ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಸಮಾಜದಲ್ಲಿ ಓದುವ ಹವ್ಯಾಸ ಕ್ಷೀಣ'

Srinivasa Murthy VN
Updated On : 23 Nov 2013, 9:41 am

ಹಾಸನ: ಸಮಾಜದಲ್ಲಿಂದು ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ನಾಗೇಶ್ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ ಡಾ.ನಾಗೇಶ್ ವಿಷಾದಿಸಿದರು.
ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಹೇಮವಾಣಿ ಪ್ರಕಾಶನ, ಸಾರ್ವಜನಿಕ ಗ್ರಂಥಾಲಯ  ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಠ್ಯೇತರ ಪುಸ್ತಕಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಇಂಟರ್‌ನೆಟ್‌ನಲ್ಲಿ ಶೆ.16ರಷ್ಟು ಮಾತ್ರ ಮಾಹಿತಿ ಲಭ್ಯವಿರುತ್ತದೆ ಅದರಲ್ಲೂ ಶೇ.1ರಷ್ಟು ಸಮಾಜಘಾತಕ ವಿಚಾರಗಳಿದ್ದು ಎಚ್ಚರ ಅಗತ್ಯ. ಗ್ರಂಥಾಲಯ ವ್ಯವಸ್ಥೆಯ ಬಗ್ಗೆ ಗಮನ ಇದ್ದರೂ ಗ್ರಂಥಗಳ ಅಧ್ಯಯನ ಮುಖ್ಯವಾಗಿದೆ, ಜಿಲ್ಲೆಯಲ್ಲೇ ಪ್ರಥಮಬಾರಿಗೆ ಸುಸಜ್ಜಿತ ಕಟ್ಟಡವು ತಾಲೂಕಿನಲ್ಲಿ ಪುಟ್ಟಣ್ಣನವರ ಶ್ರಮದಿಂದ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಹಸಿಲ್ದಾರ್ ಡಾ.ಎಚ್.ಸಿ.ನಾಗರಾಜ್ ಮಾತನಾಡಿ, ಅಜ್ಞಾನಕ್ಕಿಂತ ಮಿಗಿಲಾಗಿದ್ದು ಯಾವುದು ಇಲ್ಲ, ಪ್ರಚಲಿತ ವಿದ್ಯಮಾನಗಳ ಅರಿವಿಗೆ ವೃತ್ತಪತ್ರಿಕೆಗಳು ಪೂರಕವಾಗಿದೆ. ತಾವು ಪತ್ರಿಕೆಗಳ ಸಹಾಯದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಿದ್ದೇನೆ. ಗ್ರಂಥಾಲಯದ ಉಪಯೋಗ ಸಮಾಜದ ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ವರದಾನವಾಗಿದೆ ಎಂದರು.
ಹಾಸನ ಕೃಷಿ ಮಹಾವಿದ್ಯಾಲಯದ ಗ್ರಂಥಪಾಲ ಶಿವಕೃಷ್ಣ ಮಾತನಾಡಿ ಪ್ರತಿಯೊಬ್ಬ ಯಶಸ್ವಿ ಮನುಷ್ಯನ ಹಿಂದೆ ಗ್ರಂಥಾಲಯದ ಕೊಡುಗೆ ಇರುತ್ತದೆ ಎಂದರು. ಜಿಲ್ಲಾ ಮುದ್ರಣಕಾರರ ಸಂಘದ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಪುಟ್ಟಣ್ಣ, ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಭಾರತಿನಾಗೇಶ್, ಗ್ರಂಥಾಲಯ ಸಹಾಯಕ ದೇವರಾಜ್, ಪ್ರಾಂಶುಪಾಲೆ ಸುಜಾಫಿಲಿಪ್ಸ್ ಉಪಸ್ಥಿತರಿದ್ದರು. ಮಕ್ಕಳಿಂದ ಭರತನಾಟ್ಯ ನಡೆಯಿತು, ಸಪ್ತಾಹದ ಅಂಗವಾಗಿ ನಡೆದ ನಾನಾ ಸ್ಪರ್ಧಾ ವಿಜೇತರಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement