ಕಾಫಿ ಪಲ್ಪರ್ ಘಟಕಕ್ಕೆ ಬೀಗ
ಸಕಲೇಶಪುರ: ಕಸಬಾ ಹೋಬಳಿ ಇಬ್ಬಡಿ ಗ್ರಾಮದ ಧರಣೇಶ್ ಎಂಬವರು ಗ್ರಾಮದ ಮಧ್ಯಭಾಗದಲ್ಲಿ ಕಾನೂನು ಗಾಳಿಗೆ ತೂರಿ ಕಾಫಿ ಪಲ್ಪರ್ ಘಟಕ ಸ್ಥಾಪನೆ ಮಾಡಿದ್ದು, ತಹಸೀಲ್ದಾರ್ ಆದೇಶದಂತೆ ಅಧಿಕಾರಿಗಳು ಘಟಕಕ್ಕೆ ಬೀಗ ಹಾಕಿದ್ದಾರೆ.
ಗ್ರಾಮದಲ್ಲಿ ಪರಿಸರ ನೈರ್ಮಲ್ಯದಿಂದ ಉತ್ತಮ ಗಾಳಿ ಮತ್ತು ನೀರು ಇಲ್ಲದೆ ಜನ, ಜಾನುವಾರಿಗೆ ಕಿರಿಕರಿ ಆಗುತ್ತಿದ್ದು ಇದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ರಸ್ತೆ ಮಧ್ಯೆ ನೀರು ಹರಿಯಲು ಚರಂಡಿ ನಿರ್ಮಿಸಿ ಸಂಚರಿಸಲು ತೊಂದರೆಯಾಗುತ್ತಿತ್ತು ಎಂದು ಗ್ರಾಮಸ್ಥರು ದೂರು ನೀಡಿದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.