ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಾನುವಾರು ಜಾತ್ರೆ ನಿಷೇಧ

Srinivasa Murthy VN
Updated On : 25 Nov 2013, 12:10 pm

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಹೆಚ್ಚುತ್ತಿರುವ ಕಾಲುಬಾಯಿರೋಗ ಹಿನ್ನೆಲೆಯಲ್ಲಿ ಡಿ.23ರವರೆಗೆ ಪಟ್ಟಣದ ಎಪಿಎಂಸಿ ಆವರಣದ ಶನಿವಾರದ ಜಾನುವಾರು ಸಂತೆಯನ್ನು ನಿಷೇಧಿಸಲಾಗಿದೆ ಎಂದು ತಹಸೀಲ್ದಾರ್ ಡಾ. ಎಚ್.ಸಿ.ನಾಗರಾಜ್ ಹಾಗೂ ಎಪಿಎಂಸಿ ಅಧ್ಯಕ್ಷ ಎ.ಎನ್.ಶ್ರೀನಿವಾಸ್, ಪಶುಸಂಗೋಪನಾ ಇಲಾಖೆ ಸಹನಿರ್ದೇಶಕ ನಾಗರಾಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಬಗ್ಗೆ ನಾಗರಾಜ್ ಮಾತನಾಡಿ, ತಾಲೂಕಿನ ಗಡಿಭಾಗದಲ್ಲಿ ರಾಸುಗಳಿಗೆ ಈ ರೋಗ ಹರಡಿರಬಹುದೆಂದು ಶಂಕಿಸಿ ರೋಗ ತಡೆಗಟ್ಟಲು ಪಶುವೈದ್ಯಕೀಯ ಇಲಾಖೆಯಿಂದ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದಿಂದ ಅಗತ್ಯ ವೈದ್ಯರು ಅದಕ್ಕೆ ವೈದ್ಯಕೀಯ ಸೌಲಭ್ಯ, ಔಷಧಿಗಳನ್ನು ಪಡೆಯಲಾಗುತ್ತಿದೆ. ಮೃತಪಟ್ಟ 63 ರಾಸುಗಳ ಪೈಕಿ 39 ರಾಸುಗಳ ಶವಪರೀಕ್ಷೆ ನಡೆಸಿ ಪರಿಹಾರ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು. ತಾಲೂಕಿನ 91 ಹಳ್ಳಿಗಳಲ್ಲಿ 331 ರಾಸುಗಳಿಗೆ ರೋಗ ಕಂಡುಬಂದಿದೆ. 63 ರಾಸುಗಳು ಮೃತಪಟ್ಟಿವೆ. ತಾಲೂಕಿನ ಗಡಿಭಾಗದಲ್ಲಿ ಲಸಿಕೆ ಹಾಕಲಾಗುತ್ತಿದೆ. ಸಾಂಕಾಮಿಕ ರೋಗ ಇದಾಗಿದ್ದು ರೈತರು ಸಹಕಾರ ನೀಡಬೇಕು. ವಡ್ಡರಹಳ್ಳಿಯಲ್ಲಿ 4, ಬೇಡಿಗನಹಳ್ಳಿಯಲ್ಲಿ 7 ರಾಸುಗಳು ಮೃತಪಟ್ಟಿವೆ. ಜಿಲ್ಲೆಯಲ್ಲಿ 146 ರಾಸುಗಳು ಮೃತಪಟ್ಟಿವೆ ಎಂದು ವಿವರಿಸಿದರು. ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಮಂಜುನಾಥ್ ಇದ್ದರು.

ಕಾಲು ಬಾಯಿ ಜ್ವರ; ಸಂತೆ ಸ್ಥಗಿತ
ಅರಸೀಕೆರೆ: ತಾಲೂಕಿನ ಕಸಬಾ ಹೋಬಳಿಯ ಗುತ್ತಿನಕೆರೆ ಗ್ರಾಮದಲ್ಲಿ ಜಾನುವಾರಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ಸುಮಾರು 7 ಜಾನುವಾರು ಮರಣ ಹೊಂದಿರುವ ಕಾರಣ ಅಪರ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅವರ ಮುಂದಿನ ಆದೇಶ ಬರುವ ತನಕ ತಾಲೂಕಿನಲ್ಲಿ ನಡೆಯುವ ಎಲ್ಲ ಜಾನುವಾರು ಸಂತೆಗಳನ್ನು ಸ್ಥಗಿತಗೊಳಿಸುವಂತೆ ತಹಸೀಲ್ದಾರ್ ಕೇಶವಮೂರ್ತಿ ತಿಳಿಸಿದ್ದಾರೆ. ಕಾಲುಬಾಯಿ ಜ್ವರದ ರೋಗ ಲಕ್ಷಣಗಳು ಕಂಡು ಬಂದಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕೆಂದು  ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement