ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಿಂಟಿಲಾ ಅಕಾಡೆಮಿ ಪ್ರಾರಂಭ

Srinivasa Murthy VN
Updated On : 23 Nov 2013, 9:40 am

ಹಾಸನ: ವೃತ್ತಿಪರ ಕೋರ್ಸ್‌ಗಳಿಗಿಂತ ವಿಶಿಷ್ಟವಾದ ಕೆಲವೊಂದು ಕೋರ್ಸ್‌ಗಳನ್ನು ಒಳಗೊಂಡಂತಹ ಸಿಂಟಿಲಾ ಅಕಾಡೆಮಿ ಎಂಬ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಮುಖ್ಯಸ್ಥ ಡಾ.ಎಸ್.ಎನ್.ನಾಗೇಂದ್ರ ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆಯನ್ನು ಪಡೆದಿರುವ ನೂತನ ಕಾಲೇಜಿನಲ್ಲಿ  ವಿಶಿಷ್ಟವಾದ ಇಂಟಿಗ್ರೇಟೆಡ್ ಎಂಬಿಎನಲ್ಲಿ ಫಾರ್ಮಸಿಟಿಲ್ ಮ್ಯಾನೇಜ್‌ಮೆಂಟ್, ಎಂಎಸ್ಸಿಯಲ್ಲಿ ಕ್ಯಾನ್ಸೆರ್ ಬಯಾಲಜಿ ಎಂಬ ಯುನಿಕ್ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಎಂಜಿನಿಯರಿಂಗ್ ಹಾಗೂ ಮೆಡಿಕಲ್ ವೃತ್ತಪರದತ್ತ ಹೆಚ್ಚಾಗಿ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ. ಅದರ ಜೊತೆಗೆ ಈ ರೀತಿಯ ಯುನಿಕ್ ಕೋರ್ಸ್‌ಗಳನ್ನು ಸಹ ಮಾಡಿ ಜೀವನವನ್ನು ಉಜ್ವಲಗೊಳಿಸಲು ಸಾಧ್ಯವಾಗುತ್ತದೆ ಅನ್ನೋದನ್ನು ತೋರಿಸಲು ಸಂಸ್ಥೆ ಮುಂದಾಗಿದೆ ಎಂದರು.
5 ವರ್ಷಗಳ 10 ಸೆಮಿಸ್ಟರ್ ಕೋರ್ಸ್‌ಗೆ 8 ಲಕ್ಷ ರು., ಎಂಎಸ್ಸಿ ಕೋರ್ಸ್ ಗೆ 3.6 ಲಕ್ಷ ರು. ಮತ್ತು ಎಂಬಿಎ ಕೋರ್ಸ್‌ಗೆ 3 ಲಕ್ಷ ರು. ಶುಲ್ಕ ನಿಗದಿ ಪಡಿಸಲಾಗಿದೆ ಎಂದರು. ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ನರೇಂದ್ರ, ರಫೀಕ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement