'ಅಧಿಕಾರ, ಹಣದ ಹಿಂದೆ ಹೋಗದೆ ಶ್ರಮಿಸಿ'
ಕನ್ನಡಪ್ರಭ ವಾರ್ತೆ ಆಲೂರು ನ. 24
ಅಧಿಕಾರ, ಹಣದ ಹಿಂದೆ ಹೋಗದೆ ಶ್ರಮಿಸಿದಾಗ ಮಾತ್ರ ಸಹಕಾರ ಸಂಸ್ಥೆಗಳ ಅಭಿವೃದ್ಧಿ ಸಾಧ್ಯವೆಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಎಚ್‌ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ, ತಾಲೂಕಿನ ಎಲ್ಲಾ ಸಹಕಾರ ಸಂಸ್ಥೆಗಳು ಹಾಗೂ ಸಹಕಾರ ಆಡಳಿತ ಮತ್ತು ಲೆಕ್ಕ ಪರಿಶೋಧನಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 60ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಅವರು ಮಾತನಾಡಿದರು.
ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ಯಾವ ದೇಶ ಸಹಕಾರ ಕ್ಷೇತ್ರದಲ್ಲಿ ಮುಂದಿವೆಯೋ ಆ ದೇಶ ಅಭಿವೃದ್ಧಿ ಹೊಂದಿರುವ ದೇಶಗಳಾಗಿವ.ೆ ರಾಜಕಾರಣ ಹೊರಗಿಟ್ಟು ಒಟ್ಟಾಗಿ ಸಹಕಾರಿಯಾಗಿ ಕೆಲಸ ಮಾಡಬೇಕಾಗಿದೆಯೆಂದ ಅವರು ವ್ಯವಸಾಯಕ್ಕೆ ಜನ ಸಿಗದೆ ಜಮೀನುಗಳನ್ನು ಹಾಳು ಬಿಟ್ಟಿರುವಂತಾಗಿದ್ದು ರೈತರು ಬತ್ತ ಬೆಳೆಯುವುದನ್ನೇ ಮರೆತಿದ್ದಾರೆ ಈ ನಿಟ್ಟಿನಲ್ಲಿ ಬತ್ತದ ನಾಟಿ ಹಾಗೂ ಕೊಯ್ಲು ಮಾಡುವ ಯಂತ್ರಗಳ ಸಹಾಯದಿಂದ ವ್ಯವಸಾಯವನ್ನು ಸುಲಭವಾಗಿ ಮುಂದುವರೆಸಬಹುದಾಗಿದ್ದು, ಸಹಕಾರಿ ಸಂಘಗಳು ಈ ಯಂತ್ರಗಳನ್ನು ಖರೀದಿಸಿ ಬಾಡಿಗೆ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆಂದರು.
ವಿಧಾನ ಪರಿಷತ್ ಸದಸ್ಯ ಹಾಗೂ ಸಹಕಾರಿ ರತ್ನ ಪುರಸ್ಕೃತ ಪಟೇಲ್ ಶಿವರಾಮ್, ಸಹಕಾರಿ ರತ್ನ ಪುರಸ್ಕೃತ ರಾಜ್ಯ ಸಹಕಾರ ಮಹಾಮಂಡದ ನಿರ್ದೇಶಕ ಆರ್.ಟಿ.ದ್ಯಾವೇಗೌಡ, ಹಾಸನ ಜಿಲ್ಲಾ ಸಹಕಾರ ಒಕ್ಕೂಟ, ಅಧ್ಯಕ್ಷ ಕಾರ್ಲೆ ಇಂದ್ರೇಶ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಎಚ್.ಪಿ.ಮೋಹನ್ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷ ಕಬ್ಬಿನಹಳ್ಳಿ ಜಗದೀಶ್ ಮಾತನಾಡಿದರು.
ತಾಪಂ ಅಧ್ಯಕ್ಷೆ ಯಶೋಧ ಹರೀಶ್, ಎಚ್.ವಿ.ಶಿವರಾಮೇಗೌಡ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಚ್.ಎಸ್.ಜಯರಾಮ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ತೌಫಿಕ್, ಎನ್.ಪಿ.ಜಗದೀಶ್ ಮುಂತಾದವರಿದ್ದರು.
ಸಹಕಾರಿ ರತ್ನ ಪುರಸ್ಕೃತ ರಾಜ್ಯ ಸಹಕಾರ ಮಹಾಮಂಡದ ನಿರ್ದೇಶಕ ಆರ್.ಟಿ.ದ್ಯಾವೇಗೌಡ ಹಾಗೂ ಭೀಮೇಗೌಡರನ್ನು ಸನ್ಮಾನಿಸಲಾಯಿತು.