ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಳ್ಳತನಕ್ಕೆ ಯತ್ನ: ಧರ್ಮದೇಟು

Srinivasa Murthy VN
Updated On : 26 Nov 2013, 1:03 am

ಹಾಸನ: ಮನೆ ಕಳವು ಮಾಡುತ್ತಿದ್ದ ಕಳ್ಳನನ್ನು ಹಿಡಿದ ಸ್ಥಳೀಯರು, ಅರೆಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹಾಸನ ಹೊರವಲಯದ ಬೂವನಹಳ್ಳಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಅದೇ ಊರಿನ ಕಿರಣ್ ಎಂಬಾತನೇ ಮಾಡಬಾರದ ಕೆಲಸ ಮಾಡಲು ಹೋಗಿ, ಧರ್ಮದೇಟು ತಿಂದ ಚೋರ. ಗ್ರಾಮದ ವೆಂಕಟೇಶ್ ಎಂಬುವರು ಮನೆಗೆ ಬೀಗ ಹಾಕಿಕೊಂಡು ಜಮೀನು ಬಳಿ ತೆರಳಿದ್ದರು. ಹೋಗುವ ಮುನ್ನ ಕೀಯನ್ನು ಮನೆಯ ಮುಂಭಾಗ ಇಟ್ಟು ಹೋಗಿದ್ದರು. ಇದನ್ನು ಮೊದಲೇ ನೋಡಿಕೊಂಡಿದ್ದ ಕಿರಣ್, ಕೀ ತೆಗೆದುಕೊಂಡು ಮನೆ ಬೀಗ ತೆಗೆದು, ಒಳಗೆ ಹೋಗುತ್ತಿದ್ದಂತೆಯೇ ಬಾಗಿಲು ಚಿಲಕ ಹಾಕಿಡಿಕೊಂಡು ಸುಮಾರು 4 ಸಾವಿರ ನಗದು ದೋಚಿ ಯಾರಿಗೂ ಕಾಣದಂತೆ ಓಡಿ ಹೋಗಲು ಯತ್ನಿಸಿದ್ದ. ಸುದ್ದಿ ತಿಳಿದ ನೆರೆಯವರು ಮನೆಯ ಬಳಿ ಬರುತ್ತಿದ್ದಂತೆಯೇ ಓಡಿ ಹೋಗಲು ಯತ್ನಿಸಿದ ಕೂಡಲೇ ಆತನಕ್ಕೆ ಹಿಡಿದು ಅರೆಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿ ನಂತರ ಬಡಾವಣೆ ಪೊಲೀಸರಿಗೆ ಒಪ್ಪಿಸಿದರು. ಈ ಹಿಂದೆ ಬೈಕ್ ಕಳವು ಪ್ರಕರಣದಲ್ಲಿ ಸಿಕ್ಕಿಬಿದ್ದು, ಕೆಲ ದಿನ ಜೈಲು ವಾಸ ಅನುಭವಿಸಿ ವಾರದ ಹಿಂದಷ್ಟೇ ಬಿಡುಗಡೆಯಾಗಿದ್ದ ಕಿರಣ್, ಹಳೇ ಚಾಳಿ ಬಿಡದೆ ಧರ್ಮದೇಟು ತಿಂದಿದ್ದಾನೆ. ಈತನಿಗೆ ತಕ್ಕ ಶಾಸ್ತಿ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement