ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪೂಜಾಸ್ಥಳಕ್ಕೆ ಹಾನಿ; ಪ್ರತಿಭಟನೆ

Srinivasa Murthy VN
Updated On : 25 Nov 2013, 12:09 pm

ಸಕಲೇಶಪುರ: ಒಂದು ಕೋಮಿನ ಪೂಜಾಸ್ಥಳವನ್ನು ಧ್ವಂಸಗೊಳಿಸಿದ್ದರಿಂದಾಗಿ ತಾಲೂಕಿನ ಕೆಂದನಮನೆ ಗ್ರಾಮದಲ್ಲಿ ಶನಿವಾರ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಚೌಡೇಶ್ವರಿ ನೆಲೆಸಿರುವ ಬೃಹತ್ ಆಲದ ಮರದ ಸಮೀಪ ಗ್ರಾಮದ ವಿನ್ಸೆಂಟ್ ಡಿಸೋಜಾ ಎಂಬವರು ಜೆಸಿಬಿ ಯಂತ್ರ ಬಳಸಿ ಹೊಂಡ ನಿರ್ಮಿಸಿದ್ದರಿಂದಾಗಿ ಪೂಜಾಸ್ಥಳ ಹಾನಿಗೊಂಡಿದೆ ಎಂದು ಆರೋಪಿಸಿದ ಗ್ರಾಮಸ್ಥರು ಆರೋಪಿಯನ್ನು ಬಂಧಿಸಬೇಕು. ಹಾಗೂ ದೇವರ ಪೂಜಾ ಸ್ಥಳವನ್ನು ಯಥಾರೀತಿಯಲ್ಲಿ ನಿರ್ಮಿಸಬೇಕು ಎಂದು ಬಾಗೆ ಗ್ರಾಪಂ ಅಧ್ಯಕ್ಷ ನೀಲಕಂಠ ಎಂಬವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದರಿಂದ ಹೆಚ್ಚುವರಿ ಪೊಲೀಸ್ ತುಕಡಿಯನ್ನು ಗ್ರಾಮದಲ್ಲಿ ನಿಯೋಜಿಸುವ ಮೂಲಕ ಗ್ರಾಮದಲ್ಲಿ ಶಾಂತಿ ಹದಗೆಡದಂತೆ ತಾಲೂಕು ಆಡಳಿತ ಮುಂಜಾಗ್ರತೆ ವಹಿಸಿತ್ತು. ನಂತರ ಗ್ರಾಮಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ತೆರಳಿ ಸ್ಥಳ ತನಿಖೆ ನಡೆಸಿ ದೇವರ ಪೂಜಾ ಸ್ಥಳವಿರುವ ಜಾಗ ಗ್ರಾಮಠಾಣ ಎಂಬುದನ್ನು ಪತ್ತೆ ಹಚ್ಚಿದ ನಂತರ ಪೂಜಾ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಹೊಂಡವನ್ನು ಮುಚ್ಚಿ ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾಮಕ್ಕೆ ಶಾಸಕ ಎಚ್.ಕೆ ಕುಮಾರಸ್ವಾಮಿ, ತಹಸೀಲ್ದಾರ್ ಪಾರ್ವತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಂದು ಕನ್ನಡ ರಾಜ್ಯೋತ್ಸವ ಆಚರಣೆ
ಜಾವಗಲ್: ಇಲ್ಲಿನ ಬಿಸಿಸಿ ಗೆಳೆಯರ ಬಳಗ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ನ.25ರಂದು 58ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಬೆಳಗ್ಗೆ 9ಕ್ಕೆ ಪಟ್ಟಣದ ಎಲ್ಲ ಶಾಲಾಮಕ್ಕಳ ಆಕರ್ಷಕ ಸ್ತಬ್ದ ಚಿತ್ರಗಳು, ಡೊಳ್ಳುಕುಣಿತ, ತಮಟೆವಾದ್ಯ, ಕಂಸಾಳೆ, ಸೇರಿದಂತೆ ವಿವಿಧ ಜಾನಪದ ನೃತ್ಯ ಹಾಗೂ ಪಟಾಕಿ ಸಿಡಿಮದ್ದುಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 5ಕ್ಕೆ ಬಯಲು ರಂಗಮಂದಿರದಲ್ಲಿ ಕನ್ನಡ ರಾಜ್ಯೋತ್ಸವ ಉದ್ಘಾಟನಾ ಸಮಾರಂಭ ಮತ್ತು ನಾನಾ ಶಾಲಾ ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಎಂದು ಬಳಗದ ಅಧ್ಯಕ್ಷ ಜೆ.ಜಿ.ಧರ್ಮೇಂದ್ರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement