ಚಿಂತಕಿ, ಬರಹಗಾರ್ತಿಯಾಗಿ ಅಪಾರ ಕೆಲಸ ಮಾಡಿದ್ದಾರೆಂದರು.  ಸ್ತ್ರೀಪರ ಚಿಂತನೆ ಹುಟ್ಟುಹಾಕಿದ ಮೊಟ್ಟಮೊದಲ ಚಿಂತಕಿ ಮತ್ತು ಲೇಖಕಿಯಾಗಿದ್ಧಾರೆ.  ಮಹಿಳೆಯರ ಸಬಲಿಕರಣಕ್ಕೆ ಮತ್ತು  ಸಂಘಟನೆಗೆ   ಶಕ್ತಿ ತುಂಬಿ ತಮ್ಮ ಸರ್ವಸ್ವವನ್ನು ಧಾರೆಎರೆದ ಮಹಾನ್ ಚೇತನವಾಗಿದ್ದಾರೆ ಎಂದು ಹೇಳಿದರು.
ಡಾ. ಶಿವಮೊಗ್ಗ ಸುಬ್ಬಣ್ಣ ಗಾಯಕರ ಪರಂಪರೆಯ ಕಂಠಸಿರಿಯ ಸಂಕೇತವಾಗಿದ್ದಾರೆ. ಅವರ ಕಂಠಸಿರಿಸೊಬಗು, ಶ್ರೀಮಂತಿಕೆ ಇಂದಿಗೂ ಬತ್ತಿಲ್ಲ ಎಂದರು. ಕನ್ನಡದ ಸಾರ, ಸತ್ವ, ದನಿ, ಬನಿ, ಸಂಸ್ಕೃತಿ, ಸೊಬಗು ಮತ್ತು ಘನತೆಯನ್ನು ರಾಷ್ಟ್ರಮಟ್ಟಕ್ಕೇರಿಸಿದ ಧೀಮಂತ ಗಾಯಕರಾಗಿದ್ದಾರೆ ಎಂದು ತಿಳಿಸಿದರು.
ಜಾವಗಲ್ ಪ್ರಸನ್ನಕುಮಾರ್ ಮಾತನಾಡಿದರು. ಡಾ. ಶಿವಮೊಗ್ಗ ಸುಬ್ಬಣ್ಣ, ಚಿತ್ರನಟ ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಕಲ್ಲಹಳ್ಳಿ ನಾಗರಾಜು, ತಾಪಂ ಸದಸ್ಯೆ ಲಕ್ಷ್ಮೀ, ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್,  ಬೇಲೂರು ತಾಲೂಕು ಕಸಾಪ   ಅಧ್ಯಕ್ಷ ಆನಂದ್,  ಬೇಲೂರು ತಾ ಕಸಾಪ  ಅಧ್ಯಕ್ಷ ಅಡಗೂರು ಆನಂದ್, ಹೋಬಳಿ ಅಧ್ಯಕ್ಷ ಶಾಂತಕುಮಾರ್, ಪಿಎಸ್‌ಐ ನವೀನ್, ಅನಿಲ್‌ಕುಮಾರ್ ನೇರ್ಲಿಗೆ ಕರುಣಾಕರ ಕೃಷ್ಣಮೂರ್ತಿ ಇದ್ದರು.
ಡಾ. ಶಿವಮೊಗ್ಗ ಸುಬ್ಬಣ್ಣ, ತಮ್ಮ ಇಳಿವಯಸ್ಸಿನಲ್ಲಿಯೂ ಬಾರೀಸು ಕನ್ನಡ ಡಿಂಡಿಮ, ಕೋಡಗಾನ ಕೋಳಿನುಂಗಿತ ಹಾಡುಗಳನ್ನು ಮಧುರ ಕಂಠದಲ್ಲಿ ಹಾಡಿ ರಂಜಿಸಿದರು. ಸುಧೀರ್, ಎಂ.ಎಸ್.ಸುಧೀರ್, ಮಹೇಶ್, ಪ್ರಿಯಾದರ್ಶನ್, ಕುಮಾರಿ ಶೃತಿ ಪಕ್ಕವಾದ್ಯ ಸಹಕಾರ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement